ಸೋಲು ಸಾವಲ್ಲ ಗೆಲುವು ಸುಖವಲ್ಲ

Author : ದೇವರಾಜು ಚನ್ನಸಂದ್ರ

Pages 176

₹ 150.00




Year of Publication: 2017
Published by: ಜನನಿ ಟ್ರಸ್ಟ್
Address: ಬೆಂಗಳೂರು

Synopsys

ಲೇಖಕ ದೇವರಾಜು ಚನ್ನಸಂದ್ರ ಅವರ ಕೃತಿ-ಸೋಲು ಸಾವಲ್ಲ; ಗೆಲುವು ಸುಖವಲ್ಲ. ‘ಅನಿರೀಕ್ಷಿತಗಳಿಗೆ ಸಿದ್ಧನಾಗು, ಮಾನವೀಯತೆಗೆ ಬದ್ಧನಾಗು’ ಎಂಬುದು ಈ ಕೃತಿಯ ಉಪಶೀರ್ಷಿಕೆ. ಬದುಕಿನಲ್ಲಿ ಪ್ರಯತ್ನಪಟ್ಟರೂ ಸಾಧನೆ ಅಸಾಧ್ಯ ಎಂಬ ಅನುಭವವಾದಾಗ ನಿರಾಶೆ-ಹತಾಶೆಯಾಗುತ್ತದೆ. ಅಂತಹ ಮನಸ್ಸಿಗೆ ಉತ್ತಮ ಪ್ರೇರಣೆಯಾಗಿ ಇಲ್ಲಿಯ ಸಲಹೆ-ಸೂಚನೆ-ಉಪದೇಶಗಳು, ಉತ್ತಮ ಮಾದರಿ ವ್ಯಕ್ತಿತ್ವ ಗಳನ್ನು ಉದಾಹರಣೆಯಾಗಿ ಬಳಸಿಕೊಂಡು ಬದುಕನ್ನು ಪ್ರೀತಿಸುವಂತೆ ಪ್ರೇರೇಪಿಸುವ ಬರಹಗಳು ಇಲ್ಲಿವೆ. ಸೋತ ಮಾತ್ರಕ್ಕೆ ಅದೇ ಜೀವನದ ಕೊನೆಯಲ್ಲ, ಗೆಲುವು ನಮಗಾಗಿ ಕಾದಿರುತ್ತದೆ. ಸ್ವಲ್ಪ ಸಹನೆಯಿಂದ ಇರಬೇಕಷ್ಟೆ. ಗೆಲುವು ಎಂದಿಗೂ ಶಾಶ್ವತವಲ್ಲ. ಅದನ್ನು ಸದಾ ಬಯಸಬಾರದು. ಬದುಕಿನಲ್ಲಿ ಸೋಲು-ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸಬೇಕು ಎಂಬ ಸಂದೇಶದ ಬರಹಗಳನ್ನು ಈ ಕೃತಿ ಒಳಗೊಂಡಿದೆ.

About the Author

ದೇವರಾಜು ಚನ್ನಸಂದ್ರ

ದೇವರಾಜು ಚನ್ನಸಂದ್ರರವರು ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಚನ್ನಸಂದ್ರ ಗ್ರಾಮದವರು. ತಂದೆ- ಈರೇಗೌಡ, ತಾಯಿ- ಮಹದೇವಮ್ಮ. ಪ್ರಾಥಮಿಕ ಶಿಕ್ಷಣವನ್ನು ತಮ್ಮ ಹುಟ್ಟೂರಿನಲ್ಲಿ ಪಡೆದ ದೇವರಾಜು ಅವರು ಪ್ರೌಢ ಶಿಕ್ಷಣವನ್ನು ಕೋಡಿಹಳ್ಳಿಯ ಶ್ರೀಶಾರದಾ ಹೈಸ್ಕೂಲ್ ನಲ್ಲಿ ಪಡೆದುಕೊಂಡರು. ಕಾಲೇಜು ಶಿಕ್ಷಣವನ್ನು ಕನಕಪುರದ ವಿದ್ಯಾದಾನಿ ಮತ್ತು ಕರ್ಮಯೋಗಿ ಶ್ರೀ ಎಸ್. ಕರಿಯಪ್ಪನವರ ರೂರಲ್ ಕಾಲೇಜಿನಲ್ಲಿ ಪೂರ್ಣಗೊಳಿಸಿದ ದೇವರಾಜು ಅವರು ಬೆಂಗಳೂರಿನ ವಿಶ್ವವಿದ್ಯಾಲಯದಲ್ಲಿ ಸಮಾಜಕಾರ್ಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಹಲವಾರು ಸ್ವಯಂ ಸೇವಾ ಸಂಸ್ಥೆಗಳಲ್ಲಿ ಕೆಲಸ ನಿರ್ವಹಿಸಿರುವ ದೇವರಾಜ್ ಆಪ್ತಸಮಾಲೋಚಕರಾಗಿ ಸುಮಾರು 5 ವರ್ಷ ಕಾರ್ಯ ನಿರ್ವಹಿಸಿ ಮತ್ತೈದು ವರ್ಷ ಜೀವನ ಕೌಶಲ್ಯ ...

READ MORE

Related Books