ಸಿಖ್ಖರು

Author : ಕೆ.ಆರ್. ಅಶೋಕ್



Published by: ಸಂಕಥನ
Address: #72, ಭೂಮಿಗೀತ 6 ನೇ ತಿರುವು, ಉದಯಗಿರಿ, ಮಂಡ್ಯ-571401
Phone: 9886133949

Synopsys

(ಪ್ರಿಂಟ್ ಆಗಿಲ್ಲ)

ಖ್ಯಾತ ಪತ್ರಕರ್ತ ಖುಷ್ವಂತ ಸಿಂಗ್ ಅವರು ಪಂಜಾಬದ ಸಿಖ್ ಜನಾಂಗದ ಕುರಿತು ಇಂಗ್ಲಿಷಿನಲ್ಲಿ ಬರೆದ ಕೃತಿಯನ್ನು ಡಾ. ಕೆ.ಆರ್. ಅಶೋಕ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ವರ್ತಮಾನದ ಜಗತ್ತಿನಲ್ಲಿ ಭಾರತದ ಉಪಖಂಡದ ಇತಿಹಾಸದೊಂದಿಗೆ ಬೆರೆತು ಹೋಗಿರುವ ಸಿಖ್ ಸಮುದಾಯದ ಭಾಷೆ, ಸಂಸ್ಕೃತಿ, ತಾತ್ವಿಕತೆ, ರಾಜಕೀಯಗಳನ್ನು ಬಹುವಾಗಿ ಅರಿತಿರುವ ಖುಷ್ವಂತಸಿಂಗ್, ತಾವು ತಮ್ಮ ಪೂರ್ವಜರಿಂದ ಕೇಳಿದ ಕಥೆಗಳಿಂದ ಹಿಡಿದು ಸ್ವತಃ ತಾವು ನೋಡಿದ ಸಂಗತಿಗಳವರೆಗಿನ ಸಿಖ್ ಸಮುದಾಯದ ಇತಿಹಾಸವನ್ನು ಹಂತ ಹಂತವಾಗಿ ಸಂಕ್ಷಿಪ್ತವಾಗಿ ನಿರೂಪಿಸಿದ್ದಾರೆ. ಅನೇಕ ಧರ್ಮಗುರುಗಳು, ಅವರ ಸಾಮಾಜಿಕ ಸುಧಾರಣೆಗಳು, ಬ್ರಿಟಿಷರೊಂದಿಗಿನ ಯುದ್ಧ, ಸಿಖ್ ಸಾಮ್ರಾಜ್ಯ, ವ್ಯಕ್ತಿಚಿತ್ರಣಗಳೂ ಸಹ ಈ ಕೃತಿಯಲ್ಲಿ ದಾಖಲಾಗಿವೆ.

About the Author

ಕೆ.ಆರ್. ಅಶೋಕ್

ಲೇಖಕ ಡಾ. ಕೆ.ಆರ್. ಅಶೋಕ ಅವರು ವೃತ್ತಿಯಿಂದ ವೈದ್ಯರು. ಶರೀರಶಾಸ್ತ್ರ ಬೋಧಕರು. ಸದ್ಯಕ್ಕೆ ಬೆಂಗಳೂರಿನ ಬಿ.ಜಿ.ಎಸ್ ವೈದ್ಯಕೀಯ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರು. ಓದು, ಬರಹ, ಸುತ್ತಾಟ ಜೊತೆಗೆ ಪ್ರಕೃತಿ ಫೋಟೋಗ್ರಫಿಯ ಹವ್ಯಾಸವಿದೆ ಕೃತಿಗಳು: ಸಮಾಧಿ ಹೋಟ್ಲು ಮತ್ತು ಇತರೆ ಕಥೆಗಳು (ಕಥಾ ಸಂಕಲನ), ಒಂದು ಬೊಗಸೆ ಪ್ರೀತಿ, ಆದರ್ಶವೇ ಬೆನ್ನು‌ ಹತ್ತಿ ಮತ್ತು Rebel 1.0 (ಕಾದಂಬರಿಗಳು, ಇ-ಆವೃತ್ತಿ) ರೋಹಿತ್ ವೇಮುಲ, ಅರುಂಧತಿ ರಾಯ್‍ರವರ ಲೇಖನಗಳ ಅನುವಾದ ಪ್ರಕಟವಾಗಿದೆ. ಅನುವಾದಿತ ಕೃತಿಗಳು : ಸಾಕೇತ್ ರಾಜನ್‍ರ ಮೇಕಿಂಗ್ ಹಿಸ್ಟರಿ, ಖುಷ್ವಂತ್ ಸಿಂಗ್‍ರ ಸಿಖ್ಖರು.    ...

READ MORE

Related Books