ಸಿರಿ ಕನ್ನಡ: ನುಡಿ ತೋರಣ

Author : ಶೈಲಜಾ ಶರಣಗೌಡ

Pages 200

₹ 150.00




Year of Publication: 2020
Published by: ಪ್ರಿಯದರ್ಶಿನಿ ಪ್ರಕಾಶನ
Address: #138, 7ನೇ ಸಿ ಮುಖ್ಯರಸ್ತೆ, ಹಂಪಿನಗರ, ಬೆಂಗಳೂರು-560104

Synopsys

ಸಿರಿ ಕನ್ನಡ: ನುಡಿ ತೋರಣ ಎಂಬುದು ಲೇಖಕಿ ಶೈಲಜಾ ಶರಣಗೌಡ ಅವರು ಸಂಪಾದಿತ ಕೃತಿ. ಕನ್ನಡ ಸಾಹಿತ್ಯದ ಎಲ್ಲ ಕಾಲಘಟ್ಟಗಳಲ್ಲಿ ಹುದುಗಿರುವ ಕಾವ್ಯೋಕ್ತಿಗಳನ್ನು ಹುಡುಕಿ, ಕೃತಿರೂಪದಲ್ಲಿ ಕಟ್ಟಿಕೊಡುವ ಪ್ರಯತ್ನವಿದು. ಜಾಗತೀಕರಣದ ಈ ಸಂದರ್ಭದಲ್ಲಿ ಕನ್ನಡ ಭಾಷೆ ಮತ್ತು ಸಾಹಿತ್ಯ ಅತ್ಯಂತ ಸಂದಿಗ್ದ ಸ್ಥಿತಿಯಲ್ಲಿವೆ. ಕಂಪ್ಯೂಟರ್, ಮೊಬೈಲ್ ಗಳ ಭರಾಟೆಯಲ್ಲಿ ಕನ್ನಡ ಸಾಹಿತ್ಯ ಕೃತಿಗಳನ್ನು ಬರೆಯುವರು ಮತ್ತು ಓದುವವರು ತುಂಬಾ ಕಡಿಮೆ. ಕನ್ನಡ ಸಾಹಿತ್ಯದ ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಲೇಖಕಿಯು ಈ ಕೃತಿಯ ಮೂಲಕ ಆಶಾಭಾವನೆ ಮೂಡಿಸುತ್ತಾರೆ. ಕನ್ನಡ ಸಾಹಿತ್ಯದ ಹಳಗನ್ನಡ, ನಡುಗನ್ನಡ ,ಹೊಸಗನ್ನಡ ,ಕೃತಿಗಳ ಅಧ್ಯಯನ ಮಾಡಿ ಅವುಗಳಲ್ಲಿನ ಕಾವ್ಯ್ಯೋಕ್ತಿಗಳನ್ನು ಸಂಗ್ರಹಿಸಿ, ಸಂಪಾದಿಸಿ, ಕೃತಿರೂಪದಲ್ಲಿ ಹೊರ ಹೊರತಂದಿದ್ದು ಗಮನಾರ್ಹ. 'ಅಹಂ ಕಷ್ಟ್o ಸಂಸಾರಂ'- ಶಿವಕೋಟ್ಯಾಚಾರ್ಯ, ' 'ಮನುಷ್ಯ ಜಾತಿ ತಾನೊಂದೆ ವಲಂ'- ಪಂಪ, 'ಗುಣಕ್ಕೆ ಮಚ್ಚರಮಂಟೆ'- ರನ್ನ, 'ಮಾಡಿದುದo ನಾವುಣ್ಣದೇ ಪೊಕುಮೇ '-ಜನ್ನ, 'ಹರನೆಂಬುದೇ ಸತ್ಯ ಸತ್ಯವೆಂಬುದೆ ಹರನು'- ಹರಿಹರ, 'ಕಣ್ಣರಿಯಡಿರ್ದದೆ ಕರುಳರಿಯದೇ '-ರಾಘವಾಂಕ, 'ಜಂಬುಕo ಜನಿಸುವುದು ಸಿಂಗದುದರದೊಳ್'- ಲಕ್ಷ್ಮೀಶ, ಮುಂತಾದ ಕಾವ್ಯಗಳು ಸರ್ವಕಾಲಿಕ ಸತ್ಯವನ್ನು ಸಾರುವಂತಿದೆ. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವವರಿಗೆ ಇದೊಂದು ಆಕರ ಗ್ರಂಥ.

About the Author

ಶೈಲಜಾ ಶರಣಗೌಡ

ಲೇಖಕಿ ಶೈಲಜಾ ಶರಣಗೌಢ ಅವರು ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಮಲ್ಲಾ (ಬಿ) ಗ್ರಾಮದವರು. ತಂದೆ ಶರಣಗೌಡ, ತಾಯಿ ಮಹಾದೇವಿ. ಹುಟ್ಟೂರಿನಲ್ಲಿ ಪ್ರಾಥಮಿಕ ಶಿಕ್ಷಣ, ಜೇವರ್ಗಿಯಲ್ಲಿ ಪ್ರೌಢ ಶಿಕ್ಷಣ, ಪಿಯುಸಿ, ಬಿಎ, ಬಿ.ಇಡಿ ಪದವಿ ಪೂರೈಸಿದರು.  ಕಲಬುರಗಿ ಸರಕಾರಿ ಮಹಾವಿದ್ಯಾಲಯದ ಸ್ನಾತಕೋತ್ತರ ಕೇಂದ್ರ ದಿಂದ ಎಂಟು ಸುವರ್ಣ ಪದಕಗಳು ಹಾಗೂ ಪ್ರಥಮ ರ್‍ಯಾಂಕ್ ನೊಂದಿಗೆ ಎಂ.ಎ. ಪದವಿ ಪಡೆದರು. ಪ್ರಸ್ತುತ, ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಸಂಶೋಧನಾಧ್ಯಯನ ಮುಂದುವರೆಸಿದ್ದಾರೆ.   ಕೃತಿಗಳು: ಸಿರಿಕನ್ನಡ : ನುಡಿತೋರಣ  (ಪ್ರಾಚೀನ ಮಧ್ಯಕಾಲೀನ ಮತ್ತು ಆಧುನಿಕ ಕನ್ನಡ ಕಾವ್ಯಗಳಲ್ಲಿ ಹುದುಗಿರುವ ಕಾವ್ಯೋಕ್ತಿಗಳನ್ನು ಸಂಗ್ರಹ ಕೃತಿ-2020 ) ಇವರು ಬರೆದ ...

READ MORE

Related Books