ತಂತಿಬೇಲಿಯೊಳಗಿನ ಜಗತ್ತು

Author : ಮಲ್ಲಿಕಾರ್ಜುನ ಬಿ. ಮಾನ್ಪಡೆ

Pages 272

₹ 220.00
Year of Publication: 2014
Published by: ಗೀತಾಂಜಲಿ ಪುಸ್ತಕ ಪ್ರಕಾಶನ
Address: ಕಂದಾಯ ಭವನ, ನೂರಡಿ ರಸ್ತೆ, ರಾಜೇಂದ್ರ ನಗರ, ಶಿವಮೊಗ್ಗ

Synopsys

‘ತಂತಿಬೇಲಿಯೊಳಗಿನ ಜಗತ್ತು ಡಾ. ಮಲ್ಲಿಕಾರ್ಜುನ ಬಿ ಮಾನ್ಪಡೆ ಅವರ ಕೃತಿ. ವಸಾಹತುಶಾಹಿ ಆಡಳಿತವು ಏನು ತಪ್ಪು ಮಾಡದ ಅಲೆಮಾರಿ ಸಮುದಾಯಗಳನ್ನು ಸಮಾಜಘಾತುಕರು, ಅಪರಾಧಿಗಳು, ಕಳ್ಳರು ಎಂಬ ಹಣೆಪಟ್ಟಿಯನ್ನು ಅಂಟಿಸಿ ತಂತಿಬೇಲಿಯ ಸೆಟ್ಲಮೆಂಟ್‍ಗಳಲ್ಲಿ ಕೂಡಿ ಹಾಕಿರುವುದರ ಹಿಂದಿನ ಉದ್ದೇಶವೇನು. ದೇಶಪ್ರೇಮಿ ಸಮುದಾಯಗಳನ್ನು ಬ್ರಿಟಿಷರು ಇವರನ್ನು ಹೇಗೆ ಅಪರಾಧಿಗಳನ್ನಾಗಿ ಬಿಂಬಿಸಿದರು ಮತ್ತು ಸ್ವತಂತ್ರ ಭಾರತದಲ್ಲಿ ಈ ಸಮುದಾಯಗಳನ್ನು ನೋಡುವ ದೃಷ್ಠಿಕೋನವೂ ಸಹ ಯಾವುದೇ ರೀತಿಯಲ್ಲಿ ಬದಲಾಗಿಲ್ಲದಿರುವುದು, ಈ ಕುರಿತಾಗಿ ಅನೇಕ ದಾರ್ಶನಿಕರು ಹಾಗೂ ಸಾಮಾಜಿಕ ಚಿಂತಕರು ಚಿಂತನೆ ನಡೆಸಿದ್ದಾರೆ. ಆದರೂ ಯಾಕೆ ಇಂದಿಗೂ ವಿಮುಕ್ತ ಬುಡಕಟ್ಟುಗಳು ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಮುಂದೆ ಬರಲು ಸಾಧ್ಯವಾಗಿಲ್ಲ.

ಈ ಹಿನ್ನಲೆಯಲ್ಲಿ ಕರ್ನಾಟಕ ಸೆಟ್ಲಮೆಂಟ್‍ಗಳಲ್ಲಿ ವಾಸಿಸುವ ಗಂಟಿಚೋರ್, ಕೊರಮ, ಪಾರ್ಧಿ, ಹರಣಶಿಕಾರಿ, ಕಂಜರಬಾಟ್, ಚಪ್ಪರಬಂದ್ ವಿಮುಕ್ತ ಬುಡಕಟ್ಟುಗಳ ವಾಸ್ತವಿಕ ಬದುಕಿನ ವಿಭಿನ್ನ ನೆಲೆಗಳು, ಅವರು ಅನುಭವಿಸುವ ಸಮಸ್ಯೆ ಸವಾಲುಗಳ ಕುರಿತು ಪ್ರಸ್ತುತ ಕೃತಿಯು ವಿಶ್ಲೇಷಿಸುತ್ತದೆ. ಕರ್ನಾಟಕ ವಿಮುಕ್ತ ಬುಡಕಟ್ಟುಗಳ ವಿವಿಧ ನೆಲೆಗಳ ಮೂಲಕ ನಡೆಸಿದ ಅಧ್ಯಯನಗಳ ಕ್ರಮಬದ್ಧ ನಿರೂಪಣೆ ಮತ್ತು ವಿಶ್ಲೇಷಣೆಗಳಿಂದ ಕೂಡಿದ ಮುಖ್ಯ ಗ್ರಂಥ ಇದಾಗಿದೆ. ಅಪಾರವಾದ ಅಧ್ಯಯನ ಶೀಲತೆಯಿಂದ ಕಲೆಹಾಕಿದ ಮಾಹಿತಿಗಳ ಜೊತೆಗೆ ಸಾಮಾಜಿಕ ಕಾಳಜಿಯ ಮನಸ್ಸಿನ ಮೂಲಕ ಮರುರೂಪ ಕೊಡುವ ಕೆಲಸವನ್ನು ಲೇಖಕರು ಬದ್ಧತೆಯಿಂದ ಮಾಡಿದ್ದು, ಉತ್ತಮ ಆಕರಗ್ರಂಥವಾಗಿದೆ. 

About the Author

ಮಲ್ಲಿಕಾರ್ಜುನ ಬಿ. ಮಾನ್ಪಡೆ

ಡಾ. ಮಲ್ಲಿಕಾರ್ಜುನ ಬಿ. ಮಾನ್ಪಡೆ ಅವರು ಮೂಲತಃ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಬೇವಿನಹಳ್ಳಿ(ಜೆ) ಗ್ರಾಮದವರು. ಕಲಬುರಗಿಯ ಗುಲಬರ್ಗಾ ವಿಶ್ವವಿದ್ಯಾಲಯಲ್ಲಿ ಸಮಾಜಶಾಸ್ತ್ರದಲ್ಲಿ ಎಂ.ಎ ಪದವಿ ಪೂರ್ಣಗೊಳಿಸಿದ ಅವರು ಹಂಪಿಯ ಕನ್ನಡ ವಿಶ್ವವಿದ್ಯಾಲಯದಲ್ಲಿ  ‘ವಿಮುಕ್ತ ಬುಡಕಟ್ಟುಗಳ ಸಾಮಾಜಿಕ ಅಧ್ಯಯನ ಮತ್ತು ಹೈದರಬಾದ ಕರ್ನಾಟಕದ ಅಲೆಮಾರಿಗಳ ಸಮಾಜೋ- ಆರ್ಥಿಕ ಸ್ಥಿತಿಗತಿಗಳ ಅಧ್ಯಯನ’ ಎಂಬ ವಿಷಯದಲ್ಲಿ ಸಂಶೋಧನೆ ನಡೆಸಿ ಪಿಎಚ್.ಡಿ ಮತ್ತು ಪಿಡಿಎಫ್ ಪದವಿ ಪಡೆದಿದ್ದಾರೆ.ಕರ್ನಾಟಕ ಜಾನಪದ ವಿಶ್ವವಿದ್ಯಾಲಯದಲ್ಲಿ ಸಮಾಜಶಾಸ್ತ್ರ ಅಧ್ಯಯನ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿರುವ ಅವರು ಎನ್.ಎಸ್.ಎಸ್ ಸಂಯೋಜನಾಧಿಕಾರಿಗಳಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ತಮ್ಮ ಓದು ಮತ್ತು ಸಂಶೋಧನೆಗಳ ಕೃಷಿಯನ್ನು ...

READ MORE

Related Books