ಶ್ರೀನಿವಾಸ ವೈದ್ಯ

Author : ಮಾಲತಿ ಪಟ್ಟಣಶೆಟ್ಟಿ

Pages 88

₹ 60.00




Year of Publication: 2012
Published by: ನವಕರ್ನಾಟಕ ಪ್ರಕಾಶನ
Address: ನವಕರ್ನಾಟಕ ಪಬ್ಲಿಕೇಷನ್ಸ್‌ (ಪ್ರೈ.) ಲಿ. ಎಂಬೆಸಿ ಸೆಂಟರ್, ನಂ.11, ಕ್ರೆಸೆಂಟ್ ರಸ್ತೆ, ಬೆಂಗಳೂರು-560 001
Phone: (080-22203580/01/02)

Synopsys

’ಹಳ್ಳ ಬಂತು ಹಳ್ಳ’, ’ಮನಸುಖರಾಯನ ಮನಸು’ ಮುಂತಾದ ಕೃತಿಗಳ ಮೂಲಕ ಕನ್ನಡ ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸಿದ ಶ್ರೀನಿವಾಸ ವೈದ್ಯ ’ಅಪರಂಜಿ’ ಪತ್ರಿಕೆಗೆ ಹಾಸ್ಯ ಲೇಖನಗಳನ್ನು ಬರೆಯುತ್ತಿದ್ದರು ಎಂದರೆ ಅಚ್ಚರಿ ಎನಿಸಬಹುದು. 

ಬ್ಯಾಂಕ್‌ ಉದ್ಯೋಗಿಯಾಗಿದ್ದ ವೈದ್ಯ ಅವರು ಮುಂಬೈ, ಗೋವೆ, ಚೆನ್ನೈನಲ್ಲಿ ಸೇವೆ ಸಲ್ಲಿಸಿ ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ೧೯೯೭ರಲ್ಲಿ ಅವರು ಸ್ಥಾಪಿಸಿದ್ದು ’ಸಂವಾದ’ ಟ್ರಸ್ಟ್. 

’ಹಳ್ಳ ಬಂತು ಹಳ್ಳ’ ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಮತ್ತು ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳು ದೊರೆತಿವೆ. 

ವೈದ್ಯ ಅವರ ಬದುಕನ್ನು  ಈ ಕೃತಿ ಮೂಲಕ ಲೇಖಕಿ ಮಾಲತಿ ಪಟ್ಟಣಶೆಟ್ಟಿ ಪರಿಚಯಿಸಿಕೊಟ್ಟಿದ್ದಾರೆ. 

About the Author

ಮಾಲತಿ ಪಟ್ಟಣಶೆಟ್ಟಿ
(26 December 1940)

ಕೊಲ್ಲಾಪುರದಲ್ಲಿ ಜನಿಸಿದ ಮಾಲತಿ ಪಟ್ಟಣಶೆಟ್ಟಿ ಅವರ ತಾಯಿ ಶಿವಗಂಗೆ. ಮೂರೇ ವರ್ಷದಲ್ಲಿ ತಾಯಿಲ್ಲದ ತಬ್ಬಲಿಯಾದರು. ತಂದೆ ಶಾಂತೇಶ ಕೋಟೂರ. ಧಾರವಾಡದ ಹೆಣ್ಣುಮಕ್ಕಳ ತರಬೇತಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದರು. ಕರ್ನಾಟಕ ಕಾಲೇಜಿನಲ್ಲಿ ಪದವಿ ಶಿಕ್ಷಣ. ಹಾಗೂ ಕರ್ನಾಟಕ ವಿಶ್ವವಿದ್ಯಾಲಯದಿಂದ ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ (ಎಂ.ಎ.) ಪಡೆದರು. ಬೆಳಗಾವಿಯ ರಾಣಿ ಪಾರ್ವತಿದೇವಿ ಪದವಿ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ವೃತ್ತಿ ಜೀವನ ಆರಂಭಿಸಿದ ಅವರು ಧಾರವಾಡದ ಜೆ.ಎಸ್.ಎಸ್. ಕಾಲೇಜು ಸೇರಿದರು. ಅಲ್ಲಿಯೇ ವಿಭಾಗದ ಮುಖ್ಯಸ್ಥರಾಗಿ 1998ರಲ್ಲಿ ನಿವೃತ್ತರಾದರು. ಅಂತರಂಗ ನಾಟಕ ತಂಡದ ಜೊತೆಗೆ ಗುರುತಿಸಿಕೊಂಡಿದ್ದ ಅವರು ನಾಟಕಗಳಲ್ಲಿ ಸ್ತ್ರೀ ಪಾತ್ರಗಳಲ್ಲಿ ನಟಿಸುತ್ತಿದ್ದರು. ಬಾ ...

READ MORE

Related Books