ಸ್ಚಿಚ್ ಆಫ್

Author : ಟಿ.ಜಿ. ಶ್ರೀನಿಧಿ

Pages 48

₹ 40.00




Year of Publication: 2021
Published by: ಇಜ್ಞಾನ ಟ್ರಸ್ಟ್ 
Address:  # 203, ಶ್ರಾವಂತಿ ಗೋಕುಲ, 5ನೇ ಅಡ್ಡರಸ್ತೆ, ದ್ವಾರಕನಗರ, ಬಿಎಸ್ ಕೆ 3ನೇ ಹಂತ, ಹೊಸಕೇರಹಳ್ಳಿ, ಬೆಂಗಳೂರು-560085

Synopsys

ಸ್ವಿಚ್ ಆಫ್ -ಟಿ.ಜಿ. ಶ್ರೀನಿಧಿ ಅವರ ಕೃತಿ. ಮೊಬೈಲ್ ಫೋನಿನ ಅನುಕೂಲತೆಗಳ ಸದುಪಯೋಗ ಪಡೆದುಕೊಳ್ಳುತ್ತಲೇ, ಅದರ ದುಷ್ಪರಿಣಾಮಗಳನ್ನೂ ಹತೋಟಿಯಲ್ಲಿಟ್ಟುಕೊಳ್ಳುವುದು ಇಂದಿನ ಅಗತ್ಯ. ಆದರೆ ಇದನ್ನು ಕಾರ್ಯಗತಗೊಳಿಸುವುದು ಸುಲಭದ ಸಂಗತಿಯಲ್ಲ, ಅದಕ್ಕೊಂದು ನಿರ್ದಿಷ್ಟವಾದ ಸೂತ್ರವೂ ಇಲ್ಲ. ಮೊಬೈಲ್ ಫೋನನ್ನು ಎಲ್ಲಿ, ಹೇಗೆ, ಎಷ್ಟು ಪ್ರಮಾಣದಲ್ಲಿ ಬಳಸುವುದು ಒಳ್ಳೆಯದು ಎನ್ನುವುದನ್ನು ಸ್ವಂತ ಅನುಭವದಿಂದಲೇ ಕಂಡುಕೊಳ್ಳಬೇಕು. ಯಾವುದೇ ಪ್ರಯಾಣವಾದರೂ ಅದು ಎಲ್ಲೋ ಒಂದುಕಡೆ ಪ್ರಾರಂಭವಾಗಬೇಕು. ಹಗ್ಗದ ಮೇಲಿನ ಈ ನಡಿಗೆಯೂ ಅಷ್ಟೇ: ಆಗಾಗ್ಗೆ ಮೊಬೈಲ್ ಫೋನನ್ನು ದೂರದಲ್ಲಿಟ್ಟು, ಅದರಿಂದಾಚೆಗಿನ ಜಗತ್ತಿಗೆ ನಮ್ಮನ್ನು ತೆರೆದುಕೊಳ್ಳುವುದು ಇದನ್ನು ಪ್ರಾರಂಭಿಸುವ ವಿಧಾನಗಳಲ್ಲೊಂದು. ಹಾಗೆ ಮಾಡಲು ನಿಮಗೆ ಕೊಂಚ ಉತ್ತೇಜನ ನೀಡುವುದಷ್ಟೇ ಈ ಪುಸ್ತಕದ ಉದ್ದೇಶ.’ ಎಂದು ಲೇಖಕರು ಹೇಳಿದ್ದಾರೆ. 

 

About the Author

ಟಿ.ಜಿ. ಶ್ರೀನಿಧಿ

ಟಿ.ಜಿ. ಶ್ರೀನಿಧಿ ಬೆಂಗಳೂರಿನ ಸಾಫ್ಟ್ ವೇರ್ ಸಂಸ್ಥೆಯೊಂದರಲ್ಲಿ ಹಿರಿಯ ಪ್ರೋಗ್ರಾಮರ್ ಅನಲಿಸ್ಟ್ ಆಗಿ ಉದ್ಯೋಗ ಮಾಡುತ್ತಿದ್ಧಾರೆ.  ವಿಜ್ಞಾನ-ತಂತ್ರಜ್ಞಾನ ವಿಷಯಗಳ ಕುರಿತು ಕನ್ನಡದಲ್ಲಿ ಬರೆಯುವುದು ಇವರ  ಅಚ್ಚುಮೆಚ್ಚಿನ ಹವ್ಯಾಸ. ವಿಜ್ಞಾನ-ತಂತ್ರಜ್ಞಾನಕ್ಕೆ ಮೀಸಲಾದ ಕನ್ನಡ ಜಾಲ ತಾಣ 'ಇಜ್ಞಾನ ಡಾಟ್ ಕಾಮ್' (www.ejnana.Com) ನ ರೂವಾರಿ. ನಾಲ್ಕು ನೂರಕ್ಕೂ ಹೆಚ್ಚು ಲೇಖನಗಳು ಹಾಗೂ ಆರು ಪುಸ್ತಕಗಳು ಈವರೆಗೆ ಪ್ರಕಟವಾಗಿವೆ. ಪ್ರಸ್ತುತ ಉದಯವಾಣಿಯಲ್ಲಿ 'ವಿಜ್ಞಾಪನೆ' ಅಂಕಣ ಪ್ರಕಟವಾಗುತ್ತಿದೆ. ಈ ಹಿಂದೆ ವಿಜಯ ಕರ್ನಾಟಕ, ಉಷಾಕಿರಣ ಹಾಗೂ ಸೂರ್ಯೋದಯ ಪತ್ರಿಕೆಗಳಿಗೆ ಅಂಕಣಕಾರರೂ ಆಗಿದ್ದರು. 'ಶ್ರೀನಿಧಿಯ ಪ್ರಪಂಚದಲ್ಲಿ (WWW.Srinidhi.net.in) ಬ್ಲಾಗಿಸುವುದು, ಛಾಯಾಗ್ರಹಣ, ಪ್ರವಾಸ ಹಾಗೂ ಪುಸ್ತಕಗಳ ಓದು ...

READ MORE

Related Books