‘ಸ್ವಾಮಿ ವಿವೇಕಾನಂದ’ ಭಾರತದ ದಿವ್ಯ ಸಂದೇಶದ ಸಾಕಾರ ರೂಪ ಸ್ವಾಮಿ ವಿವೇಕಾನಂದರ ಜೀವನ ಚರಿತ್ರೆ. ಡಾ. ಮಹೇಂದ್ರ ಮಿಟ್ಟಲ್ ಅವರ ಕೃತಿಯನ್ನು ಹ.ಚ. ನಟೇಶ್ ಬಾಬು ಕನ್ನಡಕ್ಕೆ ಅನುವಾದಿಸಿದ್ದಾರೆ. ವಸಂತ ಪ್ರಕಾಶನದ ಮಕ್ಕಳಿಗಾಗಿ ದೇಶ ವಿದೇಶಗಳ ಸ್ವಾರಸ್ಯ ಕಥೆಗಳು ಮಾಲಿಕೆಯಲ್ಲಿ ಪ್ರಕಟವಾದ ಕೃತಿ ಇದು. ಮಕ್ಕಳಲ್ಲಿ ತಿಳಿವಳಿಕೆ, ಬುದ್ಧಿ ಶಕ್ತಿ, ಜಾಣತನ, ಸಾಂದರ್ಭಿಕ ಚಿತ್ತಸ್ಥೈರ್ಯ, ಮಾನವೀಯ ಮೌಲ್ಯಗಳನ್ನು ತುಂಬುವ ಸಲುವಾಗಿ ಪ್ರಕಟವಾದ ಮಹತ್ತರರ ಕೃತಿಗಳಲ್ಲಿ ಸ್ವಾಮಿ ವಿವೇಕಾನಂದರ ಜೀವನಚರಿತ್ರೆಯಿರುವ ಈ ಕೃತಿಯೂ ಒಂದು.
©2025 Book Brahma Private Limited.