ಸ್ವಪ್ನ ಸಾರಸ್ವತ - ನಾಟಕ ರೂಪಾಂತರ

Author : ಎಸ್. ಮಾಲತಿ

Pages 44

₹ 27.00




Year of Publication: 2015
Published by: ನವಕರ್ನಾಟಕ ಪ್ರಕಾಶನ
Address: ಎಂಬೆಸಿ ಸೆಂಟರ್, 11, ಕ್ರೆಸೆಂಟ್‌ ರಸ್ತೆ, ಕುಮಾರ ಪಾರ್ಕ್‌ ಪೂರ್ವ, ಬೆಂಗಳೂರು- 560001
Phone: 08022161900

Synopsys

ಎರಡು ತಲೆಮಾರುಗಳ ದಾರುಣ ಕಥೆಯನ್ನು ಹೇಳುವ ನಾಟಕ ‘ಸ್ವಪ್ನ ಸಾರಸ್ವತ’. ಪೆರ್ಲ ಗೋಪಲಕೃಷ್ಣ ಪೈ ಅವರ ‘ಸ್ವಪ್ನ ಸಾರಸ್ವತ’ ಕಾದಂಬರಿಯನ್ನು ನಾಟಕ ರೂಪಾಂತರಗೊಳಿಸಿದ್ದಾರೆ ನಾಟಕಗಾರ್ತಿ ಎಸ್. ಮಾಲತಿ. ಈ ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ದೊರೆತಿದೆ. ಪೋರ್ಚುಗೀಸರ ದಬ್ಬಾಳಿಕೆಗೆ ಸಾರಸ್ವತ ಜನಾಂಗವೊಂದು ಗೋವೆಯ ತಮ್ಮ ನೆಲ ತೊರೆದು ಅಪರಿಚಿತ ನೆಲಕ್ಕೆ ಸ್ಥಳಾಂತರವಾಗುವಾಗಿನ ನೋವುಗಳ ದಾರುಣ ಕಥೆ ಇದು.

About the Author

ಎಸ್. ಮಾಲತಿ
(01 May 1952 - 02 April 2019)

ರಂಗಕರ್ಮಿ, ಬರಹಗಾರ್ತಿ ಎಸ್. ಮಾಲತಿ ಅವರು ಜನಿಸಿದ್ದು 1952 ಮೇ 1ರಂದು ಶಿವಮೊಗ್ಗದಲ್ಲಿ. ತಾಯಿ ಉಮಾ ಶೇಷಗಿರಿ ಪೈ, ತಂದೆ ಶೇಷಗಿರಿ ಪೈ. ದೆಹಲಿಯ ಎನ್.ಎಸ್.ಡಿ ಗರಡಿಯಲ್ಲಿ ಬೆಳೆದುಬಂದವರು.  ಇವರು ಬರೆದ ನಾಟಕಗಳೆಂದರೆ ಎರಡು ಕಿರು ನಾಟಕಗಳು, ಶೀಮ ಕಥಾನಕ, ದಲಿತಲೋಕ. ಇವರು ಅನುವಾದಿಸಿದ ನಾಟಕಗಳು ಜನತೆಯ ಶತ್ರು, ರೊಷೊಮನ್, ಒಂದು ಪಯಣದ ಕಥೆ, ಹೊಸದಿಕ್ಕು. ಇವರ ಬರಹಗಳು ನಾಟಕಕ್ಕೆ ಮಾತ್ರ ಸೀಮಿತವಾಗಿರದೇ ಕಾವ್ಯದಲ್ಲಿಯೂ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಕ್ಷಣಿಕವಲ್ಲದ ಕ್ಷಣಗಳು, ಹೇಳಬೇಕೆನಿಸಿದ್ದು, ನನ್ನ ಪ್ರಿಯತಮನ ಬಾಳು, ಭಾವಕೋಶ ಇವರ ಪ್ರಮುಖ ಕವನ ಸಂಕಲನಗಳು. ಸುಮಾರು 42ಕ್ಕೂ ...

READ MORE

Related Books