ಶ್ರೀನಿವಾಸ ಹಾವನೂರ

Author : ಎಸ್.ಎಲ್. ಶ್ರೀನಿವಾಸ ಮೂರ್ತಿ

Pages 80




Year of Publication: 2015
Published by: ಉದಯಭಾನು ಕಲಾಸಂಘ
Address: ಉದಯಭಾನು ಉನ್ನತ ಅಧ್ಯಯನ ಕೇಂದ್ರ ಗವಿಪುರ ಸಾಲುಛತ್ರಗಳ ಎದುರು, ರಾಮಕೃಷ್ಣ ಮಠ ಬಡಾವಣೆ, ಕೆಂಪೇಗೌಡನಗರ, ಬೆಂಗಳೂರು -560019
Phone: 08026757159

Synopsys

ಕನ್ನಡದ ಪ್ರಸಿದ್ಧ ಸಂಶೋಧಕರಲ್ಲಿ ಶ್ರೀನಿವಾಸ ಹಾವನೂರ ಒಬ್ಬರು. ಅಷ್ಟೇ ಹೇಳಿದರೆ ಅವರ ಬಹುಮುಖಿ ವ್ಯಕ್ತಿತ್ವ ಪರಿಚಯವಾಗದು. ಅವರೊಬ್ಬ ಗ್ರಂಥಪಾಲಕ ಸಾಹಿತಿ, ಶಿಕ್ಷಕ, ವಾಕ್ಪಟು, ಸಂಘಟಕ ಹಾಗೂ ನಟ ಆಗಿದ್ದರು. ಕವಿ ಮುದ್ದಣನ ಬಗ್ಗೆ ಸಂಶೋಧನಾ ಗ್ರಂಥವನ್ನು ಪ್ರಕಟಿಸಿದ್ದಾರೆ. ಕನ್ನಡದಲ್ಲಿ ಎಂ. ಎ ಮಾಡಿ ಪಿ.ಎಚ್‌ ಡಿ ಗಳಿಸಿದ ಇವರು , ಮಂಗಳೂರು ವಿಶ್ವವಿದ್ಯಾಲಯದ  ಕನ್ನಡ ವಿಭಾಗದ ಮೊಟ್ಟ ಮೊದಲ ಪ್ರಾಧ್ಯಾಪಕರು ಕೂಡ.

ಕನ್ನಡದ ಮೊದಲ ಪತ್ರಿಕೆ ’ಮಂಗಳೂರ ಸಮಾಚಾರ’ ಕುರಿತು ಅವರು ನಡೆಸಿದ ಸಂಶೋಧನೆ ಅನನ್ಯವಾದುದು. ಭಾಭಾ ಅಣು ಸಂಶೋಧನಾ ಕೇಂದ್ರದ ಗ್ರಂಥಪಾಲಕರಾಗಿ ಕೆಲಸ ಆರಂಭಿಸಿದ ಅವರು ಸಣ್ಣ ಕತೆಗಳು, ಇತಿಹಾಸ ಸಂಶೋಧನೆ, ಸಾಮಾಜಿಕ ವಿಷಯಗಳು, ಕಾದಂಬರಿ ಕಥನಗಳು, ಲಲಿತ ಪ್ರಬಂಧಗಳು, ಸಾಹಿತ್ಯಕ ವಿಶ್ಲೇಷಣೆ, ಕಂಪ್ಯೂಟರ್ ಕನ್ನಡ, ಸಂಶೋಧನಾ ಪ್ರಕ್ರಿಯೆ, ಪತ್ರಿಕೋದ್ಯಮ, ಗಣ್ಯವ್ಯಕ್ತಿಗಳು, ಧಾರ್ಮಿಕ ಹಾಗೂ ದಾಸ ಸಾಹಿತ್ಯ, ಕ್ರೈಸ್ತ ಸಾಹಿತ್ಯ, ಇಂಗ್ಲಿಷ್ ಬರಹಗಳು... ಹೀಗೆ ಅವರು ಕೈಯಾಡಿಸದ ಕ್ಷೇತ್ರಗಳೇ ಇಲ್ಲ.  

ಉದಯಭಾನು ಕಲಾಸಂಘಕ್ಕಾಗಿ ಹಾವನೂರರ ಬದುಕಿನ ಹೆಜ್ಜೆಗಳನ್ನು ಕುರಿತು ಕೃತಿ ರಚಿಸಿರುವವರು ಡಾ. ಎಸ್.ಎಲ್. ಶ್ರೀನಿವಾಸಮೂರ್ತಿ. 

About the Author

ಎಸ್.ಎಲ್. ಶ್ರೀನಿವಾಸ ಮೂರ್ತಿ

ಡಾ, ಎಸ್.ಎಲ್ ಶ್ರಿನಿವಾಸಮೂರ್ತಿ ಅವರು ವಿಜಯ ಪದವಿ ಪೂರ್ವ ಕಾಲೇಜಿನ  ಕನ್ನಡ ವಿಭಾಗದ ಮುಖ್ಯಸ್ಥರಾಗಿದ್ದವರು. ಸಸ್ಯ ಅಂಗಾಂಶ ಕೃಷಿ ಕ್ಷೇತ್ರದಲ್ಲಿ ಹಲವು ವರ್ಷಗಳ ಅನುಭವ ಹೊಂದಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಸ್ನಾತಕೋತ್ತರ ಪದವಿ, ಹಾಗೂ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಬೆಂಜಮಿನ್ ಲೂಯಿರೈಸ್ ರವರ ಜೀವನ ಮತ್ತು ಸಾಧನೆಯನ್ನು ಕುರಿತಂತೆ ರಚಿಸಿದ ಮಹಾಪ್ರಬಂಧಕ್ಕೆ ಪಿ.ಎಚ್.ಡಿ ಪದವಿಯನ್ನು ಪಡೆದಿದ್ಧಾರೆ. ಪಾ.ವೆಂ. ಆಚಾರ್‍ಯರ ಸಮಗ್ರ ಬರಹಗಳ ಹಲವು ಸಂಪುಟಗಳನ್ನು ಸಂಪಾದಿಸಿದ್ದಾರೆ. ಕೃತಿ ಸಂಪಾದನೆ, ಪುಸ್ತಕ ಸಂಪಾದನೆ , ಪುಸ್ತಕ ವಿಮರ್ಶೆ, ಕಾರ್ಯದಲ್ಲಿ ತಮ್ನನ್ನು ತೊಡಗಿಸಿಕೊಂಡಿದ್ದಾರೆ.  ...

READ MORE

Related Books