ಸೃಜನೆಯ ಮೂಡು

Author : ಪ್ರೀತಿ ಶುಭಚಂದ್ರ

Pages 368

₹ 165.00




Published by: ರೂಪ ಪ್ರಕಾಶನ
Address: ಬೆಂಗಳೂರು

Synopsys

‘ಸೃಜನೆಯ ಮೂಡು’ ಕೃತಿಯು ಪ್ರೀತಿ ಶುಭಚಂದ್ರ ಅವರ ಲೇಖನಗಳ ಸಂಕಲನವಾಗಿದೆ. ಈ  ಲೇಖನಗಳ ಹಾಗೂ ಅಧ್ಯಯನದ ವ್ಯಾಪ್ತಿ ವಿಸ್ತಾರವಾಗಿದೆ. ಜನಪದ ಸಾಹಿತ್ಯ, ವಡ್ಡಾರಾಧನೆ, ಬೇಂದ್ರೆ ಕಾವ್ಯ, ಜೈನ ಸಾಹಿತ್ಯ, ಬಂಧುವರ್ಮ- ಹೀಗೆ ವೈವಿಧ್ಯಮಯವಾದ ಲೇಖನಗಳು ಇಲ್ಲಿವೆ. ಸಹಜವಾಗಿ ಲೇಖಕಿ ಸ್ತ್ರೀವಾದಿ ದೃಷ್ಟಿಕೋನದಿಂದ ನೋಡಿರುವುದರಿಂದ ಬಹುಪಾಲು ಲೇಖನಗಳಲ್ಲಿ ಮಹಿಳೆಯರು, ಅವರ ಕುರಿತ ಚಿಂತನೆಯೇ ಕೇಂದ್ರವಾಗಿದೆ. ಉದಾಹರಣೆಗೆ ಅವರ ಒಳನೋಟವೊಂದನ್ನು ಇಲ್ಲಿ ಗಮನಿಸಬಹುದು. `ಸ್ತ್ರೀ ವಿರೋಧಿ ಧೋರಣೆಗಳು ಬಹಳ ಸೂಕ್ಷ್ಮವಾಗಿ ನಮ್ಮ ದಿನಬಳಕೆಯ ಭಾಷಾ ವ್ಯಾಪಾರದಲ್ಲಿ ಕಾಣಿಸಿಕೊಳ್ಳುತ್ತದೆ. ಸ್ತ್ರೀ -ಪುರುಷ ಸಂಬಂಧವನ್ನು ಸ್ಥಿರೀಕರಿಸುವ ಕೆಲ ಸಿದ್ಧ ಉಪಮೆ, ರೂಪಕಗಳ ಬಳಕೆ ನಮ್ಮಲ್ಲಿ ಇದೆ; ಹೂ-ದುಂಬಿ, ನದಿ-ಸಾಗರ, ವೀಣೆ-ವೈಣಿಕ, ಲತೆ-ಮರ, ಮಲ್ಲಿಗೆ-ಮಾಮರ ಇತ್ಯಾದಿ. ಈ ಹೋಲಿಕೆಗಳ ಸೌಂದರ್ಯಾತ್ಮಕ ಉಪಯುಕ್ತತೆಗಿಂತ ಸ್ತ್ರೀಯನ್ನು ಅಸಮಾನತೆಯ ನೆಲೆಗೆ ದೂಡುವಲ್ಲಿ ಅವು ವಹಿಸುವ ಪಾತ್ರ ಗಮನಾರ್ಹವಾದುದು.

About the Author

ಪ್ರೀತಿ ಶುಭಚಂದ್ರ
(01 September 1957)

ಮಹಿಳಾ ಅಧ್ಯಯನದ ಬಗ್ಗೆ ವಿಶೇಷ ಅಸ್ಥೆಯುಳ್ಳ ಪ್ರೀತಿ ಶುಭಚಂದ್ರ ಅವರು 1957 ಸೆಪ್ಟಂಬರ್ 01 ರಂದು ಜನಿಸಿದರು. ’ಇಪ್ಪತ್ತನೇ ಶತಮಾನದ ವಚನ ಸಾಹಿತ್ಯ’ ಒಂದು ಅಧ್ಯಯನಕ್ಕೆ ಪಿ.ಎಚ್.ಡಿ ದೊರೆತಿದ್ಧು ಮಹಿಳಾ ಅಧ್ಯಯನದ ತಾತ್ವಿಕ ನೆಲೆಗಳು ಮತ್ತು ಮಹಿಳಾ ಚಳುವಳಿಗಳು. ’ಸೃಜನೆಯ ಮೂಡು’ ಮಹಿಳಾ ಕೇಂದ್ರಿತ ಲೇಖನಗಳ ಸಂಕಲನ). ’ಕನ್ನಡ ಕೈದೀವಿಗ” ಪುಸ್ತಕಗಳ ವಿಮರ್ಶಾ ಪುಸ್ಕವನ್ನು ಪ್ರಕಟಿಸಿದ್ದಾರೆ.  ಡಾ. ಸಿದ್ದಯ್ಯ ಪುರಾಣಿಕ ಸ್ಮಾರಕ ಕಾವ್ಯನಂದ ಪುರಸ್ಕಾರ (ಪಿಎಚ್.ಡಿ. ಕೃತಿಗೆ), ಪ್ರೊ. ಸ.ಸ. ಮಾಳವಾಡ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ಗೌರಮ್ಮ ಹಾರಳ್ಳಿ ದತ್ತಿ ಬಹುಮಾನ, ದಕ್ಷಿಣಭಾರತ ಜೈನ ಮಹಾ ...

READ MORE

Related Books