ಶ್ರೀನಿವಾಸ ರಾಮಾನುಜನ್

Author : ಬಿ.ಪಿ. ರಾಧಾಕೃಷ್ಣ

Pages 225

₹ 45.00




Year of Publication: 1992
Published by: ಕನ್ನಡ ವಿಜ್ಞಾನ ಪರಿಷತ್ತು
Address: ವನಸುಮ, 711, 4ನೇ ಹಂತ, ಜಯನಗರ, ಬೆಂಗಳೂರು- 560011

Synopsys

ಈ ಪುಸ್ತಕದಲ್ಲಿ ವಿಶ್ವದ ಶ್ರೇಷ್ಠ ಗಣಿತಜ್ಞರೆಂದೇ ಪ್ರಖ್ಯಾತರಾಗಿದ್ದ ಶ್ರೀನಿವಾಸ ರಾಮಾನುಜನ್ ಅವರ ಜೀವನ ಚಿತ್ರಣವಿದೆ. ಈ ಕೃತಿಯನ್ನು ಲೇಖಕ, ಭೌತವಿಜ್ಞಾನಿ ಬಿ.ಪಿ. ರಾಧಾಕೃಷ್ಣ ಅವರು ರಚಿಸಿದ್ದಾರೆ.

ರಾಬರ್ಟ್ ಕನಿಗೆಲ್ ಅವರು 1991ರಲ್ಲಿ ಪ್ರಕಟಿಸಿದ The Man Who Knew Infinity ಎಂಬ ಪುಸ್ತಕದಿಂದ ಪ್ರಭಾವಿತರಾಗಿದ್ದ ಪಿ. ಬಿ. ರಾಧಾಕೃಷ್ಣ ಅವರು, ರಾಮಾನುಜನ್ ಕುರಿತಾದ ಅಧ್ಯಯನವನ್ನು ಕೈಗೊಂಡು ರಚಿಸಿದ ಮಹತ್ವದ ಕೃತಿ ಇದು.

About the Author

ಬಿ.ಪಿ. ರಾಧಾಕೃಷ್ಣ
(30 April 1918)

ಬಿ.ಪಿ. ರಾಧಾಕೃಷ್ಣ ಅವರು ಹುಟ್ಟಿದ್ದು ಬೆಂಗಳೂರಿನಲ್ಲಿ. ತಂದೆ ಬಿ.ಪುಟ್ಟಯ್ಯ, ತಾಯಿ ವೆಂಕಮ್ಮ. ರಾಧಾಕೃಷ್ಣರ ವಿದ್ಯಾಭ್ಯಾಸವೆಲ್ಲ ನಡೆದಿದ್ದು ಬೆಂಗಳೂರಿನಲ್ಲಿ. ಸೆಂಟ್ರಲ್ ಕಾಲೇಜಿನಿಂದ ಭೂವಿಜ್ಞಾನದ ಪದವಿ (ಬಿ.ಎಸ್ಸಿ.ಆನರ್ಸ್) 1937ರಲ್ಲಿ ಪಡೆದು, ಮೈಸೂರು ಸಂಸ್ಥಾನದ ಭೂವಿಜ್ಞಾನ ಇಲಾಖೆಗೆ ಕ್ಷೇತ್ರ ಸಹಾಯಕರಾಗಿ ಸೇರಿ, ವಿವಿಧ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿ ನಿರ್ದೇಶಕರಾಗಿ ನಿವೃತ್ತರಾದರು. ರಾಮನಗರದ ಕಲ್ಲುಬಂಡೆಗಳ ಬಗ್ಗೆ ವಿಶೇಷಾಧ್ಯಯನ ಕೈಗೊಂಡು ಪ್ರಬಂಧ ಮಂಡಿಸಿ, ಮೈಸೂರು ವಿಶ್ವವಿದ್ಯಾಲಯದಿಂದ 1954ರಲ್ಲಿ ಡಾಕ್ಟರೇಟ್ ಪಡೆದರು. ನೇರನುಡಿಯ, ನಿಷ್ಠುರ ವರ್ತನೆಯ, ಸಮಯ ಪ್ರಜ್ಞೆಯ ಖಂಡಿತವಾದಿಯಾಗಿದ್ದರು. ಕರ್ನಾಟಕದ ಶಿಲೆಗಳ ಬಗ್ಗೆ ವಿಶೇಷಾಧ್ಯಯನ ಮಾಡಿದಂತೆ ಭೂಮಿಯ ಒಡಲಲ್ಲಿರುವ ಖನಿಜ ನಿಕ್ಷೇಪವನ್ನು ಗುರುತಿಸಿ, ಕರ್ನಾಟಕದ ಅಭ್ಯುದಯಕ್ಕೆ ಬಳಸಿಕೊಳ್ಳುವಂತಹ ...

READ MORE

Related Books