ಸ್ವಚ್ಛ ಭಾಷೆ ಅಭಿಯಾನ

Author : ಶ್ರೀವತ್ಸ ಜೋಶಿ

₹ 250.00




Year of Publication: 2022
Published by: ಸಾಹಿತ್ಯ ಪ್ರಕಾಶನ

Synopsys

ಸ್ವಚ್ಛ ಭಾಷೆ ಅಭಿಯಾನ ಶ್ರೀವತ್ಸ ಜೋಷಿ ಅವರ ಕೃತಿಯಾಗಿದೆ. ಈ ಸರಣಿಯು ಬಹುಚಿತವಾಗಿ ಮತ್ತು ಪರಿಣಾಮಕಾರಿಯಾಗಿ ಮೂಡಿಬಂದಿದೆ. ಜೀವಂತ ಭಾಷೆಯೊಂದು ಅಡೆತಡೆಗಳನ್ನು ದಾಟಿ ಕಾಲದೇಶಗಳಲ್ಲಿ ಪ್ರವಹಿಸುವ ನದಿಯಿದ್ದಂತೆ ಎಂದು ಭಾವಿಸುವುದಾದರೆ, ಅದು ಹಲವು ಜನರ ಬಳಕೆಗೆ ಸಿಕ್ಕಿ ಮಲಿನಗೊಳ್ಳುವುದು ಸಹಜವೆ. ಹಿಂದೆಲ್ಲಾ ಭಾಷೆಯ ಮೂಲ ಉಗಮಸ್ಥಾನ ಋಷಿಗಳ, ಮಹಾಕವಿಗಳ ಧ್ಯಾನಸ್ಥ ಮನಸ್ಸಿನಲ್ಲಾಗುತ್ತಿದ್ದ ಕಾಮಾರಣೆಯ ಗಂಗಾವತರಣವಾಗಿರುತ್ತಿದ್ದರೆ, ಅದಕ್ಕೆ ಉಪನದಿಗಳಾಗಿ ಬಂದು ಸೇರುತ್ತಿದ್ದುದು ಮನೆಮನೆಯ ತಾಯಂದಿರ ಯಕ್ಷಗಾನ ಬೀದಿನಾಟಕಗಳು, ಮೌಲ್ಯಯುತ ಪತ್ರಕರ್ತರ ಲೇಖನಗಳು, ಶಾರದೆಯೊಳಿದ ಪ್ರಾಚಾರ್ಯರ ಬೋಧನೆಗಳು, ಬಾನುಲಿ-ದೂರದರ್ಶನಗಳ ಅತ್ಯುತ್ತಮ ಗುಣಮಟ್ಟದ ವಾರ್ತಾ ವಾಚನಗಳು, ಆದರೆ ಇಂದು ಸ್ವಾರ್ಥಸಾಧಿಸುವ ಭಾಷೆಯನ್ನೂ ನದಿಯಂತೆಯೇ ಕಲುಷಿತಗೊಳಿಸುತ್ತಿರುವ ಮಾಲಿನ್ಯದ ಗಂಟೆಗಳೂ, ವಟಗುಟ್ಟುವ ಲೈಟ್ ಬೀದಿ ವಾಚಕರು, ಕೀಳು ಅಭಿರುಚಿಯ, ಪ್ರತಿಭೆಯಿಲ್ಲದ ಸಿನೆಮಾ ಸಾಹಿತಿಗಳು, ಸ್ವಘೋಷಿತ ಬುದ್ಧಿಜೀವಿ ಹೋರಾಟಗಾರರು, ಬದ್ಧತೆಯಿಲ್ಲದೆ ಪತ್ರಕರ್ತರು, ಸೊಂಟದ ಕೆಳಗಿನ ಭಾಷೆಯನ್ನೇ ಹಾಸ್ಯವೆಂದು ನಂಬಿಸಲೆತ್ನಿಸುವ ಸ್ಟ್ಯಾಂಡ್ ಅಪ್ ಕಾಮಿಡಿಯನ್ನರು, ಇಂತಹ ಆಸಂಖ್ಯೆ ಕಾರ್ಖಾನೆಗಳು ಉತ್ಪಾದಿಸುತ್ತಿರುವ ಭಾವಾ ಮತ್ತು ಬೌದ್ಧಿಕ ಕಸಕ್ಕೆ ಇಲ್ಲವಾಗಿದೆ ಎಂದು ಪುಸ್ತಕದ ಬೆನ್ನುಡಿಯಲ್ಲಿ ವರುಣ ವಸಿಷ್ಠ ಅವರು ತಿಳಿಸಿದ್ದಾರೆ.

About the Author

ಶ್ರೀವತ್ಸ ಜೋಶಿ

ಮೂಲತಃ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಮಾಳದವರಾದ ಶ್ರೀವತ್ಸ ಜೋಶಿ ದಾವಣಗೆರೆಯ ಬಿ.ಡಿ.ಟಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಕಂಪ್ಯೂಟರ್ ವಿಜ್ಞಾನದಲ್ಲಿ ತಾಂತ್ರಿಕ ಶಿಕ್ಷಣ ಪಡೆದರು. ಕಲಿತದ್ದು  ಎಂಜಿನಿಯರಿಂಗ್ ಆದರೂ ಕನ್ನಡದ ಬಗ್ಗೆ ಅಭಿಮಾನವಷ್ಟೇ ಅಲ್ಲದೆ ಪತ್ರಿಕಾರಂಗದ ಬಗ್ಗೆ ಆಸಕ್ತಿಯೂ ಹೊಂದಿದ್ದಾರೆ. ಪ್ರಸ್ತುತ ಅಮೆರಿಕದ ವರ್ಜೀನಿಯಾದಲ್ಲಿ ವೃತ್ತಿಜೀವನ ನಡೆಸುತ್ತಿರುವ ಶ್ರೀವತ್ಸ ಜೋಶಿ ಕನ್ನಡದ ಪ್ರಸಿದ್ಧ ಪತ್ರಿಕೆಗಳ ಅಂಕಣ ಬರಹಗಾರರಾಗಿಯೂ ಕೂಡ ಹೆಸರು ಮಾಡಿದ್ದಾರೆ. ಕನ್ನಡ ನಾಡು, ನುಡಿ, ಭಾಷೆಯ ಬಗ್ಗೆ ಅಭಿಮಾನ ಹೊಂದಿರುವ ಇವರು ದಟ್ಸ್ ಕನ್ನಡ.ಕಾಮ್ ಅಂತರ್ಜಾಲ ಕನ್ನಡ ಪತ್ರಿಕೆಯಲ್ಲಿ ಸತತ ಐದು ವರ್ಷಗಳ ವರೆಗೆ ವಿಚಿತ್ರಾನ್ನ ಹೆಸರಿನ ಸಾಪ್ತಾಹಿಕ ಅಂಕಣವನ್ನು ...

READ MORE

Related Books