ಸೌರಶಕ್ತಿಯ ಕಥೆ

Author : ಟಿ. ಆರ್. ಅನಂತರಾಮು

Pages 52

₹ 42.00




Year of Publication: 2014
Published by: ನವಕರ್ನಾಟಕ ಪ್ರಕಾಶನ
Address: # 11, ಎಂಬೆಸಿ ಸೆಂಟರ್, ಕ್ರೆಸೆಂಟ್ ರಸ್ತೆ, ಶಿವಾನಂದ ವೃತ್ತ, ಕುಮಾರ ಪಾರ್ಕ್ (ಪೂರ್ವ), ಬೆಂಗಳೂರು-560001
Phone: 08026617100

Synopsys

ಸೌರಶಕ್ತಿಯ ಕಥೆ-ಅರವಿಂದ ಗುಪ್ತ ಅವರ ಕೃತಿಯನ್ನು ಲೇಖಕ ಟಿ.ಆರ್. ಅನಂತರಾಮು ಅವರು ಕನ್ನಡೀಕರಿಸಿದ್ದಾರೆ. ಸೌರಶಕ್ತಿಕ ಬೆಳವಣಿಗೆಯ ಇತಿಹಾಸ ತಿಳಿಸುತ್ತದೆ. ಸೂರ್ಯ ಪೂಜ್ಯ. ಗ್ರೀಕರು ಸೌರ ರಚನೆಗಳ ನಿರ್ಮಾಣದಲ್ಲಿ ಎತ್ತಿದ ಕೈ.  ಗಾಜಿನ ಕಿಟಕಿ ಬಳಸಿದವರು ರೋಮನರು. ದಕ್ಷಿಣ ಆಫ್ರಿಕದಿಂದ ದಕ್ಷಿಣಾಕಾಶದ ನಕ್ಷೆ ತಯಾರಿಸಲು ಹೋದಾಗ ಸರ್ ವಿಲಿಯಂ ಹರ್ಷಲ್ 150 ವರ್ಷಗಳ ಹಿಂದೆ ಸೌರಶಕ್ತಿ ಬಳಸಿ ಅಡುಗೆ ಮಾಡಿದ. ಪಳೆಯುಳಿಕೆ ಇಂಧನಗಳಾದ ಕಲ್ಲಿದ್ದಲು ಮತ್ತು ಅನಿಲ ತ್ವರಿತವಾಗಿ ಮುಗಿದುಹೋಗುತ್ತಿವೆ. ಅವು ಮಾಲಿನ್ಯಕಾರಕ ಕೂಡ. ಹಸುರುಮನೆ ಅನಿಲಗಳನ್ನು ವಾಯುಗೋಳಕ್ಕೆ ಸೇರಿಸುತ್ತವೆ. ಇವು ಜಾಗತಿಕ ತಾಪಮಾನ ಹೆಚ್ಚಿಸುತ್ತವೆ. ಫುಕುಶಿಮ ದುರಂತದ ನಂತರ ಜಗತ್ತು ಪರಮಾಣು ಶಕ್ತಿಯ ಬಗ್ಗೆ ಮರುಚಿಂತನೆ ನಡೆಸುತ್ತಿದೆ. ಭವಿಷ್ಯದಲ್ಲಿ ಗಾಳಿ ಮತ್ತು ಸೌರಶಕ್ತಿಗಳೇ ನಮಗೆ ಶಕ್ತಿಸಂಪನ್ಮೂಲವಾಗಿ ಒದಗಿಬರಲಿವೆ. ಭಾರತದಲ್ಲಿ ಸೂರ್ಯಶಕ್ತಿ ಸಮೃದ್ಧವಾಗಿದೆ. ಇದು ಅಕ್ಷಯ ಸಂಪನ್ಮೂಲ, ಮಾಲಿನ್ಯ ರಹಿತವಾದದ್ದು.ನಾವು ನಮ್ಮ ಬುದ್ಧಿಶಾಲಿಗಳನ್ನು ಅತಿ ಅಗ್ಗದ ಸೌರಕೋಶಗಳ ಸಂಶೋಧನೆಗೆ, ವಿನ್ಯಾಸಕ್ಕೆ, ಅತಿ ಸಮರ್ಥ ಸೌರ ಕುಕ್ಕರ್ ತಯಾರಿಕೆಗೆ ತೊಡಗಿಸಬೇಕಾಗಿದೆ. ವಿಕೇಂದ್ರೀಕೃತ ಸೌರಶಕ್ತಿ ಎಲ್ಲೋ ಮೂಲೆಯಲ್ಲಿರುವ ಹಳ್ಲಿಮನೆಯ ದೀಪಕ್ಕೆ ವಿದ್ಯುತ್ ಒದಗಿಸಬಲ್ಲದು. ಶಕ್ತಿ ನೀಡುವುದು ಎಂದರೆ ಇದೇ. ನಿಜಕ್ಕೂ ಜನರನ್ನು ಶಕ್ತಿವಂತರನ್ನಾಗಿ ಮಾಡುವುದು ಹೀಗೆಯೇ. ಗಾಂಧೀಜಿಯವರ ಕನಸು ನನಸಾಗಬೇಕಾಗಿರುವುದು ಈ ಬಗೆಯಿಂದಲೇ ಇಂತಹ ಚಿಂತನೆಗಳು ಕೃತಿಯಲ್ಲಿವೆ. 

About the Author

ಟಿ. ಆರ್. ಅನಂತರಾಮು
(03 August 1949)

ಭೂ ವಿಜ್ಞಾನಿ, ಸಂಶೋಧಕ, ಅಂಕಣಕಾರ, ವಿಜ್ಞಾನ ಲೇಖಕ ಟಿ.ಆರ್. ಅನಂತರಾಮು ಅವರು ಜನಿಸಿದ್ದು 1949 ಆಗಸ್ಟ್ 3ರಂದು ತುಮಕೂರು ಜಿಲ್ಲೆ ಶಿರಾ ತಾಲ್ಲೂಕಿನ ತಾಳಗುಂದದಲ್ಲಿ.ತಾಳಗುಂದ ರಾಮಣ್ಣ ಅನಂತರಾಮು ಅವರ ಪೂರ್ಣ ಹೆಸರು. ಸಿರಾದ ಸರ್ಕಾರಿ ಮಾಧ್ಯಮಿಕ ಶಾಲೆಯಲ್ಲಿ ಮಾಧ್ಯಮಿಕ ಶಿಕ್ಷಣ ಪೂರ್ಣಗೊಳಿಸಿದ ಅವರು ಸಿರಾದ ಮುನಿಸಿಪಲ್ ಹೈಸ್ಕೂಲಿನಲ್ಲಿ ಪ್ರೌಢಶಿಕ್ಷಣ ಪೂರ್ಣಗೊಳಿಸಿದ್ದಾರೆ. ಆನಂತರ ತುಮಕೂರಿನ ಸರ್ಕಾರಿ ಕಾಲೇಜಿನಲ್ಲಿ ಪದವಿ, ಮೈಸೂರು ವಿಶ್ವವಿದ್ಯಾಲಯದಲ್ಲಿ ಎಂ.ಎನ್ಸಿ(ಜಿಯಾಲಜಿ) ಪದವಿ ಪಡೆದಿದ್ದಾರೆ.  ಭೂ ವಿಜ್ಞಾನ ವಿಷಯದಲ್ಲಿ ಪದವಿ ಪಡೆದ ನಂತನ ಬೆಂಗಳೂರಿನ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ, ರಾಜ್ಯದ ನಾನಾ ಕಾಲೇಜುಗಳಲ್ಲಿ ಅಧ್ಯಾಪಕರಾಗಿ ಕೆಲಸ ಮಾಡಿದ್ದಾರೆ.  ...

READ MORE

Related Books