ಸಿರಿಗನ್ನಡ ಬರಹದ ಅಕ್ಷರಲೋಕ

Author : ಬಾಗೂರು ಮಾರ್ಕಾಂಡೇಯ

Pages 74

₹ 50.00




Year of Publication: 1997
Published by: ಸಪ್ನ ಬುಕ್ ಹೌಸ್
Address: ಕರ್ನಾಟಕ ಬುಕ್ ಏಜೆನ್ಸಿ, ತುಂಗಾ ಕಾಂಪ್ಲೆಕ್ಸ್, ಗಾಂಧೀನಗರ, ಬೆಂಗಳೂರು-560 09
Phone: 08040114455

Synopsys

ಸಿರಿಗನ್ನಡ ಬರಹದ ಅಕ್ಷರಲೋಕ-ಲೇಖಕ ಬಾಗೂರು ಮಾರ್ಕಾಂಡೇಯ ಅವರು  ಚಿತ್ರಕಲೆಯಲ್ಲಿ ಅಕ್ಷರ ಲೇಖನ ಬರೆಯಲು ಉಪಯುಕ್ತವಾಗುವ ಹಾಗೆ ಬರೆದ ಲೇಖನಗಳ ಸಂಕಲನ. ಚಿತ್ರಕಲಾ ಶಿಕ್ಷಣ ಕಲಿಯುವ, ಆಸಕ್ತರಿಗೆ, ಅಭಿಮಾನಿಗಳಿಗೆ ಅಕ್ಷರಲೇಖನ ಹೇಗೆ ಬರೆಯುವುದು ಮತ್ತು ಯಾವ ಯಾವ ರೀತಿಯ ಅಕ್ಷರ ಲೇಖನಗಳು ಹಾಗೂ ಅವುಗಳ ಹೊಸ ಹೊಸ ವಿನ್ಯಾಸಗಳನ್ನು ಬರೆಯಬಹುದು ಎಂಬ ಬಗ್ಗೆ ಉದಾಹರಣೆಯ ಸಮೇತವಾಗಿ ಇಲ್ಲಿ ವಿವರಿಸಲಾಗಿದೆ.

ಕನ್ನಡ, ಇಂಗ್ಲಿಷ್  ಹಿಂದಿ ಹೀಗೆ ಯಾವುದೇ ಭಾಷೆಯನ್ನು ಅದರಲ್ಲಿ ಪದಗಳು ವಾಕ್ಯಗಳನ್ನು ಹೇಗೆ ರಚಿಸಿದರೆ ಸುಂದರವಾಗಿ ಕಾಣುತ್ತದೆ ಎಂಬುದನ್ನು ಹಂತಹಂತವಾಗಿ ವಿವರಿಸಿ ಹೇಳಲಾಗಿದೆ. ಅಲ್ಲದೆ, ಆರಂಭಿಕವಾಗಿ ಕಲಿಯುವ ವಿದ್ಯಾರ್ಥಿಗಳಿಗೂ ಸಿದ್ಧಪಡಿಸಿದ ಪುಸ್ತಕವಿದು.

 

About the Author

ಬಾಗೂರು ಮಾರ್ಕಾಂಡೇಯ
(28 June 1966)

ಕವಿ, ಕಲಾವಿದ, ಬಾಗೂರು ಮಾರ್ಕಾಂಡೇಯ ಅವರು ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ (ಜನನ: 28-06-1966) ಬಾಗೂರು ಗ್ರಾಮದವರು. ಪರಿಸರ, ಮಕ್ಕಳ ಸಾಹಿತ್ಯ, ಚಿತ್ರಕಲೆ ಸೇರಿದಂತೆ ಸುಮಾರು 54ಕ್ಕೂ ಅಧಿಕ ಕೃತಿಗಳನ್ನು ರಚಿಸಿದ್ದಾರೆ. ಏಕ ವ್ಯಕ್ತಿ ಚಿತ್ರಕಲಾ ಪ್ರದರ್ಶನ, ಬೇರುಗಳು ಚಿತ್ರ ಸರಣಿ ಮೂಲಕ ಪರಿಸರ ಜಾಗೃತಿಗೆ ಶ್ರಮಿಸಿದವರು, ‘ರೇಖೆಗಳಲ್ಲಿ ಭಾವಗೀತೆಗಳು’ ಮೂಲಕ ನೂತನ ಪ್ರಯೋಗಶೀಲತೆ ರೂಢಿಸಿಕೊಂಡವರು. ಕನ್ನಡದ ಸುಲಭ ಕಲಿಕೆಗೆ “ಕನ್ನಡ ಸೌರಭ” ತಂತ್ರಾಂಶ ತಯಾರಿಸಿದ್ದಾರೆ. “ಬಾಗೂರು ಕಲಾ ವೇದಿಕೆ ಟ್ರಸ್ಟ್” ರಚಿಸಿಕೊಂಡು ‘ಕಲಾ ಭೂಷಣ’ ಪ್ರಶಸ್ತಿ ನೀಡುತ್ತಾ ಬಂದಿದ್ದಾರೆ ಕವನ ಸಂಕಲನಗಳು: ರೇಖಾಂತರಂಗದ ಭಾವಗುಸುಮ, ಭಾವಶಿಲ್ಪ, ಭಾವೋನ್ಮಾದಿನಿ, ಭಾವಸಮ್ಮಿಲನ, ಕೊಳಲದನಿ, ಕಾವ್ಯಕನ್ನಿಕೆ,  ಚೈತ್ರ ಚೆಲುವು, ಸುವರ್ಣಪುತ್ಥಳಿ,  ಸ್ವರಸಿರಿಯ ಸ್ನೇಹಲತೆ, ರಾಧಾ ಮಾಧವರ ಒಲುಮೆ ...

READ MORE

Related Books