ಟಿ.ಪಿ. ಅಶೋಕ

Author : ಬಾಲಸುಬ್ರಹ್ಮಣ್ಯ ಕಂಜರ್ಪಣೆ

Pages 112

₹ 100.00

Buy Now


Year of Publication: 2020
Published by: ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್
Address: ಎಂಬೆಸಿ ಸೆಂಟರ್, ಕ್ರೆಸೆಂಟ್ ರಸ್ತೆ, ಬೆಂಗಳೂರು- 560001

Synopsys

‘ಟಿ.ಪಿ. ಅಶೋಕ’ ನವಕರ್ನಾಟಕದ ಸಾಹಿತ್ಯ ಸಂಪದ- ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕನ್ನಡ ಲೇಖಕರ ಬದುಕು-ಬರೆಹ ಮಾಲಿಕೆಯಲ್ಲಿ ಪ್ರಕಟವಾದ ಕೃತಿ. ಲೇಖಕ ಬಾಲಸುಬ್ರಹ್ಮಣ್ಯ ಕಂಜರ್ಪಣೆ ಈ ಕೃತಿಯನ್ನು ರಚಿಸಿದ್ದಾರೆ.

ಟಿ.ಪಿ. ಅಶೋಕ ಕನ್ನಡ ವಿಮರ್ಶಾ ಲೋಕಕ್ಕೆ ಮತ್ತು ಅಂಕಣ ಬರೆಹಗಳಿಗೆ ವಿಶೇಷವಾಗಿ ಪರಿಚಿತರು. ವಿಮರ್ಶೆಗೊಂದು ಶ್ರೇಷ್ಠತೆಯನ್ನು ತಂದುಕೊಟ್ಟದ್ದಲ್ಲದೇ ಅನೇಕ ಸಾಹಿತ್ಯ ಶಿಬಿರಗಳು, ಕಾರ್ಯಾಗಾರಗಳನ್ನು ನಡೆಸಿಕೊಟ್ಟಿರುವ ಅಗ್ರಗಣ್ಯರು. ಈ ಕೃತಿಯ ವಿಶೇಷವೆಂದರೆ, ವಿಮರ್ಶಕ ಅಶೋಕ ಅವರನ್ನು ಇನ್ನೊಬ್ಬ ಸಾಹಿತ್ಯ ವಿಮರ್ಶಕ ಬಾಲಸುಬ್ರಹ್ಮಣ್ಯ ಕಂಜರ್ಪಣೆ ಚಿಕಿತ್ಸಕ ದೃಷ್ಟಿಯಿಂದ ಕೃತಿಗಳನ್ನು ನಿಕಷಕ್ಕೊಡ್ಡಿ , ಜುಗಲಬಂದಿಯಂತೆ ಪರಿಚಯಿಸಿದ್ದು, ಆರೋಗ್ಯಕರ ಟೀಕೆಯೊಂದಿಗೆ, ಎಲ್ಲೂ ತಾಳತಪ್ಪದಂತೆ, ಸಂಘರ್ಷಕ್ಕೆಡೆ ಇಲ್ಲದಂತೆ ಅಶೋಕರ ಬದುಕು-ಬರೆಹಗಳನ್ನು ಕೃತಿಯಲ್ಲಿ ನಿರೂಪಿಸಿದ್ದಾರೆ.

About the Author

ಬಾಲಸುಬ್ರಹ್ಮಣ್ಯ ಕಂಜರ್ಪಣೆ
(20 May 1954)

ಬಾಲಸುಬ್ರಹ್ಮಣ್ಯ ಕಂಜರ್ಪಣೆ- ಕಾವ್ಯನಾಮದಿಂದ ಸಾಹಿತ್ಯ ಲೋಕದಲ್ಲಿ ಗುರುತಿಸಿಕೊಂಡಿರುವ ಕೆ.ಪಿ.ಬಾಲಸುಬ್ರಮಣ್ಯ ಅವರು, ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ತಾಲೂಕಿನ ಕಂಜರ್ಪಣೆ ಯಲ್ಲಿ (20-05-1954) ಜನಿಸಿದರು. ಕೃಷಿ ಹಿನ್ನೆಲೆಯ ಅವರು ಉತ್ತಮ ಬರಹಗಾರರು. ಪುತ್ತೂರಿನ ಸಂತ ಫಿಲೋಮಿನ ಕಾಲೇಜಿನಿಂದ ವಿಜ್ಞಾನದಲ್ಲಿ ಪದವಿ ಪಡೆದು, ಉಡುಪಿಯ ಲಾ ಕಾಲೇಜಿನಿಂದ ಕಾನೂನು ಪದವಿ ಹಾಗೂ ಮೈಸೂರು ವಿಶ್ವವಿದ್ಯಾಲಯದ ಅಂಚೆ ಮತ್ತು ತೆರಪಿನ ಶಿಕ್ಷಣ ಸಂಸ್ಥೆಯಿಂದ ಆಂಗ್ಲ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದುಕೊಂಡರು. ಮಡಿಕೇರಿಯ ಸರಕಾರಿ ಹಿರಿಯ ಕಾಲೇಜಿನಲ್ಲಿ ಆಂಗ್ಲ ಸಾಹಿತ್ಯದ ಉಪನ್ಯಾಸಕರಾಗಿಯೂ ಅನುಭವವಿದೆ. ಪ್ರಸ್ತುತ ಕೊಡಗಿನ ಮಡಿಕೇರಿಯಲ್ಲಿ ನ್ಯಾಯವಾದಿಯಾಗಿದ್ದಾರೆ. ಸ್ವಯಂಪ್ರಭೆ, ಒಡೆದ ಪ್ರತಿಮೆಗಳು (ಕವನ ಸಂಕಲನಗಳು), ಅದೃಷ್ಟದ ಹುಡುಗಿ (ಕಥಾ ...

READ MORE

Related Books