ಸ್ವರಯೋಗಿ ಮಲ್ಲಿಕಾರ್ಜುನ ಮನ್ಸೂರ್

Author : ಎನ್ಕೆ (ಎನ್‌.ಕೆ. ಕುಲಕರ್ಣಿ)

Pages 86

₹ 8.00




Year of Publication: 1991
Published by: ಪ್ರಸಾರಾಂಗ
Address: ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು-560056

Synopsys

ಹಿಂದೂಸ್ತಾನಿ ಗಾಯಕ ‘ಸ್ವರಯೋಗಿ ಮಲ್ಲಿಕಾರ್ಜುನ ಮನ್ಸೂರ್’ ಬೆಂಗಳೂರು ಪ್ರಸಾರಾಂಗ ಪ್ರಕಾಶನದ ‘ಮನೆಗೊಂದು ಮಣಿದೀಪ ಮಾಲೆ’ ಸಂಪುಟಗಳ ಸಾಲಿನಲ್ಲಿ ಪ್ರಕಟವಾದ ಕೃತಿ. ಬೆಂಗಳೂರು ವಿಶ್ವವಿದ್ಯಾಲಯ ಈ ಮಾಲೆಯಲ್ಲಿ ರಾಜ್ಯದ, ರಾಷ್ಟ್ರದ ಹಾಗೂ ಪ್ರಪಂಚದ ಪ್ರಮುಖ ಕವಿಗಳ, ಕಲಾವಿದರ, ಸಂಗೀತಗಾರರ, ತತ್ವಜ್ಞಾನಿಗಳ, ರಾಜಕೀಯ ಚಿಂತಕರ ಜೀವನ-ಸಾಧನೆಗಳನ್ನು ಪರಿಚಯಿಸುವ ಉದ್ದೇಶ ಹೊಂದಿತ್ತು. ಹಿಂದೂಸ್ತಾನಿ ಗಾಯಕ ಮಲ್ಲಿಕಾರ್ಜುನ ಮನ್ಸೂರ್ ಈ ಮಾಲೆಗೆ ಒಂದು ಗಮನಾರ್ಹ ಸೇರ್ಪಡೆಯಾಗಿದ್ದು, ಹಿರಿಯ ಬರಹಗಾರ ಎನ್ಕೆ ಕುಲಕರ್ಣಿ ಕೃತಿಯನ್ನು ರಚಿಸಿದ್ದಾರೆ. ಕೃತಿಯಲ್ಲಿ ಡಾ.ಮಲ್ಲಿಕಾರ್ಜುನರ ಜೀವನ ಹಾಗೂ ಅವರ ಸಂಗೀತಕ್ಷೇತ್ರದ ಸಾಧನೆಗಳ ಕುರಿತು ಸಂಕ್ಷಿಪ್ತವಾಗಿ ಬರೆದಿದ್ದಾರೆ.

About the Author

ಎನ್ಕೆ (ಎನ್‌.ಕೆ. ಕುಲಕರ್ಣಿ)
(29 August 1913 - 23 April 2005)

ಎನ್ಕೆ (ಎನ್‌.ಕೆ. ಕುಲಕರ್ಣಿ) ಅವರು ಎನ್.ಕೆ , ಎಂದೇ ಸುಪ್ರಸಿದ್ಧರಾದ ಎ.ಕೆ.ಕುಲಕರ್ಣಿಯವರು, 1913 ರ ಆಗಸ್ಟ್ 29 ರಂದು ಗದುಗಿನಲ್ಲಿ ಜನಿಸಿದರು.  ಧಾರವಾಡದ ಕರ್ನಾಟಕ ಕಾಲೇಜಿನಿಂದ ಬಿ.ಎ .(ಕನ್ನಡ ಆನರ್ಸ್) ಪದವಿಯನ್ನು ಹಾಗು ವಿದ್ಯಾರಣ್ಯ ಪಾರಿತೋಷಕವನ್ನು ಪಡೆದರು.1938 ರಲ್ಲಿ ಕನ್ನಡ  ಹಾಗೂ ಸಂಸ್ಕೃತದಲ್ಲಿ ಎಂ.ಎ. ಪದವಿಯನ್ನು ಪಡೆದರು. 1940 ರಲ್ಲಿ ಬಿ.ಟಿ. ಪದವಿ ಪಡೆದರು.  1943 ರಿಂದ 1946 ರವರೆಗೆ ಕನ್ನಡ ಸಂಶೋಧನ ಸಂಸ್ಥೆಯಲ್ಲಿ ಕುಮಾರವ್ಯಾಸನ ಕುರಿತು ಸಂಶೋಧನೆ ಮಾಡಿ ಪ್ರಬಂಧರಚನೆ ಮಾಡಿದರು. 1971 ರಲ್ಲಿ  ಧಾರವಾಡ ಆಕಾಶವಾಣಿಯಿಂದ ಕಾರ್ಯಕ್ರಮ ನಿರ್ವಾಹಕರಾಗಿ ನಿವೃತ್ತರಾದರು. ಸಾವಿನ ಉಡಿಯಲ್ಲಿ, ಎರಡನೆಯ ...

READ MORE

Related Books