ಟಿ.ವಿ. ಶಿವಾನಂದನ್ ಬದ್ಧತೆಗೊಂದು ಮಾದರಿ

Author : ಎಸ್.ಎಸ್. ಹಿರೇಮಠ

Pages 112

₹ 125.00




Year of Publication: 2016
Published by: ಷಡಕ್ಷರಿ ಡಿ ಗಾಂವ್ಕರ್ ಪ್ರಕಾಶನ
Address: ಕಲಬುರಗಿ

Synopsys

‘ಟಿ.ವಿ. ಶಿವಾನಂದನ್ ಬದ್ಧತೆಗೊಂದು ಮಾದರಿ’ ಪತ್ರಕರ್ತ ಟಿ.ವಿ. ಶಿವಾನಂದನ್ ಅವರಿಗೆ ಸಲ್ಲಿಸಿದ ಅಭಿನಂದನ ಗ್ರಂಥ. ಈ ಕೃತಿಯನ್ನು ಲೇಖಕ ಎಸ್.ಎಸ್. ಹಿರೇಮಠ  ಸಂಪಾದಿಸಿದ್ದಾರೆ. ಪತ್ರಕರ್ತ ಶಿವಾನಂದನ್ ಅವರ ಕುರಿತಾಗಿ ಆಪ್ತರು ಬರೆದಿರುವ ಲೇಖನಗಳು, ಮತ್ತು ಶಿವಾನಂದನ್ ಅವರ ಬದುಕು- ಬರಹಗಳ ಕುರಿತಾದ ಒಳನೋಟಗಳಿವೆ. ಪತ್ರಿಕೋದ್ಯಮದಲ್ಲಿದ್ದುಕೊಂಡು ಆದರ್ಶಮಯ ಜೀವನ ಸಾಗಿಸಿದ ಶಿವಾನಂದನ್ ಅವರ ಬದುಕಿನ ಮಹತ್ವದ ಘಟ್ಟಗಳನ್ನು ಈ ಕೃತಿಯಲ್ಲಿ ಕಾಣಬಹುದಾಗಿದೆ .

About the Author

ಎಸ್.ಎಸ್. ಹಿರೇಮಠ

ಬಳ್ಳಾರಿ ಜಿಲ್ಲೆಯ ಕೊಟ್ಟೂರಿನ ಕೊಟ್ಟೂರೇಶ್ವರ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿದ್ದ ಎಸ್.ಎಸ್. ಹಿರೇಮಠ ಅವರು ಬೆಳಗಾವಿ ಜಿಲ್ಲೆಯ ಸಾಣಿಕೊಪ್ಪದವರು. ರಾಯಣ್ಣನ ಸಂಗೊಳ್ಳಿ, ಸಂಗ್ಯಾಬಾಳ್ಯಾದ ಬೈಲವಾಡ, ಬೈಲಹೊಂಗಲ, ಕಿತ್ತೂರು ಪರಿಸರದಲ್ಲಿ ಬರುವ ಊರು ಸಾಣಿಕೊಪ್ಪ. ಬೆಳಗಾವಿಯಲ್ಲಿ ಬಿ.ಎ. ಮತ್ತು ಧಾರವಾಡದಲ್ಲಿ ಎಂ. ಎ ಪದವಿ ಪಡೆದ ನಂತರ ಹಿರೇಮಠರು ಹೊಸಪೇಟೆ, ಹಡಗಲಿ, ಹರಪನಹಳ್ಳಿಗಳಲ್ಲಿ ಕನ್ನಡ ಅಧ್ಯಾಪಕರಾಗಿ ಕೆಲಸ ಮಾಡಿದ್ದರು. ಪ್ರಗತಿಪರ ಸಂಘಟನೆ ಮತ್ತು ಹೋರಾಟಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ. ದಲಿತರ ಇತಿಹಾಸ ಮತ್ತು ಸಂಸ್ಕೃತಿ ಪರಂಪರೆಯ ಕುರಿತು ಶೋಧನೆ ನಡೆಸಿದ್ದಾರೆ. ದರ್ಶನಗಳ ಸರಣಿಯಲ್ಲಿ ಪಾಶುಪತ ದರ್ಶನ, ಕಾಳಾಮುಖ ದರ್ಶನ, ಲಾಕುಳ ದರ್ಶನ ಕೃತಿಗಳು ಪ್ರಕಟಗೊಂಡಿವೆ. ...

READ MORE

Related Books