ತಾನು ಕವಿತೆಯಾಗಿ ನನ್ನನ್ನು ಕವಿಯಾಗಿಸಿದಳು

Author : ಸತ್ಯಾನಂದ ಪಾತ್ರೋಟ

Pages 208

₹ 325.00




Year of Publication: 2021
Published by: ಸಮತಾ ಪ್ರಕಾಶನ

Synopsys

ಸತ್ಯಾನಂದ ಪಾತ್ರೋಟ ಅವರ ಲೇಖನ ಸಂಕಲನ ತಾನು ಕವಿತೆ ಯಾಗಿ ನನ್ನನ್ನು ಕವಿಯಾಗಿಸಿದಳು. ಕವಿತೆ ಒಂದು ಕವಲು ಹಲವು ಎಂಬ ಉಪಶೀರ್ಷಿಕೆಯನ್ನು ಈ ಸಂಕಲನ ಹೊಂದಿದೆ. 2019 ಡಿಸೆಂಬರ್ 29 ರ ಗುರುವಾರ ತನ್ನ 93 ರ ಪ್ರಾಯದಲ್ಲಿ ಅವರ ಅವ್ವ ತೀರಿಕೊಂಡಾಗ ಆ ಕ್ಷಣದಲ್ಲಿ ಮೂಡಿದ ಕವಿತೆ - ತಾನು ಕವಿತೆಯಾಗಿ ನನ್ನನ್ನು ಕವಿಯಾಗಿಸಿದಳು. ವಿಶ್ವವಾಣಿ ಪತ್ರಿಕೆಯಲ್ಲಿ ಇದು ಪ್ರಕಟವಾಗಿತ್ತು. ಇದರಲ್ಲಿ ಒಟ್ಟು 55 ಲೇಖನಗಳಿವೆ .ಲಂಕೇಶರ ಅವ್ವ ಕವಿತೆಯ ದಟ್ಟ ಪ್ರಭಾವವನ್ನು ಕೆಲವರು ಗುರುತಿಸಿದ್ದಾರೆ .

About the Author

ಸತ್ಯಾನಂದ ಪಾತ್ರೋಟ

ಸತ್ಯಾನಂದ ಪಾತ್ರೋಟ ಅವರು ಕನ್ನಡದ ಹೊಸ ಸಂವೇದನೆಯ ಕವಿ, ಲೇಖಕರು. ‘ಪುಟ್ಟ ಗುಡಿಸಲಿನಲ್ಲಿ ಕೆಟ್ಟ ಕನಸುಗಳಿಲ್ಲ..ಮನಸು-ಕನಸುಗಳಲ್ಲಿ ಜಾಜಿ ಮಲ್ಲಿಗೆ..ಎನ್ನುವ ಮೂಲಕ ನಾಡಿನಾದ್ಯಂತ ಜಾಜಿ ಮಲ್ಲಿಗೆ ಕವಿ ಎಂದೇ ಖ್ಯಾತರಾದವರು. ಕೃಷ್ಣಾ ನದಿ ತೀರದ ಸತ್ಯಾನಂದ ಪಾತ್ರೋಟ ದಲಿತ ಲೋಕದ ಬಂಡಾಯ ಪ್ರತಿಭೆ. ಇವರು ಬಾಗಲಕೋಟೆಯಲ್ಲಿ ನಡೆದ ಅಖಿಲ ಭಾರತ ಆರನೇ ದಲಿತ ಸಾಹಿತ್ಯ ಸಮ್ಮೇನಳದ ಅಧ್ಯಕ್ಷತೆ ವಹಿಸಿದ್ದರು. ಕವಿ ಸತ್ಯಾನಂದ ಪಾತ್ರೋಟ ಅವರ ಲೇಖನಿಯಿಂದ ಸೃಜಿಸಿದ ಕವನಗಳು ನಾಡಿನ ಶಾಲಾ ಕಾಲೇಜಿನಿಂದ ಆರಂಭಗೊಂಡು ವಿಶ್ವವಿದ್ಯಾಲಯದ ಪಠ್ಯಗಳಲ್ಲೂ ಸ್ಥಾನ ಪಡೆದಿವೆ. ಧಾರವಾಡದ ಕರ್ನಾಟಕ ವಿ.ವಿ.ಗುಲ್ಬರ್ಗ, ಮಂಗಳೂರು, ತುಮಕೂರು, ಬೆಳಗಾವಿ ರಾಣಿ ...

READ MORE

Related Books