ತಂತ್ರ-ಪುರಾಣ ಲೋಕದ ಮಹಾ ಮಾಂತ್ರಿಕ ಸತ್ಯಕಾಮ

Author : ಶಾಂತಾ ಮಠ

Pages 1




Published by: ಶಶಾಂಕ್ ಪ್ರಕಾಶನ
Address: 32 ಸಂತೋಷ ಕಾಲೋನಿ, ನ್ಯೂಜೇವರ್ಗಿ ರೋಡ್ ಗುಲ್ಬರ್ಗ

Synopsys

ವೇದಗಳಿಗೆ ಪ್ರತಿಯಾಗಿ ನಿಂತ ತಂತ್ರ ವಿದ್ಯೆಯ ಬಗ್ಗೆ ಅಪಾರ ಅಧ್ಯಯನ ಮಾಡಿದ ಸಾಹಿತಿ ಸತ್ಯಕಾಮ. ಅವರದು ಕೇವಲ ಸೈದ್ಧಾಂತಿಕ ಅಭಿವ್ಯಕ್ತಿಯಾಗಿರಲಿಲ್ಲ. ತಾವು ಕಂಡ ಪ್ರಯೋಗಗಳ, ಅನುಭವಿಸಿದ ಪ್ರಯೋಗಗಳ ಆಧಾರದ ಮೇಲೆ ಅವರು ಬರೆದರು. ಅಂತಹ ಸತ್ಯಕಾಮರ ಕುರಿತು ಶಾಂತಾ ಮಠ ಅವರು ರಚಿಸಿದ ಕೃತಿ ಇದು. 

ಸತ್ಯಕಾಮರು ಕಂಡುಂಡ ಸತ್ಯದರ್ಶನವನ್ನು ಕೃತಿಯಲ್ಲಿ ಮಂಡಿಸಲಾಗಿದೆ. ಅವರು ಭೇಟಿಯಾದ ಸಾಮಾನ್ಯ ವ್ಯಕ್ತಿಗಳಿಂದ ಅಸಾಮಾನ್ಯ ಸಂತರು, ವಾಮಾಚಾರಿಗಳವರೆಗೆ ಕೃತಿ ಅನನ್ಯವಾದ ವಿವರಗಳನ್ನು ಹೊಂದಿದೆ. ಸತ್ಯಕಾಮರೇ ಘಟನೆಗಳನ್ನು ಖುದ್ದು ನಿರೂಪಿಸುತ್ತಿದ್ದಾರೆ ಎಂದೂ ಭಾಸವಾಗುವಷ್ಟರ ಮಟ್ಟಿಗೆ ಕೃತಿ ಅವರನ್ನು ಸಮೀಪದಿಂದ ಕಂಡಿದೆ. ಸತ್ಯಕಾಮರ ಸಾಹಿತ್ಯದ ಬಗ್ಗೆ ಆಸಕ್ತಿ ಉಳ್ಳವರಿಗೆ ಸ್ವತಃ ಅವರನ್ನು ಅರಿಯಲು ಪುಸ್ತಕ ಉತ್ತಮ ಸಾಧನ. 

About the Author

ಶಾಂತಾ ಮಠ
(01 April 1963)

ಲೇಖಕಿ ಶಾಂತಾ ಮಠ ಅವರು ಮೂಲತಃ ಕಲಬುರಗಿಯವರು. ತಂದೆ ಚನ್ನಬಸವಯ್ಯ, ತಾಯಿ ಚಂದ್ರಕಲಾ. ಸ್ನಾತಕೋತ್ತರ ಹಾಗೂ ಪಿಎಚ್.ಡಿ ಪದವೀಧರರು.  ಪ್ರಜ್ಞಾ ಕಾನೂನು ಸಲಹಾ ಸಮಿತಿ ಸಹ ಕಾರ್ಯದರ್ಶಿ, ಭಾರತ ಜ್ಞಾನ ವಿಜ್ಞಾನ ಸಮಿತಿ, ಗುಲ್ಬರ್ಗಾ ವಿಭಾಗದ ಮಹಿಳಾ ಪ್ರತಿನಿಧಿಯಾಗಿ ಕೆಲಸ ನಿರ್ವಹಿಸಿದ್ದಾರೆ. ‘ಆಕಾಶವಾಣಿ’ ಅವರ ಚಿಂತನ ಕೃತಿ 2010ರಲ್ಲಿ ಪ್ರಕಟಿಸಿದ್ದಾರೆ.  ...

READ MORE

Related Books