ತಾ ಲೆಕ್ಕಣಕಿ ತಾ ದೌತಿ

Author : ದ.ರಾ. ಬೇಂದ್ರೆ (ಅಂಬಿಕಾತನಯದತ್ತ)

Pages 80

₹ 60.00




Published by: ಶ್ರೀಮಾತಾ ಪ್ರಕಾಶನ
Address: ವಿಶ್ವಶ್ರಮ ಚೇತನ, ಹುಬ್ಬಳ್ಳಿ-580 003

Synopsys

ಬೇಂದ್ರೆಯವರು ನಿಧನರಾದ ನಂತರ ಪ್ರಕಟವಾದ 4ನೆಯ ಸಂಕಲನ. ಈ ಸಂಕಲನದಲ್ಲಿ 57 ಕವಿತೆಗಳಿವೆ. 1974 ರಲ್ಲಿ ಧಾರವಾಡ ಆಕಾಶವಾಣಿಯು ಬೆನಕನ ಪೂಜೆ ಎಂಬ ಗೀತ ರೂಪಕವನ್ನು ಸಿದ್ದಪಡಿಸಿತ್ತು. ಡಾ ಮಲ್ಲಿಕಾರ್ಜುನ ಮನ್ಸೂರ ಈ ಗೀತರೂಪದ ನಿರ್ದೇಶನ ಮಾಡಿದ್ದರು. ಬೇಂದ್ರೆಯವರ ಈ ರೂಪಕಕ್ಕಾಗಿ ರಚಿಸಿದ 5 ಕವಿತೆಗಳು ಈ ಸಂಕಲನದಲ್ಲಿವೆ. ಹಾಗೆಯೇ ಪಂಡಿತ ಭೀಮಸೇನ ಜೋಶಿ ಯವರಿಗಾಗಿ ಬೇಂದ್ರೆಯವರು ’ಏರು’ ಎನ್ನುವ ಕವಿತೆ ರಚಿಸಿ ಕೊಟ್ಟಿದ್ದರು. ಮತ್ತು ವೆಂಕಟೇಶ ದೇವಾಲಯಕ್ಕಾಗಿ ದಶಾವತಾರದ ಮೇಲೆಹಾಡು ಬರೆದು ಕೊಡುವಂತೆ ಗಾಯಕ ಮಾಧವ ಗುಡಿಯವರು ಕೋರಿದ್ದರು. ಅದಕ್ಕೆ ಪ್ರತಿಯಾಗಿ ಬೇಂದ್ರೆಯವರು ದಶಾವತಾರದ 10ಹಾಡು ಆರಂಭದಲ್ಲಿ ಒಂದು ಆರತಿ ಕೊನೆಗೆ ಒಂದು ಮಂಗಲ ಸೇರಿ 12ಕವಿತೆಗಳನ್ನು ರಚಿಸಿದರು. ಆಕವಿತೆಗಳು ಈ ಸಂಕಲನದಲ್ಲಿವೆ. ಮಾಧವ ಗುಡಿ ಮತ್ತು ಭೀಮಸೇನ ಜೋಶಿಯವರು ಹಾಡಿದ ಬಗ್ಗೆ ಮಾಹಿತಿ ಇಲ್ಲ. ಬೇಂದ್ರೆಯವರು ಬರೆಯಬೇಕು ಎಂದು ನಿರ್ಧರಿಸಿ ನಾಟಕ್ಕಾಗಿ ಬರೆದ 3 ಹಾಡುಗಳು ಈ ಸಂಕಲನದಲ್ಲಿವೆ. ಈ ಸಂಗ್ರಹದಲ್ಲಿ ಅರ್ಧಕ್ಕಿಂತ ಹೆಚ್ಚು ಕವನಗಳು ಹಾಡಲಿಕ್ಕಾಗಿ , ಹಾಡುಗಾರರಿಗಾಗಿ ರಚಿಸಿದವು ಎಂಬುದು ವಿಶೇಷ. ವಿವಿಧ ಭಾವಗಳನ್ನು ಗೀತೆಗಳಾಗಿ ರಚಿಸಿದರೆ, ಅವು ಶುದ್ಧ ಭಾವಗೀತೆಗಳು ಎಂಬ ವ್ಯಾಖ್ಯೆ ಇದೆ. ಬೇಂದ್ರೆಯವರ ಭಾವಗೀತೆಗಳಲ್ಲಿ ಗೇಯತೆ ಒಂದು ಪ್ರಮುಖ ಗುಣ. ಆದ್ದರಿಂದಲೇ ಅವರ ಭಾವಗೀತೆಗಳನ್ನು ಹಾಡಿದಾಗ ಸಂತೋಷದಿಂದ ಅನು ಸಂಗೀತ, ವೈಜ್ಞಾನಿಕ ವಿಚಾರಧಾರೆ, ಈ ತರಹದ ಕವಿತೆಗಳಿರುವುದು ವಿಶೇಷ. ಬೇಂದ್ರೆಯವರ ’ಮನಿಯೊಳಗ ಸಭಾ ಮಾಡಿ ಸಹಕಾರದ ಹಣ್ಣ ತಿನ್ನೋಣ ಮನಿ ಮನೆಗೆ ಒಳ್ಳೆಯದಾಗಲಿ ಎಂದು ಬೇಂದ್ರೆಯವರು ಮನೆಯ ಮಹತ್ವಕ್ಕೆ ಪ್ರಾಧಾನ್ಯತೆ ಕೊಟ್ಟಿದ್ದಾರೆ. ಬೇಂದ್ರೆಯವರು ದೇವತ್ವಕ್ಕೆ ಮಹತ್ವ ಕೊಡುವುದು ಮೂಡನಂಬಿಕೆಯಂದಲ್ಲ. ಅವರದು ಜ್ಞಾನಿಯ ಭಕ್ತಿಯಾಗಿತ್ತು. ಜ್ಞಾನವಂತ ಭಕ್ತ ಮತ್ತು ಭಗವಂತ ಇವರಲ್ಲಿ ಅವಿರತವಾದ ದ್ವಂದ್ವ ಯುದ್ಧ ಸಾಗಿರುತ್ತದೆ.ಈ ಯುದ್ಧದಿಂದ ಪರಸ್ಪರರ ಸತ್ವ ಪರೀಕ್ಷೆ ನಿರ್ಣಾಯಕವಾದ ಹಂತವನ್ನು ತಲಪುತ್ತದೆ. ದೇವತ್ವ, ಸೃಷ್ಟಿತತ್ವ ಕವಿ-ಕಾವ್ಯಸೃಷ್ಟಿ ಉಪಾಸಕ. ಹೀಗಾಗಿ ಕಾವ್ಯತತ್ವ ಮತ್ತು ದೇವತತ್ವಕ್ಕೆ ನಿಕಟ ಸಂಬಂದ ಇರುವುದು ಭಾರತಿಯ ಕಾವ್ಯಮೀಮಾಂಸೆಗೆ ಒಪ್ಪಿಗೆಯಾದ ವಿಷಯ. ಬೇಂದ್ರೆ ಕಾವ್ಯ ಸಾಕಷ್ಟು ಅರ್ಥವಾಬೇಕಾದರೆ ಭಾರತಿಯ ಕಾವ್ಯಮೀಮಾಂಸೆಯ ಆಳವಾದ ಅಭ್ಯಾಸ ಮತ್ತು ಬೇಂದ್ರೆ ಬರೆದ ಸಾಹಿತ್ಯ ವಿಮರ್ಶೆಗೆ ಆಳವಾದ ಅಭ್ಯಾಸ ಅವಶ್ಯ ಎಂದು ನನ್ನ ಭಾವನೆ ಎಂದು ಮುನ್ನುಡಿಯಲ್ಲಿ ಸಂಪಾದಕ ವಾಮನ ಬೇಂದ್ರೆಯವರು ತಿಳಿಸಿದ್ದಾರೆ.

About the Author

ದ.ರಾ. ಬೇಂದ್ರೆ (ಅಂಬಿಕಾತನಯದತ್ತ)
(31 January 1896 - 26 October 1981)

ಕನ್ನಡ ಕಾವ್ಯದ ಸೊಬಗು-ಸೊಗಸು ಹೆಚ್ಚಿಸಿದ ‘ಅಂಬಿಕಾತನಯದತ್ತ’ ಕಾವ್ಯನಾಮದ ದತ್ತಾತ್ರೇಯ ರಾಮಚಂದ್ರ ಬೇಂದ್ರೆ ಅವರನ್ನು ‘ವರಕವಿ’, ‘ಗಾರುಡಿಗ’ ಎಂದು ಗುರುತಿಸಲಾಗುತ್ತದೆ. ತಂದೆ ರಾಮಚಂದ್ರ ತಾಯಿ ಅಂಬವ್ವ. ಧಾರವಾಡದಲ್ಲಿ 1896ರ ಜನವರಿ 31ರಂದು ಜನಿಸಿದರು. ಧಾರವಾಡದಲ್ಲಿ ಮೆಟ್ರಿಕ್ (1913) ಮುಗಿಸಿದ ಮೇಲೆ ಪುಣೆಯ ಫರ್ಗ್ಯುಸನ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿ ಬಿ.ಎ. (1918) ಪದವಿ ಪಡೆದರು. ಕೆಲವು ಕಾಲ ಅಧ್ಯಾಪಕ ವೃತ್ತಿ ಮಾಡಿದ ಮೇಲೆ ಮುಂಬಯಿ ವಿಶ್ವವಿದ್ಯಾನಿಲಯದಿಂದ ಎಂ.ಎ. (1935) ಪದವಿ ಪೂರ್ಣಗೊಳಿಸಿದರು. ಗದುಗಿನ ವಿದ್ಯಾದಾನ ಸಮಿತಿ ಪ್ರೌಢಶಾಲೆಯಲ್ಲಿ ಹೆಡ್ ಮಾಸ್ಟರ್ ಆಗಿ ವೃತ್ತಿ ಆರಂಭಿಸಿದ ಅವರು ನಂತರ ಹುಬ್ಬಳ್ಳಿಯ ನ್ಯೂ ...

READ MORE

Related Books