ಶ್ರೀ ವಿದ್ಯೆಯ ಸಾರ

Author : ಎ.ವಿ. ನರಸಿಂಹ ಮೂರ್ತಿ

Pages 75

₹ 10.00




Year of Publication: 2010

Synopsys

ಶ್ರೀ ವಿದ್ಯೆಯ ಸಾಗರವನ್ನು ಹೊಕ್ಕು ಚಾಗಂಟಿ ಸೂರ್ಯನಾರಾಯಣ ಮೂರ್ತಿಯವರು ಆನಂದವನ್ನು ಇತರರಿಗೂ ಹಂಚುವ ಮಹಾ ಕಾರ್ಯವನ್ನು ಲೇಖಕರು ಈ ಕೃತಿಯಲ್ಲಿ ಮಾಡಿದ್ದಾರೆ. ಆಧುನಿಕ ಓದುಗರಲ್ಲಿ ಈ ವಿಷಯದಲ್ಲಿ ಮೂಡಬಹುದಾದ ಅನೇಕ ಸಂಶಯಗಳನ್ನು ಊಹಿಸಿಕೊಂಡು ಅವಕ್ಕೆಲ್ಲಾ ಸಮಾಧಾನವನ್ನು ಅವರು ನೀಡಿದ್ದಾರೆ. ಅವರು ನೀಡಿರುವ ವಿವರಣೆಗಳು ತೃಪ್ತಿಕರವಾಗಿವೆ, ಅಲ್ಲದೆ, ಪ್ರಾಯೋಗಿಕ ಮನೋವಿಜ್ಞಾನದ ವಿದ್ವಾಂಸರು ಮತ್ತು ವಿದ್ಯಾರ್ಥಿಗಳಿಗೆ ಮಹತ್ವಪೂರ್ಣವೆನಿಸುವ, ಉತ್ತಮ ಮಾಹಿತಿಗಳನ್ನೊಳಗೊಂಡ ಟಿಪ್ಪಣಿಗಳನ್ನೂ ಅವರು ನೀಡಿದ್ದಾರೆ. ಈ ಕೃತಿಯನ್ನು ಯಾವುದೇ ಮೂಲ ವ್ಯತ್ಯಾಸವಾಗದಂತೆ ಲೇಖಕ ಎ.ವಿ.ನರಸಿಂಹ ಮೂರ್ತಿ ಯವರು ಕನ್ನಡಕ್ಕೆ ಅನುವಾದ ಮಾಡಿದ್ದಾರೆ.

About the Author

ಎ.ವಿ. ನರಸಿಂಹ ಮೂರ್ತಿ

ಡಾ.ಎ.ವಿ.ನರಸಿಂಹಮೂರ್ತಿ ಅವರು ಇತಿಹಾಸ ಸಂಶೋಧನೆಯಲ್ಲಿ ಕೆಲಸ ಮಾಡಿದ್ದಾರೆ. ಇವರಿಗೆ ಚಿದಾನಂದ ಪ್ರಶಸ್ತಿ ಲಭಿಸಿದೆ. ‘ಐವರು ಸಂತರು, ಸಂಸ್ಕೃತ ಮತ್ತು ವಿಜ್ಞಾನ, ಎಲ್ಲಾ ಧರ್ಮಗಳ ಸಾರವೂ ಒಂದೇ, ಶ್ರೀ ವಿದ್ಯೆಯ ಸಾರ’ - ಮುಂತಾದ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿ, ಸಂಪಾದಿಸಿದ್ದಾರೆ. ಕರ್ನಾಟಕ ವಾಸ್ತುಶಿಲ್ಪ ಉದ್ಯಾನ ಅವರ ಮತ್ತೊಂದು ಸಂಪಾದಿತ ಕೃತಿ.  ...

READ MORE

Related Books