ಸೊನಾಟಾ-ಧರ್ಮಪುತ್ರ-ವಾಸಾಂಸಿ ಜೀರ್ಣಾನಿ

Author : ಗಿರೀಶ ಕಾರ್ನಾಡ

Pages 140

₹ 2120.00




Year of Publication: 2017
Published by: ಮನೋಹರ ಗ್ರಂಥ ಮಾಲಾ
Address: ಲಕ್ಷ್ಮಿ ಭವನ, ಸುಭಾಸ ರಸ್ತೆ, ಧಾರವಾಡ-1
Phone: 98454 47002

Synopsys

ಮಹೇಶ ಎಲಕುಂಚವಾರ ಅವರು ಮರಾಠಿ ಭಾಷೆಯ ಪ್ರಮುಖ ನಾಟಕಕಾರರಲ್ಲಿ ಒಬ್ಬರು.  ಪ್ರತಿಬಿಂಬ, ಚಿರೆಬಂದಿವಾಡೆ, ಪಾರ್ಟಿ, ಸುಲ್ತಾನ ಮತ್ತು ಯುಗಾಂತ ಇವರ ಪ್ರಸಿದ್ದ ನಾಟಕಗಳು. ಮಹೇಶ ಅವರ ಸೋನಾಟ, ಧರ್ಮಪತ್ರ ಮತ್ತು ವಾಸಾಂಸಿ ಜೀರ್ಣಾನಿ ಎಂಬ ಮೂರು ನಾಟಕಗಳನ್ನು ಕನ್ನಡದ ಪ್ರಮುಖ ನಾಟಕಕಾರರಾದ ಗಿರೀಶ ಕಾರ್ನಾಡ ಅನುವಾದಿಸಿದ್ದಾರೆ.


ಮಹಾರಾಷ್ಟ್ರದ ಪರ್ವಾದಲ್ಲಿ 9 ಅಕ್ಟೋಬರ್ 1939ರಂದು ಜನಿಸಿದ ಮಹೇಶ ಅವರು ನಾಲ್ಕನೆಯ ವರ್ಷದಲ್ಲೇ ತಂದೆ-ತಾಯಿಗಳಿಂದ ದೂರವಾಗಿ ಶಿಕ್ಷಣಕ್ಕಾಗಿ ಪಟ್ಟಣ ಸೇರಿ ಏಕಾಂಗಿಯಾಗಿ ಬೆಳೆದರು. ನಾಗಪುರದಲ್ಲಿ ಮ್ಯಾಟ್ರಿಕುಲೇಶನ ಮುಗಿಸಿ, ಮೊರಿಸ್ ಕಾಲೇಜಿನಲ್ಲಿ ಬಿ.ಎ., ನಾಗಪುರ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ ಪಡೆದರು. 1965ರಲ್ಲಿ ಸಿನೇಮಾ ನೋಡಲೆಂದು ಹೋದವರು ಟಿಕೆಟ್ ಸಿಗದೆ ನಾಟಕವನ್ನು ವೀಕ್ಷಿಸಿದರು. ವಿಜಯಾ ಮೆಹತಾ ನಿರ್ದೇಶಿಸಿದ ವಿಜಯ ತೆಂಡೂಲ್ಕರ ಅವರ 'ನಾನು ಗೆದ್ದೆ. ನಾನು ಸೋತೆ' ಎಂಬ ನಾಟಕ ವೀಕ್ಷಿಸಿದ ಮೇಲೆ ನಾಟಕಕಾರನಾಗುವ ನಿರ್ಧಾರ ಕೈಗೊಂಡರು. ಮಹೇಶ ಎಲಕುಂಚವಾರ ಅವರು ಮರಾಠಿಯಲ್ಲಿ ಅನೇಕ ನಾಟಕಗಳನ್ನು ಬರೆದಿದ್ದಾರೆ. ನಂತರ ಅವು ಅನೇಕ ಭಾರತೀಯ ಮತ್ತು ವಿದೇಶೀ ಭಾಷೆಗಳಲ್ಲಿ (ಇಂಗ್ಲಿಷ್, ಫ್ರೆಂಚ್, ಜರ್ಮನ್ ಇತ್ಯಾದಿ) ಭಾಷಾತರಗೊಂಡಿವೆ.

ನಾಗಪುರ ಧರ್ಮಪೀಠ ಆರ್ಟ್ಸ್ ಮತ್ತು ಕಾಮರ್ಸ್ ಕಾಲೇಜಿನಲ್ಲಿ ಮತ್ತು ಪಿ.ಡಿಯೋ ಮೆಮೊರಿಯಲ್ ಸೈನ್ಸ್ ಕಾಲೇಜದಲ್ಲಿ ಇಂಗ್ಲಿಷ್ ಸಾಹಿತ್ಯವನ್ನು ಬೋಧಿಸುತ್ತ ನಿವೃತ್ತಿಗೊಂಡರು. ಪುಣೆಯ ಫಿಲ್ ಅಂಡ್ ಟೆಲಿವಿಷನ್ ಇನ್ಸ್ಟಿಟ್ಯೂಟನಲ್ಲಿ ೨೦೦-೨೦೦೧ರಲ್ಲಿ Screen Play Writing ದ ಪ್ರಾಧ್ಯಾಪಕರಾಗಿ ಹಾಗೂ ದಿಲ್ಲಿಯ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾದಲ್ಲಿ ಸಂದರ್ಶನ ಪ್ರಾಧ್ಯಾಪಕರಾಗಿ ಆನೇಕ ವರ್ಷ ಸೇವೆ ಸಲ್ಲಿಸಿದ್ದಾರೆ. -

About the Author

ಗಿರೀಶ ಕಾರ್ನಾಡ
(19 May 1934 - 10 June 2019)

ನಾಟಕಕಾರ ಗಿರೀಶ್ ಕಾರ್ನಾಡ್ ಅವರು  ರಂಗಭೂಮಿ- ಚಲನಚಿತ್ರ ನಟರಾಗಿ, ನಿರ್ದೇಶಕರಾಗಿ,  ಸಂಗೀತ- ನಾಟಕ ಅಕಾಡೆಮಿಗಳ ಅಧ್ಯಕ್ಷರಾಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧರಾಗಿದ್ದಾರೆ. ಕತೆ, ವಿಮರ್ಶೆ ಮತ್ತು ತಮ್ಮ ಆತ್ಮಕತೆ ‘ಆಡಾಡತ ಆಯುಷ್ಯ’ಗಳನ್ನು ಬರೆದಿದ್ದರೂ ನಾಟಕಕಾರ ಎಂದೇ ಚಿರಪರಿಚಿತರು. ಗಿರೀಶ್ 1934ರ ಮೇ 19ರಂದು ಮಹಾರಾಷ್ಟ್ರದ ಮಾಥೇರದಲ್ಲಿ ಜನಿಸಿದರು. ಉತ್ತರಕನ್ನಡದ ಶಿರಸಿಯಲ್ಲಿ ಪ್ರಾಥಮಿ ಶಿಕ್ಷಣ ಧಾರವಾಡದ  ಬಾಸೆಲ್ ಮಿಶನ್ ಪ್ರೌಢಶಿಕ್ಷಣ, ಹಾಗೂ ಕರ್ನಾಟಕ ಕಾಲೇಜಿನಲ್ಲಿ ಪದವಿ ಶಿಕ್ಷಣ  ಪಡೆದ ಬಳಿಕ ಪ್ರತಿಷ್ಠಿತ ರೋಡ್ಸ್ ಸ್ಕಾಲರ್ಶಿಪ್ ಪಡೆದುಕೊಂಡು ಆಕ್ಸ್ ಫರ್ಡಿನಲ್ಲಿ ಹೆಚ್ಚಿನ ವ್ಯಾಸಂಗ ಮಾಡಿದರು.  ಆಕ್ಸ್ ಫರ್ಡಿನ ಡಿಬೇಟ್ ಕ್ಲಬ್ಬಿಗೆ ಅಧ್ಯಕ್ಷರಾಗಿ ಆಯ್ಕೆಯಾದ ...

READ MORE

Related Books