ಶ್ರೀರಂಗ

Author : ಬಿ.ಎನ್. ಸುಮಿತ್ರಾಬಾಯಿ

Pages 120

₹ 70.00




Year of Publication: 2009
Published by: ನವಕರ್ನಾಟಕ ಪ್ರಕಾಶನ
Address: ನವಕರ್ನಾಟಕ ಪಬ್ಲಿಕೇಷನ್ಸ್‌ (ಪ್ರೈ.) ಲಿ. ಎಂಬೆಸಿ ಸೆಂಟರ್, ನಂ.11, ಕ್ರೆಸೆಂಟ್ ರಸ್ತೆ, ಬೆಂಗಳೂರು-560 001
Phone: (080-22203580/01/02)

Synopsys

ಆರ್‌ ವಿ ಜಾಗೀರದಾರ ಎಂಬ ಹೆಸರಿನವರಾಗಿದ್ದ ಆದ್ಯ ರಂಗಾಚಾರ್ಯರು ’ಶ್ರೀರಂಗ’ರಾಗಿ ಬದಲಾದ ಕತೆಯೇ ಸ್ವಾರಸ್ಯಕರ. 
ನಾಟಕ ರಚನೆ ಅವರು ಹೆಚ್ಚು ಒತ್ತು ನೀಡಿದ ಪ್ರಕಾರ. ’ಸ್ವಾರ್ಥತ್ಯಾಗ’, ’ಸಂಧ್ಯಾಕಾಲ’, ’ಕೇಳು ಜನಮೇಜಯ’, ’ಸ್ವರ್ಗಕ್ಕೆ ಮೂರೆ ಬಾಗಿಲು’  ಇವರ ಪ್ರಮುಖ ಕೃತಿಗಳಲ್ಲಿ ಕೆಲವು. ಕಾದಂಬರಿ ಪ್ರಕಾರದಲ್ಲೂ ಕೈಯಾಡಿಸಿರುವ ಅವರು ಭರಮಪ್ಪನ ಭೂತ, ವಿಶ್ವಾಮಿತ್ರನ ಸೃಷ್ಟಿ, ಕುಮಾರ ಸಂಭವ, ಅನಾದಿ ಕೃತಿಗಳನ್ನು ಸಾಹಿತ್ಯ ಲೋಕಕ್ಕೆ ನೀಡಿದ್ದಾರೆ. ಕರ್ಮವೀರ ಪತ್ರಿಕೆಯಲ್ಲಿ ರಾಜಕೀಯ ಅಂಕಣಗಳನ್ನು ಬರೆಯುತ್ತಿದ್ದ ಅವರು ಕರ್ನಾಟಕ ಏಕೀಕರಣಕ್ಕಾಗಿ ಶ್ರಮಿಸಿದ ಮೊದಲಿಗರು ಕೂಡ. 

’ಕಾಳಿದಾಸ’ ಕೃತಿಗೆ 1971 ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ.  ಅವರ ಹೋರಾಟದ ಬದುಕನ್ನು ನವಕರ್ನಾಟಕ ಪ್ರಕಾಶನಕ್ಕಾಗಿ ಅಕ್ಷರಗಳಲ್ಲಿ ಕಟ್ಟಿಕೊಟ್ಟಿದ್ದಾರೆ ಡಾ. ಬಿ.ಎನ್‌. ಸುಮಿತ್ರಾಬಾಯಿ. 

About the Author

ಬಿ.ಎನ್. ಸುಮಿತ್ರಾಬಾಯಿ

ಜೈನಶಾಸ್ತ್ರ ಮತ್ತು ಪ್ರಾಕೃತ ಪರಿಣಿತೆ ಆಗಿರುವ ಬಿ.ಎನ್‌. ಸುಮಿತ್ರಾಬಾಯಿ ಅವರು ಕನ್ನಡದ ಪ್ರಮುಖ ವಿಮರ್ಶಕರಲ್ಲಿ ಒಬ್ಬರು. ಸಾರ್ವತ್ರಿಕದೆಡೆಗೆ, ವಿಚಯ,  ಅಯನ, ಮಹಿಳೆ ಮತ್ತು ಸಾಹಿತ್ಯ, ಸರಹದ್ದುಗಳ ಆಚೆ, ಸ್ತ್ರೀವಾದಿ ಪ್ರವೇಶಿಕೆ ಅವರ ಪ್ರಮುಖ ವಿಮರ್ಶಾ ಕೃತಿಗಳು. ’ಕಲ್ಯಾಣ ಸರಸ್ವತಿ, ಕಾತ್ಯಾಯನಿ ವಾಚಿಕೆ, ಸ್ತ್ರೀವಾದಿ ಪ್ರವೇಶಿಕೆ’ ಕೃತಿಗಳನ್ನು ಸಂಪಾದಿಸಿದ್ದಾರೆ.  ಅವರಿಗೆ ಅನುಪಮಾ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳು ಲಭಿಸಿವೆ. ಡಾ. ಬಿ. ಎನ್. ಸುಮಿತ್ರಾ ಬಾಯಿ ಅವರ  ಬೊಗಸೆಯಲ್ಲಿ ಹೊಳೆ ನೀರು (ಲೇಖನ ಸಂಕಲನ) ಕೃತಿಗೆ 2014ರ ವಿ.ಎಂ. ಇನಾಂದಾರ ಸ್ಮಾರಕ ವಿಮರ್ಶಾ ಪ್ರಶಸ್ತಿ ಸಂದಿದೆ ಹಾಗೂ ಪಿ. ...

READ MORE

Related Books