ಟಾಮಿಯ ಪ್ರಚಂಡ ಸಾಹಸಗಳು

Author : ಜಿ.ಎನ್. ರಂಗನಾಥ ರಾವ್

Pages 88

₹ 105.00




Year of Publication: 2022
Published by: ವಸಂತ ಪ್ರಕಾಶನ
Address: 10ನೇ ಬಿ ಮುಖ್ಯರಸ್ತೆ, ಕಾಸ್ಮೊಪಾಲಿಟಿನ್ ಕ್ಲಬ್ ಹತ್ತಿರ, 3ನೇ ಬ್ಲಾಕ್, ಜಯನಗರ, ಬೆಂಗಳೂರು, ಕರ್ನಾಟಕ - 560011

Synopsys

ಟಾಮಿಯ ಪ್ರಚಂಡ ಸಾಹಸಗಳು ಮಾರ್ಕ್ ಟ್ವೈನ್‌ ಅವರ ಮೂಲ ಕೃತಿಯಾಗಿದ್ದು ಜಿ.ಎನ್‌ ರಂಗನಾಥ ರಾವ್‌ ಅವರು ಈ ಕೃತಿಯನ್ನು ಅನುವಾದಿಸಿದ್ದಾರೆ. ಜಗದ್ವಿಖ್ಯಾತ ಮಾರ್ಕ್ ಟ್ವಿನ್ ವಿರಚಿತ 'ಹಕರಿಸಿಸ್' ಎಂಬ ಮಕ್ಕಳ ಕೃತಿಯನ್ನು ಆಧರಿಸಿ ಅನುವಾದಿಸಲ್ಪಟ್ಟಿರುವ ಟಾಮಿಯ ಪ್ರಚಂಡ ಸಾಹಸಗಳು' ಹಿರಿಯ ಲೇಖಕರಾದ ಜಿ.ಎಫ್, ರಂಗನಾಥ ರಾವ್ ಹವರು ಪ್ರಸ್ತುತ ಸಂಪುಟಕ್ಕೆ ನೀಡಿರುವ ಅಭಿಮಾನದ ಕೊಡುಗೆ. ಮಕ್ಕಳಿಗೆ ಪ್ರಿಯವಾಗುವ ಈ ಸಂಗ್ರಹಾನುವಾದ ಕನ್ನಡ ಮಕ್ಕಳ ಸಾಹಿತ್ಯಕ್ಕೆ ಜಿ.ಎನ್.ಆರ್. ಅವರ ಮಹತ್ವದ ಕೊಡುಗೆ ಎಂದು ಡಾ. ಎಚ್‌. ಎಸ್. ವೆಂಕಟೇಶಮೂರ್ತಿ ಪುಸ್ತಕದ ಬೆನ್ನುಡಿಯಲ್ಲಿ ತಿಳಿಸಿದ್ದಾರೆ.

About the Author

ಜಿ.ಎನ್. ರಂಗನಾಥ ರಾವ್
(12 January 1942 - 09 October 2023)

ನಾಡಿನ ಖ್ಯಾತ ಪತ್ರಕರ್ತ, ಹಿರಿಯ ಲೇಖಕ ಜಿ.ಎನ್.ರಂಗನಾಥ ರಾವ್ ಮೂಲತಃ ಬೆಂಗಳೂರಿನ ಹಾರೋಹಳ್ಳಿಯವರು. 1942 ರಲ್ಲಿ ಜನಿಸಿದ ಅವರು, ಕನ್ನಡ ಪತ್ರಿಕೋದ್ಯಮದಲ್ಲಿ ಹಲವು ಮೈಲಿಗಲ್ಲುಗಳನ್ನು ನಿರ್ಮಿಸಿದ್ದಾರೆ.   ಹೊಸಕೋಟೆ ಹಾಗೂ ಬೆಂಗಳೂರು ನಗರಗಳಲ್ಲಿ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿ, ಸಂಯುಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ ಉಪ ಸಂಪಾದಕರಾಗಿ ವೃತ್ತಿ ಜೀವನ ಆರಂಭಿಸಿದ್ದ ಅವರು ’ನವರಂಗ’ ಕಾವ್ಯನಾಮದಿಂದ ಕೂಡ ಬರವಣಿಗೆ ಮಾಡಿದ್ದರು. ಅಲ್ಲದೇ ಪ್ರಜಾವಾಣಿ ದಿನಪತ್ರಿಕೆಯ ಕಾರ್ಯ ನಿರ್ವಾಹಕ ಸಂಪಾದಕರಾಗಿ ಕಾರ್ಯನಿರ್ವಹಿಸಿ ನಿವೃತ್ತರಾಗಿದ್ದರು. ಸಾಹಿತ್ಯ ಕ್ಷೇತ್ರದಲ್ಲಿಯೂ ಮಹತ್ವದ ಕಾರ್ಯ ನಿರ್ವಹಿಸಿದ್ದ ರಂಗನಾಥ ರಾವ್ ಕಾದಂಬರಿ, ಸಣ್ಣಕತೆ, ನಾಟಕ, ಪ್ರಬಂಧ ಸೇರಿದಂತೆ ಸಾಹಿತ್ಯದ ಹಲವು  ಪ್ರಕಾರಗಳಲ್ಲಿ ...

READ MORE

Related Books