ಸ್ವಾತಿ ತಿರುನಾಳರ ಕೃತಿಗಳು

Author : ಆರ್.ಎನ್. ಶ್ರೀಲತಾ

Pages 462

₹ 450.00




Year of Publication: 2011
Published by: ಡಿ.ವಿ.ಕೆ. ಮೂರ್ತಿ
Address: ಕೃಷ್ಣಮೂರ್ತಿಪುರಂ, ಮೈಸೂರು-4

Synopsys

ಸ್ವಾತಿ ತಿರುನಾಳರ ಕೃತಿಗಳು ಎಂಬುದು ಲೇಖಕಿ ಎನ್.ಆರ್. ಶ್ರೀಲತಾ ಅವರು ಸಂಪಾದಿಸಿದ ಕೃತಿ. ಸಂಗೀತವನ್ನೇ ಪ್ರಧಾನವಾಗಿಸಿಕೊಂಡ ಈ ಕೃತಿಯು ಸ್ವಾತಿ ತಿರುನಾಳರ ಎಲ್ಲ ಕೃತಿಗಳ ಕುರಿತು ಸಂಕ್ಷಿಪ್ತವಾಗಿ ಪರಿಚಯಿಸುತ್ತದೆ. ಮೂಲತಃ ಕೇರಳದ ಸ್ವಾತಿ ತಿರುನಾಳ್ (1750-1850) ಪದ್ಮನಾಭಸ್ವಾಮಿಯ ಭಕ್ತರು. ಅವರನ್ನು ತ್ಯಾಗರಾಜ್ ಎಂದೇ ಕರೆಯಲಾಗುತ್ತಿತ್ತು. ತಿರುವನಾಂಕುರದಲ್ಲಿ ಜನಿಸಿದ ಸ್ವಾತಿ ತಿರುನಾಳ್, ಕೀರ್ತನೆಗಳು, ಪದ, ವರ್ಣ, ತಿಲ್ಲಾನ, ಪ್ರಬಂಧಗಳೆಂಬ ಐದು ಭಾಗಗಳಲ್ಲೂ ಪರಿಣಿತರು. ಜತಿಸ್ವರ, ಸ್ವರಜತಿ, ತಾನವರ್ಣ, ಪದವರ್ಣ, ನವರಾತ್ರಿ ಕೀರ್ತನೆಗಳು ಹೀಗೆ ಕೃತಿಗಳನ್ನು ರಚಿಸಿದ್ದು, ಕರ್ನಾಟಕ ಸಂಗೀತ ಪ್ರಪಂಚದಲ್ಲಿ ಇವರ ಹೆಸರು ಅಜರಾಮರ.

About the Author

ಆರ್.ಎನ್. ಶ್ರೀಲತಾ
(04 June 1953)

ಡಾ. ಆರ್.ಎನ್. ಶ್ರೀಲತಾ ಅವರು ಹುಟ್ಟಿದ್ದು ಹಾಸನ ಜಿಲ್ಲೆಯ ರುದ್ರಪಟ್ಟಣದಲ್ಲಿ. ತಂದೆ- ವಿದ್ವಾನ್ ಆರ್.ಕೆ. ನಾರಾಯಣಸ್ವಾಮಿ, ತಾಯಿ- ಸಾವಿತ್ರಮ್ಮ, ಮೈಸೂರು ವಿಶ್ವವಿದ್ಯಾಲಯದಲ್ಲಿ ಬಿ.ಎ. ಪದವಿ, ಮತ್ತು ಸಂಗೀತದಲ್ಲಿ ಎಂ.ಎ. ಪದವೀಧರರು. “ಕನಾಟಕ ಸಂಗೀತದಲ್ಲಿ ಮನೋಧರ‍್ಮ ಸಂಗೀತ ಪ್ರಕಾರಗಳು” ಮಹಾ ಪ್ರಬಂಧ ಮಂಡಿಸಿ ಮೈಸೂರು ವಿಶ್ವವಿದ್ಯಾಲಯದಿಂದ ಪಡೆದ ಡಾಕ್ಟರೇಟ್ ಪಡೆದಿದ್ದಾರೆ. ಸಂಗೀತದಲ್ಲಿ ಡಾಕ್ಟರೇಟ್ ಪಡೆದ ಪ್ರಥಮ ಮಹಿಳೆ ಎಂಬ ಹೆಗ್ಗಳಿಕೆ ಇವರದ್ದು. ಮೈಸೂರು ವಿಶ್ವವಿದ್ಯಾಲಯದಲ್ಲಿ 25 ವರ್ಷಗಳಿಂದಲು ಪದವಿ, ಸ್ನಾತಕ ಪದವಿಗಳಿಗೆ ಸಂಗೀತ ಶಾಸ್ತ್ರ, ಲಕ್ಷ್ಯಗಳ ಬೋಧನೆ ಮಾಡುತ್ತಿದ್ದಾರೆ. ...

READ MORE

Related Books