ಸ್ತ್ರೀಪಥ

Author : ನಾಗಮಣಿ ಎಸ್ .ರಾವ್

Pages 112

₹ 65.00




Year of Publication: 2012
Published by: ನವಕರ್ನಾಟಕ ಪ್ರಕಾಶನ
Address: ಎಂಬೆಸಿ ಸೆಂಟರ್, ನಂ.11, ಕ್ರೆಸೆಂಟ್ ರಸ್ತೆ, ಬೆಂಗಳೂರು-560 001
Phone: 08022161900

Synopsys

ಸ್ತ್ರೀಪಥ -ಸ್ತ್ರೀವಾದದ ಕುರಿತು ನಾಗಮಣಿ ಎಸ್. ರಾವ್‌ ಅವರು ಬರೆದ ಕೃತಿ. ನವಕರ್ನಾಟಕ ಪ್ರಕಾಶನ ವನಿತಾ ಜೀವನ ಮಾಲೆಯಡಿ ಈ ಕೃತಿಯು ಪ್ರಕಟವಾಗಿದೆ. ಈ ಕೃತಿಯು ಮುಖ್ಯವಾಗಿ ಸ್ತ್ರೀವಾದ, ಸ್ತ್ರೀವಾದದ ವಿವಿಧ ಮಜಲುಗಳ ಕುರಿತು, ಸ್ತ್ರೀವಾದದ ಬಗೆಗಳ ಕುರಿತು ಈ ಕೃತಿಯು ಚರ್ಚಿಸುತ್ತದೆ.

About the Author

ನಾಗಮಣಿ ಎಸ್ .ರಾವ್
(11 May 1936)

ಕನ್ನಡ ಸಾಹಿತ್ಯದಲ್ಲಿ ಆಸಕ್ತಿಯುಳ್ಳ ನಾಗಮಣಿ ಎಸ್. ರಾವ್ ಅವರು ಮಹಿಳಾ ಮತ್ತು ಮಕ್ಕಳ ಸಾಹಿತ್ಯ ರಚನೆಯಲ್ಲಿ ಸಕ್ರಿಯರು. ರಾಜ್ಯ ವಿಧಾನಮಂಡಲದ ಕಾರ್ಯ ಕಲಾಪಗಳನ್ನು ವರದಿ ಮಾಡಿದ ಪ್ರಥಮ ಮಹಿಳಾ ಪತ್ರಕರ್ತೆ. 'ಆಕಾಶವಾಣಿ ಪ್ರದೇಶ ಸಮಾಚಾರ'ದ ವಾರ್ತಾವಾಚಕಿ ವಿಧಾನಸಭಾ ಚುನಾವಣೆಯ ಆ್ಯಂಕರ್‌ ವ್ಯಕ್ತಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಅವರು 1936 ಮೇ 11 ರಂದು ಜನಿಸಿದರು. ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷರು ಆಗಿದ್ದ ಅವರು “ಸ್ತ್ರೀಪಥ,  ಧೀಮತಿಯರು ಅವರ ಮಹಿಳಾ ಸಾಹಿತ್ಯ, ಏಕಲವ್ಯ ಮಕ್ಕಳ ಸಾಹಿತ್ಯ ರಚನೆಯಾಗಿದೆ. ಸಂವರ್ಧಿನೀ, ಲೇಖ-ಲೋಕ-2, , ಧೀಮಂತ ಪತ್ರಕರ್ತ 'ತಾಯಿನಾಡು' ಪಿ.ಆರ್. ರಾಮಯ್ಯ, ರಂಗಲೇಖಕಿ, ಬಸ್ಸಿನೊಳಗೊಂದು ...

READ MORE

Reviews

(ಹೊಸತು, ಜುಲೈ 2012, ಪುಸ್ತಕದ ಪರಿಚಯ)

ಸ್ವಾತಂತ್ರೋತ್ತರ ಕಾಲದ ಮಹಿಳೆ ಸಾಗಿಬಂದ ದಾರಿಯಲ್ಲಿನ ಪರಿಚಯವೊಂದು ಇಲ್ಲಿ ಸಿಗುತ್ತದೆ. ಆಧುನಿಕ ಯುಗದಲ್ಲಿ ಒದಗಿಬಂದ ಪೂರಕ ಅವಕಾಶಗಳನ್ನು ಸರಿಯಾಗಿ ಬಳಸಿಕೊಂಡು ಒಂದಿಷ್ಟು ನೆಮ್ಮದಿಯ ವಾತಾವರಣ ಆಕೆಗೆ ಲಭಿಸಿದ್ದು ಸುಳ್ಳಲ್ಲ. ಕೆಲವು ಶತಮಾನಗಳ ಹಿಂದಿನ ಮಹಿಳೆಗೆ ಹೋಲಿಸಿದಲ್ಲಿ ಅ೦ದಿನ ದಾರುಣ ಪರಿಸ್ಥಿತಿಯೇನೂ ಇಂದಿಲ್ಲವೆಂದು ಒಪ್ಪಿಕೊಳ್ಳಲೇಬೇಕು. ಸಮುದಾಯದಲ್ಲಿನ ಆಗುಹೋಗುಗಳಲ್ಲಿ ಮತ್ತು ಪ್ರಮುಖ ನಿರ್ಧಾರಗಳಲ್ಲಿ ಆಕೆ ಪಾಲ್ಗೊಳ್ಳುವುದನ್ನು ನಿರಾಕರಿಸಿ ಮರೆಯಲ್ಲಿಯೇ ಇರಿಸಿದಾಗ ಅಧೀನಬಾಳನ್ನು ಬಾಳಬೇಕಾಗಿ ಬಂದದ್ದು ಕೂಡ ಚರಿತ್ರೆಯಲ್ಲಿನ ಯಾವುದೋ ಒಂದು ಕಾಲಘಟ್ಟದಲ್ಲಿ ಮಾತ್ರ. ಹೆಣ್ಣುಮಕ್ಕಳ ರಕ್ಷಣೆಗೆಂದು ಪ್ರಾರಂಭವಾಗಿ ಮುಂದೆ ಆ ಹಿಡಿತ ಬಿಗಿಯಾಗಿ, ಶೋಷಣೆ - ಕ್ರೌರ್ಯದ ಹಂತ ತಲುಪಿ ತೀರ ಇತ್ತೀಚಿನವರೆಗೂ ಮುಂದುವರಿದು ಆಕೆಯ ಉಸಿರುಕಟ್ಟಿದ್ದು ಮಾತ್ರ ನಿಜ. ಇಪ್ಪತ್ತನೆಯ ಶತಮಾನದ ಸ್ತ್ರೀ ಬಿಡುಗಡೆಗಾಗಿ ಹಂಬಲಿಸಿದ್ದಾಳೆ. ಇಂದಿನ ಪರಿಸರದಲ್ಲಿ ಆಕೆಗೆ ಸಹೃದಯಿ ಪುರುಷ ವರ್ಗದಿಂದಲೂ ಸಹಕಾರ ದೊರೆಯುತ್ತಿದೆ. ಪುರುಷರಿಗಾಗಿ ಮಾತ್ರವಾಗಿದ್ದ ಕ್ಷೇತ್ರಗಳಲ್ಲೂ ಆಕೆ ಛಾಪು ಮೂಡಿಸುತ್ತಿದ್ದಾಳೆ. ಇಲ್ಲಿನ ಲೇಖನಗಳು ಈ ಬಗ್ಗೆ ಧಾರಾಳ ಮಾಹಿತಿ ನೀಡಿವೆ. ಬೀಜಿಂಗ್‌ನಲ್ಲಿ ನಡೆದ ನಾಲ್ಕನೆಯ ಬೃಹತ್ ವಿಶ್ವ ಮಹಿಳಾ ಸಮ್ಮೇಳನವು ಮಹಿಳೆ ಜಾಗತಿಕವಾಗಿ ಗಳಿಸಿದ ಸ್ಥಾನಮಾನವನ್ನು ಸೂಚಿಸುತ್ತದೆ. ಮಹಿಳೆಗೆ ದೊರಕಿದ ಈ ಸ್ವಾತಂತ್ರ್ಯ ಸ್ವಚ್ಛೆಯಾಗದಂತೆ ಜಾಗ್ರತೆಯಿಂದಿರಬೇಕಾದ ಹೊಣೆ ಆಕೆಯದು.

 

Related Books