ಶ್ರೀರಾಮಕಥಾಮೃತ

Author : ಪಿ. ವಿ. ನಾರಾಯಣ

Pages 544

₹ 400.00




Year of Publication: 2020
Published by: ವಸಂತ ಪ್ರಕಾಶನ
Address: # 360, 10ನೇ ಬಿ ಮುಖ್ಯರಸ್ತೆ, ಕಾಸ್ಮೊಪಾಲಿಟಿನ್ ಕ್ಲಬ್ ಹತ್ತಿರ, 3ನೇ ಬ್ಲಾಕ್, ಜಯನಗರ, ಬೆಂಗಳೂರು, ಕರ್ನಾಟಕ - 560011.
Phone: 080-40917099 / 7892106719

Synopsys

ಕನ್ನಡದಲ್ಲಿಯೇ ಅತ್ಯಂತ ದೊಡ್ಡ ಕಾವ್ಯವಾದ ಶ್ರೀರಾಮಕಥಾಮೃತ' ಎಂಬ ಹೆಸರಿನ ವಾರ್ಧಕ ಷಟ್ಟದಿಗಳ ಮಹಾಕಾವ್ಯವು, ಹದಿನೆಂಟನೆಯ ಶತಮಾನದಲ್ಲ, ಅಂದರೆ ಎರಡನೆಯ ಕೃಷ್ಣರಾಜ-ನಂಜರಾಜ- ಹೈದರಾಲಿಗಳ ಕಾಲದಲ್ಲಿದ್ದ ಪ್ರಧಾನ ವೆಂಕಪ್ಪಯ್ಯನಿಂದ ರಚಿತವಾದುದು. ಈ ಕಾವ್ಯದ ಸುಮಾರು ಅರವತ್ತು ಭಾಗವಷ್ಟೇ ಮದ್ರಾಸ್ ಸರ್ಕಾರದಿಂದ ಪ್ರಕಟವಾಗಿದ್ದು, ಇತ್ತೀಚಿನವರೆಗೆ ಕಾವ್ಯವು ಪೂರ್ತಿ ಪ್ರಕಟವಾಗಿರಲಿಲ್ಲ, ಆದರೆ ಉಆದ ಭಾಗವೂ ಈಚೆಗೆ ಪ್ರಕಟವಾಗಿ, ಈ ಮಹಾಕಾವ್ಯವನ್ನು ಪಿ.ವಿ. ನಾರಾಯಣ ಅವರು ಅಧುನಿಕ ಕನ್ನಡಕ್ಕೆ ಇಡಿಯಾಗಿ ತಂದಿದ್ದು, ಅದನ್ನು ವಸಂತ ಪ್ರಕಾಶನವು ಎರಡು ಸಂಪುಟಗಳಲ್ಲಿ ತನ್ನ ಹೆಮ್ಮೆಯ ಪ್ರಟಣೆಯಾಗಿ ಹೊರತರುತ್ತಿರುವುದು ರಾಮಾಯಣ ಪ್ರಿಯರಿಗೆ ಸಂತಸ ತರುವಂತಹುದಾಗಿದೆ. ಒಟ್ಟಂದದಲ್ಲಿ, ಈ ಕಾವ್ಯವು ವಾಲ್ಮೀಕಿ ರಾಮಾಯಣವನ್ನು ಅನುಸರಿಸಿದ್ದರೂ, ವೆಂಕಪ್ಪಯ್ಯನು ಒಟ್ಟು ಕಾವ್ಯವನ್ನು ಸಾಂಖ್ಯತತ್ವದ ನೆಲೆಯಲ್ಲಿ ರಚಿಸಿರುವುದು ಕನ್ನಡಕ್ಕೆ ಹೊಸತಾಗಿರುವುದಲ್ಲದೆ, ಕವಿಯ ವೈಶಿಷ್ಟ್ಯವನ್ನೂ ಹಿರಿಮೆಯನ್ನೂ ಸಾರುತ್ತದೆ. ಇಂತಹ ಮಹತ್ವಪೂರ್ಣ ಮಹಾಕಾವ್ಯದ ಪ್ರಸ್ತುತ ಗದ್ಯಕಥನವು ಕನ್ನಡ ನಾಡಿನ ಓದುಗರಿಗೆ ಪ್ರಿಯವಾಗುವುದರಲ್ಲಿ ಸಂದೇಹವಿಲ್ಲ.

About the Author

ಪಿ. ವಿ. ನಾರಾಯಣ
(18 December 1942)

ಡಾ. ಪಿ. ವಿ. ನಾರಾಯಣ, ಬೆಂಗಳೂರಿನ ವಿಜಯಾ ಕಾಲೇಜಿನಲ್ಲಿ ಕನ್ನಡ ಪ್ರವಾಚಕರಾಗಿದ್ದರು. ತಂದೆ ಪಿ.ವೆಂಕಪ್ಪಯ್ಯ, ತಾಯಿ ನರಸಮ್ಮ. ಬೆಂಗಳೂರಿನಲ್ಲಿ 1942ರ ಡಿ.18 ರಂದು ಹುಟ್ಟಿದರು.  ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎ. (ಕನ್ನಡ) ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. (ಇಂಗ್ಲಿಷ್), “ವಚನ ಸಾಹಿತ್ಯ: ಒಂದು ಸಾಂಸ್ಕೃತಿಕ ಅಧ್ಯಯನ” ಮಹಾಪ್ರಬಂಧಕ್ಕೆ ಬೆಂಗಳೂರು ವಿಶ್ವವಿದ್ಯಾಲಯದಿಂದ ಪಿಎಚ್.ಡಿ. ಪಡೆದಿದ್ದಾರೆ.. ವಿಮರ್ಶೆ/ಸಂಶೋಧನೆ-ಬಳ್ಳಿಗಾವೆ, ಕಾಯತತ್ತ್ವ, ಚಂಪೂಕವಿಗಳು, ವಚನ ಚಳವಳಿ, ವಚನ ವ್ಯಾಸಂಗ ಮೊದಲಾದ 16ಕೃತಿಗಳು. ಸಂಪಾದಿತ-ಬಸವ ಪುರಾಣ ಸಂಗ್ರಹ, ಪದ್ಮಿನೀ ಪರಿಣಯ ಮೊದಲಾದ 5 ಕೃತಿಗಳು. ಅನುವಾದ-ಮದುವೆ ಮತ್ತು ನೀತಿ, ಹನ್ನೆರಡನೇ ರಾತ್ರಿ, ಅಶ್ವತ್ಥಾಮನ್, ಬುವಿಯ ಬಸಿರಿಗೆ ಪಯಣ, ಪಂಪ ರಾಮಾಯಣ  ಮುಂತಾದ 12 ಕೃತಿಗಳು. ಕಾದಂಬರಿಗಳು-ಸಾಮಾನ್ಯ, ...

READ MORE

Related Books