ಸ್ವಾತಂತ್ರ್ಯ ಸೂರ್ಯೋದಯ

Author : ಸೂರ್ಯನಾಥ ಕಾಮತ್

Pages 88

₹ 160.00




Year of Publication: 2022
Published by: ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು
Address: ಪಂಪ ಮಹಾಕವಿ ರಸ್ತೆ, ಚಾಮರಾಜಪೇಟೆ, ಬೆಂಗಳೂರು 560018\n
Phone: 080- 26612991 / 26623584

Synopsys

‘ಸ್ವಾತಂತ್ಯ್ರ ಸೂರ್ಯೋದಯ’ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಹಾವೇರಿಯಲ್ಲಿ ನಡೆದ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಬಿಡುಗಡೆಗೊಂಡ ಕೃತಿಯಾಗಿದೆ. ಸೂರ್ಯನಾಥ ಕಾಮತ್ ಅವರ ‘ಸ್ವಾತಂತ್ಯ್ರ ಸೂರ್ಯೋದಯ’ ಕೃತಿಯು ಸ್ವಾತಂತ್ರ್ಯ ಚಳುವಳಿಯ ಕುರಿತು ಮಾತನಾಡುತ್ತದೆ. ಕನ್ನಡದ ಅಗ್ರಗಣ್ಯ ಇತಿಹಾಸಕರಲ್ಲಿ ಒಬ್ಬರಾಗಿರುವ ಇವರು, ದೇಶದ ಸ್ವಾತಂತ್ಯ್ರ ಹೋರಾಟದ ಕುರಿತು ಮಹತ್ವದ ಕೃತಿಗಳನ್ನು ಬರೆದವರು. ಕರ್ನಾಟಕ ರಾಜ್ಯ ಸ್ವಾತಂತ್ಯ್ರ ಹೋರಾಟಗಾರರ ಕಥನಗಳನ್ನು ಜತನದಿಂದ ಸಂಗ್ರಹಿಸಿ ದಾಖಲಿಸಿದವರು. ಅವರು ಹೊಸ ಪೀಳಿಗೆಯ ಅಗತ್ಯವನ್ನು ಅರಿತು ಸಂಕ್ಷಿಪ್ತವಾಗಿ ದೇಶದ ಸ್ವಾತಂತ್ಯ್ರ ಸಂಗ್ರಾಮವನ್ನು ದಾಖಲಿಸಿರುವ ಮಹತ್ವದ ಕೃತಿ ಇದಾಗಿದೆ. ಈ ಕೃತಿಯು 2002ರಲ್ಲಿ ಮೊದಲ ಮುದ್ರಣವನ್ನು ಕಂಡಿತ್ತು.

About the Author

ಸೂರ್ಯನಾಥ ಕಾಮತ್
(26 April 1937 - 21 October 2015)

ಸಾಹಿತಿ ಸೂರ್ಯನಾಥ ಕಾಮತ ಅವರು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ಜನಿಸಿದರು. ತಂದೆ ಉಪೇಂದ್ರಕಾಮತ್, ತಾಯಿ ಪದ್ಮಾವತಮ್ಮ. ಕರ್ನಾಟಕ ವಿಶ್ವವಿದ್ಯಾಲಯದಿಂದ ಬಿ.ಎ. ಮತ್ತು ಸ್ನಾತಕೋತ್ತರ ಪದವಿ ಗಳಿಕೆ. ಪ್ರಾಧ್ಯಾಪಕ, ಸಂಶೋಧಕ, ಇತಿಹಾಸ ಅವರ ಆಸಕ್ತಿಯ ಕ್ಷೇತ್ರಗಳು. ‘TULUVA IN VIJAYANAGAR TIMES’ ಅವರ ಪಿಎಚ್.ಡಿ. ಪ್ರಬಂಧ. ಉತ್ಥಾನ ಪತ್ರಿಕೆಯ ಸಹ ಸಂಪಾದಕರಾಗಿ, ಪ್ರಜಾವಾಣಿ ಸಹ ಸಂಪಾದಕರಾಗಿದ್ದರು. ‘ಕರ್ನಾಟಕದ ಇತಿಹಾಸ ಮಂಜರಿ, ಕರ್ನಾಟಕದ ವೀರರಾಣಿಯರು, ವಿಜಯನಗರ ಕಥೆಗಳು, ಕೆಳದಿಯ ಚೆನ್ನಮ್ಮಾಜಿ, ವೀರರಾಣಿ ಅಬ್ಬಕ್ಕ’ ಅವರ ಪ್ರಮುಖ ಕೃತಿಗಳು. ಥೇಮ್ಸ್‌ನಿಂದ ಗಂಗೆಗೆ, ಈಸಿ ಜೈಸಿದರು (ಸಾಮಾಜಿಕ) ; ಕೃಷ್ಣದೇವರಾಯ, ಮುಳ್ಳಿನಹಾದಿ ...

READ MORE

Related Books