ಸ್ವರ್ಗದೊಂದಿಗೆ ಅನುಸಂಧಾನ

Author : ನೂತನ ಎಮ್. ದೋಶೆಟ್ಟಿ

Pages 92

₹ 130.00




Year of Publication: 2023
Published by: ಸರ್ವಮಂಗಳ ಪ್ರಕಾಶನ
Address: #80, ಸರ್ವಮಂಗಳ, 10ನೇ ಎ ಕ್ರಾಸ್, ಭುವನೇಶ್ವರಿ ನಗರ, ಹೆಬ್ಬಾಳ ಕೆಂಪಾಪುರ, ಬೆಂಗಳೂರು - 560024

Synopsys

‘ಸ್ವರ್ಗದೊಂದಿಗೆ ಅನುಸಂಧಾನ’ ಚಾರ್ ಧಾಮ್ ಪ್ರವಾಸ ಕಥನ ಕೃತಿಯು ನೂತನ ದೋಶೆಟ್ಟಿ ಅವರ ಪ್ರವಾಸ ಕಥನವಾಗಿದೆ. ಪ್ರವಾಸ ನನ್ನೊಳಗೆ ಸೃಷ್ಟಿಸುವ ಒಂದು ಅಗಾಧತೆಯ, ವೈಶಾಲ್ಯತೆಯ ದೃಷ್ಟಿಕೋನದಿಂದ ಅದೊಂದು ಚೈತನ್ಯದಾಯಕ ಜೌಷಧವಿದ್ದಂತೆ ಎನ್ನುತ್ತಾರೆ ಇಲ್ಲಿ ಲೇಖಕಿ. ಚಾರ್ ಧಾಮಕ್ಕೆ ಹೋಗುವ ನಿರ್ಧಾರದಿಂದಲೇ ಪುಳಕಗೊಂಡಿದ್ದೆ. 11.755 ಅಡಿ ಎತ್ತರದಲ್ಲಿ ನಾವು ಪ್ರವಾಸ ನಿಗದಿ ಪಡಿಸಿದ್ದ ದಿನಗಳಲ್ಲಿ ಬೆಳಿಗ್ಗೆ 12 ಡಿಗ್ರಿ ಹಾಗೂ ಸಂಜೆ 6 ಡಿಗ್ರಿ ಉಷ್ಣಾಂಶವಿದ್ದು ರಾತ್ರಿಯಲ್ಲಿ ಉಷ್ಣಾಂಶ ಕಡಿಮೆಯಾಗಿದ್ದು ಮಾತ್ರವಲ್ಲದೇ ಇಡಿಯ ಉತ್ತರಾಖಂಡದಲ್ಲಿ ಆಗ ಜಲಪ್ರಳಯ ಹಾಗೂ ಭೂಕುಸಿತ ಸಾಮಾನ್ಯವಾಗಿತ್ತು. ಚಾರ್ ಧಾಮ ಪ್ರವಾಸ ಉಳಿದ ಪ್ರವಾಸದಂತೆ ಸರಳವಾಗಿರದೆ ಅದಕ್ಕೆ ವಿಶೇಷ ತಯಾರಿ ಬೇಕಾಗುತ್ತದೆ. ಏಪ್ರಿಲ್ ಮೇ ತಿಂಗಳಲ್ಲಿ ಜನದಟ್ಟಣೆ ಅತ್ಯಧಿಕವಾಗಿದ್ದು, ಜೂನ್-ಜುಲೈ ತಿಂಗಳಲ್ಲಿ ಅತ್ಯಧಿಕ ಮಳೆ ಸುರಿಯುತ್ತದೆ. ಅಕ್ಟೋಬರಿನಲ್ಲಿ ಹಿಮಪಾತವಿರುತ್ತದೆ. ಆದ್ದರಿಂದ ನಾನು ಆರಿಸಿಕೊಂಡಿದ್ದು ಮಳೆ ಮುಗಿದು ಬಿಸಿಲು ಕಾಣುವ ಸಪ್ಟೆಂಬರ್ ತಿಂಗಳ ಮೂರನೇ ವಾರವನ್ನು ಎನ್ನುತ್ತಾರೆ ಲೇಖಕಿ ನೂತನ ದೋಶೆಟ್ಟಿ.

About the Author

ನೂತನ ಎಮ್. ದೋಶೆಟ್ಟಿ
(06 September 1968)

ಕನ್ನಡದ ಪ್ರಮುಖ ಲೇಖಕಿಯಲ್ಲಿ ನೂತನ ಎಮ್. ದೋಶೆಟ್ಟಿ ಅವರು ಒಬ್ಬರು. ನೂತನ ಅವರು 1968 ಸೆಪ್ಟಂಬರ್ 6 ರಂದು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ಜನಿಸಿದರು. ಆಕಾಶವಾಣಿಯಲ್ಲಿ ಕಾರ್ಯಕ್ರಮ ನಿರ್ವಾಹಕಿಯಾಗಿ ಕೆಲಸ ನಿರ್ವಹಿಸಿದ್ದಾರೆ. ’ಕಾಲವೆಂಬ ಮಹಾಮನೆ, ಭಾಗೀರತಿ ಉಳಿಸಿದ ಪ್ರಶ್ನೆಗಳ” ಅವರ ಪ್ರಮುಖ ಸಂಕಲನಗಳು. ’ಯಾವ ವೆಬ್‌ಸೈಟಿನಲ್ಲೂ ಉತ್ತರವಿಲ್ಲ’ ಅವರ ಮೊದಲ ಕಥಾ ಸಂಕಲನಗಳು. ಅವರ ಬರಹಗಳು ’ಕರ್ಮವೀರ, ಸುಧಾ, ತುಷಾರ, ಕಸ್ತೂರಿ, ದ ವೀಕ್, ಇಂಡಿಯಾ ಟುಡೆ, ಪ್ರಜಾವಾಣಿ, ಕನ್ನಡ ಪ್ರಭ, ಸುಮುಖ’ ಮತ್ತಿತರ ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ’ಯಾವ ವೆಬ್ ಸೈಟಿನಲ್ಲೂ ಉತ್ತರವಿಲ್’, ಅವರ ಕತೆ ...

READ MORE

Related Books