ತಾರೆಗಳ ಬಳಗ

Author : ಬಾಗೂರು ಮಾರ್ಕಾಂಡೇಯ

Pages 64

₹ 40.00




Year of Publication: 2012
Published by: ಅಂಕಿತ ಪುಸ್ತಕ
Address: 53, ಶ್ಯಾಮ್‌ಸಿಂಗ್ ಕಾಂಪ್ಲೆಕ್ಸ್, ಗಾಂಧಿಬಜಾರ್ ಮುಖ್ಯರಸ್ತೆ, ಬಸವನಗುಡಿ, ಬೆಂಗಳೂರು - 560 004
Phone: 08026617100

Synopsys

ಕವಿ ಬಾಗೂರು ಮಾರ್ಕಾಂಡೇಯ ಅವರು ಮಕ್ಕಳಿಗಾಗಿ ಬರೆದ ಕವನಗಳ ಸಂಕಲನ-ತಾರೆಗಳ ಬಳಗ. ಕವಿಯು ಮಕ್ಕಳ ಮಧುರ ಭಾವಗಳೊಂದೊಂದನೇ ಕವಿತೆಗಟ್ಟುವ ಪ್ರಯತ್ನವನ್ನು ಮಾಡಿದ್ದಾರೆ. ಮಕ್ಕಳ ಬಣ್ಣಬಣ್ಣದ ಕನಸುಗಳನ್ನು ಕಲ್ಪನೆಗಳನ್ನು ಒಳಗೊಂಡ ಈ ಪುಸ್ತಕದಲ್ಲಿ 40 ಕವಿತೆಗಳಿವೆ.

‘ಅಕ್ಷಯ ಪಾತ್ರೆ ಅನ್ನ ಬಂದಿದೆ ಬನ್ನಿ ಗೆಳೆಯರೆ ಸಾಲಿನಲಿ ಅನ್ನವೆ ದೈವವು ಹಾಳುಮಾಡದಿರಿ ರೈತನ ಶ್ರಮವಿದೆ ಅದರಲ್ಲಿ..’ಎನ್ನುವಂತೆಯೇ.... ನಾವು ಭಾರತೀಯರು ಬಹುವಿಧದ ಸಂಸ್ಕೃತಿಯಲ್ಲಿ ಭವ್ಯತೆಯನೆ ಮೆರೆಸಿದವರು ಭಾವವೊಂದೇ ಆಗಿ ಬಾಳುತಿರುವರು...... ಹೀಗೆ ನಾಡು ನುಡಿ ದೇಶಭಕ್ತಿ ಗೀತೆಗಳು ಇದರಲ್ಲಿವೆ.ಮಕ್ಕಳಿಗೆ ದೇಶದ ಸಂಸ್ಕೃತಿ -ಸಾಮರಸ್ಯವನ್ನು ಬಿಂಬಿಸುವ, ಮಾನವೀಯತೆ ಮೆರೆಸುವ ಕವಿತೆಗಳು ಈ ಸಾಹಿತ್ಯ ಕೃತಿಯ ಜೀವಾಳವಾಗಿದೆ. 

About the Author

ಬಾಗೂರು ಮಾರ್ಕಾಂಡೇಯ
(28 June 1966)

ಕವಿ, ಕಲಾವಿದ, ಬಾಗೂರು ಮಾರ್ಕಾಂಡೇಯ ಅವರು ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ (ಜನನ: 28-06-1966) ಬಾಗೂರು ಗ್ರಾಮದವರು. ಪರಿಸರ, ಮಕ್ಕಳ ಸಾಹಿತ್ಯ, ಚಿತ್ರಕಲೆ ಸೇರಿದಂತೆ ಸುಮಾರು 54ಕ್ಕೂ ಅಧಿಕ ಕೃತಿಗಳನ್ನು ರಚಿಸಿದ್ದಾರೆ. ಏಕ ವ್ಯಕ್ತಿ ಚಿತ್ರಕಲಾ ಪ್ರದರ್ಶನ, ಬೇರುಗಳು ಚಿತ್ರ ಸರಣಿ ಮೂಲಕ ಪರಿಸರ ಜಾಗೃತಿಗೆ ಶ್ರಮಿಸಿದವರು, ‘ರೇಖೆಗಳಲ್ಲಿ ಭಾವಗೀತೆಗಳು’ ಮೂಲಕ ನೂತನ ಪ್ರಯೋಗಶೀಲತೆ ರೂಢಿಸಿಕೊಂಡವರು. ಕನ್ನಡದ ಸುಲಭ ಕಲಿಕೆಗೆ “ಕನ್ನಡ ಸೌರಭ” ತಂತ್ರಾಂಶ ತಯಾರಿಸಿದ್ದಾರೆ. “ಬಾಗೂರು ಕಲಾ ವೇದಿಕೆ ಟ್ರಸ್ಟ್” ರಚಿಸಿಕೊಂಡು ‘ಕಲಾ ಭೂಷಣ’ ಪ್ರಶಸ್ತಿ ನೀಡುತ್ತಾ ಬಂದಿದ್ದಾರೆ ಕವನ ಸಂಕಲನಗಳು: ರೇಖಾಂತರಂಗದ ಭಾವಗುಸುಮ, ಭಾವಶಿಲ್ಪ, ಭಾವೋನ್ಮಾದಿನಿ, ಭಾವಸಮ್ಮಿಲನ, ಕೊಳಲದನಿ, ಕಾವ್ಯಕನ್ನಿಕೆ,  ಚೈತ್ರ ಚೆಲುವು, ಸುವರ್ಣಪುತ್ಥಳಿ,  ಸ್ವರಸಿರಿಯ ಸ್ನೇಹಲತೆ, ರಾಧಾ ಮಾಧವರ ಒಲುಮೆ ...

READ MORE

Related Books