ಸುಣ್ಣದ ಸಾಲು (ಕ್ರೀಡಾ ಗಜಲ್ ಗಳು)

Author : ದೇವೇಂದ್ರ ಕಟ್ಟಿಮನಿ

Pages 65

₹ 60.00




Year of Publication: 2021
Published by: ಅಭಿಜ್ಞಾನ ಪ್ರಕಾಶನ
Address: ಹಿಪ್ಪರಗ ಬಾಗ ತಾ.ಬಸವಕಲ್ಯಾಣ ಜಿಲ್ಲೆ ಬೀದರ
Phone: 9880465181

Synopsys

ಕವಿ ದೇವೇಂದ್ರ ಕಟ್ಟಿಮನಿ ಅವರ ಕ್ರೀಡಾ ಗಜಲ್ ಗಳ ಸಂಕಲನ-ಸುಣ್ಣದ ಸಾಲು. ರಾಷ್ಟ್ರೀಯ ಭಾವೈಕ್ಯತೆ, ದೇಶಭಕ್ತಿ, ಕ್ರೀಡಾ ಪ್ರೀತಿ, ದೈಹಿಕ ಶಿಕ್ಷಣದ ಒಲವು. ಆರೋಗ್ಯ ಶಿಕ್ಷಣ, ಮೌಲ್ಯಶಿಕ್ಷಣ, ಯೋಗ, ವ್ಯಾಯಾಮ, ಸಾಹಿತ್ಯ.ಪ್ರಕೃತಿ, ಸಮಾಜ ಸೇವೆಯ ತೀವ ಕಾಳಜಿಗಳಿರುವುದನ್ನು ಈ ಗಜಲ್ ರಚನೆಗಳು ನುಡಿಯುತ್ತವೆ. ಸಮಕಾಲಿನ ಸಾಮಾಜಿಕ ಪ್ರಜ್ಞೆಗಳು ಮಿಳಿತವಾಗಿವೆ.

'ದೈಹಿಕ ಶಿಕ್ಷಣ' ಎಂಬ ಮೊದಲ ಗಜಲ್ ಕವನದಿಂದ 'ಏನಿದು ಕ್ರೀಡೆ' ಎನ್ನುವ ಗಜಲ್‌' ವರೆಗೆ ಉತ್ತಮವಾಗಿ ರಚಿಸಿದ್ದು, ಅಂತಾರಾಷ್ಟ್ರೀಯ, ರಾಷ್ಟ್ರೀಯ, ಸ್ಥಳಿಯ ಹಾಗೂ ಗ್ರಾಮೀಣ ಕ್ರೀಡೆಗಳ ನಿಯಮಗಳು, ಉಪಯೋಗಗಳು ಮತ್ತು ಮಹತ್ವಗಳು ಅಲ್ಲದೆ ಕ್ರೀಡೆ ಮತ್ತು ವ್ಯಾಯಾಮಗಳಿಂದ ವ್ಯಕ್ತಿಯ ದೈಹಿಕ ಮತ್ತು ಬೌದ್ದಿಕ ಮಟ್ಟ ಬಲಪಡಿಸುತ್ತದೆ. ಗಜಲ್‌ಗಳ ಮೂಲಕ ಕ್ರೀಡಾಭಾವನೆಯ ಹೊಸ ಬಳ್ಳಿ ಹಬ್ಬಿಸುವ ಪ್ರಯತ್ನದೊಂದಿಗೆ ಕ್ರೀಡಾ ಜಾಗೃತಿ ಮೂಡಿಸಿದ್ದಾರೆ. ದ್ವಿಪದಿಗಳಲ್ಲಿ ರಚನೆಗೊಂಡ ಈ ಗಜಲ್‌ಗಳ ಸಾಲುಗಳಲ್ಲಿ ಏನೋ ಒಂದು ಹೊಸತನ, ಕ್ರೀಡಾ ಅನನ್ಯತೆ, ಕ್ರೀಡಾ ಸ್ಫೂರ್ತಿಯನ್ನು ತಂದು ಕೊಡುತ್ತವೆ.  ಗಜಲ್ ಗಳಲ್ಲಿ ಆಟ,ಓಟಗಳ ಬಗೆ ಇವೆ. ವಿವಿಧ ಆಟೋಟಗಳನ್ನು ಗಝಲ್ ನ ಮೂಲಕವೇ ಪ್ರಸ್ತಾಪಿಸಿರುವುದು ಅನನ್ಯವಾಗಿದೆ.

 

About the Author

ದೇವೇಂದ್ರ ಕಟ್ಟಿಮನಿ
(05 September 1983)

ಕವಿ ದೇವೇಂದ್ರ ಕಟ್ಟಿಮನಿ ಅವರು ಬೀದರ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಹಿಪ್ಪರಗಬಾಗ ಗ್ರಾಮದವರು. ತಂದೆ ಅಂಬಣ್ಣ ಕಟ್ಟಿಮನಿ , ತಾಯಿ  ಕಾಶಿಬಾಯಿ, ಹುಟ್ಟೂರಿನಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ, ಪಿಯುಸಿ ಹಾಗೂ ಪದವಿ ಶಕ್ಷಣ ಕಮಲಾಪುರದಲ್ಲಿ, ರಾಯಚೂರಿನಲ್ಲಿ  ಬಿ.ಪಿ.ಇಡಿ ಶಿಕ್ಷಣ, ಶಿವಮೊಗ್ಗದ ಕುವೆಂಪು ವಿ.ವಿ.ಯಲ್ಲಿ ಎಂ.,ಎ. ಪದವೀಧರರು. ಸದ್ಯ, ರಾಯಚೂರು ತಾಲೂಕಿನ ಇಡಪನೂರು ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿದ್ದಾರೆ.   ಕಥೆ,ಕವನ ರಚನೆ, ಯೋಗಾಭ್ಯಾಸ, ರೆಡ್ ಕ್ರಾಸ್ ಮತ್ತು ಸ್ಕೌಟಿಂಗ್ ಮೂಲಕ ಸೇವೆ ಸಲ್ಲಿಸುವ ಇವರು, 2019 ರಿಂದ ಶಾಲಾ ಮಕ್ಕಳ ಪ್ರತಿಭಾ ಪುರಸ್ಕಾರಕ್ಕಾಗಿ  ಶ್ರೀ ಅಂಬಣ್ಣ ಕಟ್ಟಿಮನಿ ಸ್ಮರಣಾರ್ಥ ಅಭಿಜ್ಞಾನ ಪ್ರಶಸ್ತಿ ಪ್ರಾರಂಭಿಸಲಾಗಿದೆ. 2020 ರಲ್ಲಿ ರಾಯಚೂರಿನಲ್ಲಿ ಶ್ರೀ ಕೆ.ತಿಮ್ಮಯ್ಯ ...

READ MORE

Related Books