ಸ್ವಾಮಿ ವಿವೇಕಾನಂದ (ಜೀವನ ಚಿತ್ರ)

Author : ಕಲ್ಯಾಣರಾವ ಜಿ. ಪಾಟೀಲ

Pages 66

₹ 10.00




Year of Publication: 2006
Published by: ಶ್ರೀ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ,
Address: # ಹೈದ್ರಾಬಾದ ಕರ್ನಾಟಕ ಅಭಿವೃದ್ಧಿ ವಿಭಾಗ, ಸೇಡಂ, ಕಲಬುರಗಿ ಜಿಲ್ಲೆ

Synopsys

ಸ್ವಾಮಿ ವಿವೇಕಾನಂದರ ಜೀವನ ಸಾಧನೆಯನ್ನು ಹಿಡಿದಿಟ್ಟಿರುವ ಈ ಹೊತ್ತಿಗೆಯಲ್ಲಿ 1. ಪ್ರವೇಶ 2. ಪರಿಸರ, ಪ್ರೇರಣೆ 3. ಸಾಧನೆ, ಸಮರ್ಪಣೆ 4. ಸಮಸ್ತ ಭಾರತ ಸಂಚಲನೆ 5. ಪ್ರಪಂಚ ಪರ್ಯಟನೆ 6. ಸ್ಫೂರ್ತಿ ಪಥ 7. ಮಹಾ ಸಮಾಧಿ 8. ವಿದ್ಯುತ್ ವಾಣಿ ಮತ್ತು 9. ದರ್ಶನ ದೀಪ್ತಿ ಹೀಗೆ 9 ಅಧ್ಯಾಯಗಳಿವೆ. ಶ್ರೀ ರಾಜಾ ರಾಮ ಮೋಹನರಾಯರು ಸಲ್ಲಿಸಿದ ಸಮಾಜೋಧಾರ್ಮಿಕ, ಶೈಕ್ಷಣಿಕ ಸಾಧನೆ; ಶ್ರೀ ದೇವೇಂದ್ರನಾಥ ಠಾಗೂರ್ ಮತ್ತು ಶ್ರೀ ಕೇಶವಚಂದ್ರ ಸೇನ್ ಅವರ ಮಾನವೀಯ ಸೇವೆ; ಶ್ರೀ ಈಶ್ವರಚಂದ್ರ ವಿದ್ಯಾಸಾಗರ ಮತ್ತು ಶ್ರೀ ದಯಾನಂದ ಸರಸ್ವತಿಯವರ ವೈಚಾರಿಕ ಚಳವಳಿಗಳನ್ನು ಸಂಕ್ಷಿಪ್ತವಾಗಿ ಪರಿಶೀಲಿಸಿದೆ. 2ನೇ ಅಧ್ಯಾಯದಲ್ಲಿ ಅಂದು ಭಾರತದ ರಾಜಧಾನಿಯಾಗಿದ್ದ ಕಲ್ಕತ್ತಾ ನಗರದ ಹಿನ್ನೆಲೆಯೊಂದಿಗೆ, ದತ್ತ ಮನೆತನದ ಪರಂಪರೆ, ವಿಶ್ವನಾಥ ಮತ್ತು ಭುವನೇಶ್ವರಿಯವರ ಭಕ್ತಿ ಸಾಧನೆ, ವೀರೇಶ್ವರನ ಜನನ, ಮುಂದೆ ಆ ಬಾಲಕ ನರೇಂದ್ರನಾಗಿ ಬೆಳೆದ ಪರಿ, ವಿದ್ಯಾಭ್ಯಾಸ, ತೀಕ್ಷ್ಣ ಕುತೂಹಲಕಾರಿ ಮನೋಭಾವದ ಯುವಕ ದಕ್ಷಿಣೇಶ್ವರದ ದೇವಮಾನವನ ದರ್ಶನ ಮಾಡುವವರೆಗಿನ ಚಿತ್ರಣವಿದೆ. ಮುಂದೆ ಶ್ರೀ ರಾಮಕೃಷ್ಣರ ಪ್ರಭಾವದಲ್ಲಿ ನರೇಂದ್ರ ಬೆಳೆದ ಬಗೆ, ಆಧ್ಯಾತ್ಮಿಕ ಸಾಧನೆಯ ಪೂರ್ವಸಿದ್ಧತಾ ಕಾರ್ಯಕ್ಷಮತೆ, ಗುರು-ಶಿಷ್ಯರ ನಡುವಿನ ನಿಷ್ಕಳಂಕ ಸಂಬಂಧ, ತಂದೆ ತಾಯಿಯರ ಮತ್ತು ಗುರುವಿನ ಮಾರ್ಗದರ್ಶನದಲ್ಲಿ ನರೇಂದ್ರನು ಭೌತಿಕ ಮತ್ತು ಭಾವನಾತ್ಮಕ ಲೋಕಗಳ ಅರಿವಿನ ಆಗರವಾದ ಬಗ್ಗೆ 3ನೇ ಅಧ್ಯಾಯದಲ್ಲಿ ವಿವರಗಳಿವೆ. ವಿವೇಕಾನಂದರು ವಿವಿಧ ನಾಮಾಂಕಿತಗಳಲ್ಲಿ ಸಮಸ್ತ ಭಾರತದುದ್ದಗಲಕ್ಕೂ ಸಂಚರಿಸಿದ ಬಗೆಯನ್ನು4ನೇ ಅಧ್ಯಾಯದಲ್ಲಿ ವಿವರಿಸಿದೆ. 5ನೇ ಅಧ್ಯಾಯದಲ್ಲಿ ಸ್ವಾಮಿ ವಿವೇಕಾನಂದರು ಅಮೇರಿಕೆಗೆ ಹೋಗಿ ಅಲ್ಲಿ ವಿಶ್ವಧರ್ಮ ಸಮ್ಮೇಳನದಲ್ಲಿ ಭಾಗವಹಿಸಿದ ಬಗೆ, ಆನಂತರ ಅವರು ಜಗತ್ತಿನ ಮೂಲೆ ಮೂಲೆಗಳಲ್ಲಿ ಸಂಚರಿಸಿದ ಸನ್ನಿವೇಶಗಳನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸಲಾಗಿದೆ. 6ನೇ ಅಧ್ಯಾಯ- ಸ್ಫೂರ್ತಿಪಥ. ಸ್ವಾಮಿ ವಿವೇಕಾನಂದರು ಯುವಕರಿಗಾಗಿ ಮಾಡಿದ ಸ್ಫೂರ್ತಿಯುತ ಭಾಷಣಗಳ ತುಣುಕುಗಳನ್ನು ವಿಶ್ಲೇಷಿಸಿದೆ. ಮಹಾಸಮಾಧಿ-7ನೇ ಅಧ್ಯಾಯದಲ್ಲಿ ಸ್ವಾಮಿ ವಿವೇಕಾನಂದರ ಜೀವಿತಾವಧಿಯ ಕೊನೆಯ ದಿನದ ಕ್ಷಣ ಗಳ ಅನಾವರಣವಿದೆ. ವಿದ್ಯುತ್ ವಾಣಿ ಮತ್ತು ದರ್ಶನ ದೀಪ್ತಿ -ಅಧ್ಯಾಯಗಳಲ್ಲಿ ವಿವೇಕಾನಂದರ ಸಮಗ್ರ ಕೃತಿಶ್ರೇಣಿಗಳಿಂದ ಆಯ್ದ ನುಡಿಗಡಣಗಳನ್ನು ಸಂಗ್ರಹಿಸಲಾಗಿದೆ. ವಿಶ್ವಮಾನವೀಯತೆಯ ಬೆಳಗಿನ ದಾರಿ ತೋರಿದ ಸ್ವಾಮಿ ವಿವೇಕಾನಂದರ ಜೀವನ ಸಾಧನೆಯ ದರ್ಶನದೀಪ್ತಿಯನ್ನು ಕರಿಯನ್ನು ಕನ್ನಡಿಯಲ್ಲಿ ಹಿಡಿದಿಟ್ಟಂತೆ ಆ ಮಹಾನ್ ದಾರ್ಶನಿಕರ ಜೀವನ ಸಾಧನೆಯ ನೆಲೆಗಳನ್ನು ವಿವರಿಸಿದೆ. ಸ್ವಾಮಿ ವಿವೇಕಾನಂದರ ಕುರಿತು ಕನ್ನಡದಲ್ಲಿ ಈವರೆಗೆ ಬಂದಿರುವ ಬಹುತೇಕ ಕೃತಿಗಳೆಲ್ಲವನ್ನು ಅಧ್ಯಯನ ಮಾಡಿದ ಲೇಖಕರ ವಾಚನಾಭಿರುಚಿ ಈ ಕೃತಿಯುದ್ದಕ್ಕೂ ಕಂಡು ಬರುತ್ತದೆ.

About the Author

ಕಲ್ಯಾಣರಾವ ಜಿ. ಪಾಟೀಲ

ಲೇಖಕ ಡಾ. ಕಲ್ಯಾಣರಾವ ಜಿ. ಪಾಟೀಲ ಅವರು ಮೂಲತಃ ಕಲಬುರಗಿ ಜಿಲ್ಲೆಯ ಕಮಲಾಪುರ ತಾಲ್ಲೂಕಿನ ಸೊಂತ ಸಮೀಪದ ಸರಪೋಷ್ ಕಿಣಗಿ ಗ್ರಾಮದವರು. ತಂದೆ- ಗುರುಪಾದಪ್ಪ ಮಾಲಿಪಾಟೀಲ, ತಾಯಿ- ಮಹಾದೇವಿಯಮ್ಮ. ಪ್ರಾಥಮಿಕ ಶಿಕ್ಷಣವನ್ನು ಹುಟ್ಟೂರಿನಲ್ಲಿ  ಹಾಗೂ ಹಿರಿಯ ಮಾಧ್ಯಮಿಕ ಶಿಕ್ಷಣವನ್ನು ಪಕ್ಕದೂರಾದ ಚೇಂಗಟಾದಲ್ಲಿ ಪೂರ್ಣಗೊಳಿಸಿದರು. ಪ್ರೌಢಶಾಲೆಯಿಂದ ಪದವಿಯವರೆಗೂ ಕಲಬುರಗಿಯ ಶ್ರೀ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದಲ್ಲಿ ನಂತರ  ಶರಣಬಸವೇಶ್ವರ ಕಲಾ ಮಹಾವಿದ್ಯಾಲಯದಿಂದ ಕಾಲೇಜಿಗೆ ಪ್ರಥಮ ಮತ್ತು ಗುಲಬರ್ಗಾ ವಿಶ್ವವಿದ್ಯಾಲಯಕ್ಕೆ ಹತ್ತನೇ ರ್‍ಯಾಂಕಿನೊಂದಿಗೆ ಬಿ.ಎ. ಪದವಿ ಪಡೆದರು. ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಎರಡನೆಯ ರ್‍ಯಾಂಕಿನೊಂದಿಗೆ ಎಂ.ಎ ಪದವಿ ಹಾಗೂ ಮೂರನೇ ರ್‍ಯಾಂಕಿನೊಂದಿಗೆ ಎಂ.ಫಿಲ್ ಪದವಿ  ಹಾಗೂ ಡಾ. ಎಂ.ಎಂ. ...

READ MORE

Related Books