ತಾತ್ಯಾ ಟೋಪೆ

Author : ನವೀನ್ ಹಳೇಮನೆ

Pages 98

₹ 60.00




Year of Publication: 2012
Published by: ನ್ಯಾಷನಲ್ ಬುಕ್ ಟ್ರಸ್ಟ್, ಇಂಡಿಯಾ
Address: ನಿರ್ದೇಶಕರು, ನ್ಯಾಷನಲ್ ಬುಕ್ ಟ್ರಸ್ಟ್, ಇಂಡಿಯಾ, ನೆಹರೂ ಭವನ, 5, ಇನ್ಸ್ಟಿಟ್ಯೂಶನಲ್ ಏರಿಯಾ, ಫೇಜ್ - II, ವಸಂತ್ ಕುಂಜ್, ಹೊಸದೆಹಲಿ 110070

Synopsys

ಭಾರತದ ಸ್ವಾತಂತ್ರ್ಯ ಸಂಗ್ರಾಮದ ಅವಿಭಾಜ್ಯ ಅಂಗವಾಗಿರುವ ಸಿಪಾಯಿ ದಂಗೆಯ ಸಮಯದಲ್ಲಿ ಅಂದರೆ 1857ರಲ್ಲಿ ಬ್ರಿಟಿಷರ ವಿರುದ್ಧ ನಡೆದ ಯುದ್ಧಗಳಲ್ಲಿ ಬಹುಮುಖ್ಯ ಪಾತ್ರ ವಹಿಸಿದ್ದ ತಾತ್ಯಾಟೋಪೆ ತನ್ನ ಗೆರಿಲ್ಲಾ ಮಿಲಿಟರಿ ತಂತ್ರಗಳಿಗೆ ಹೆಸರಾಗಿದ್ದವನು. ಗಲ್ಲಿಗೇರಿಸಬೇಕೆಂದರೂ ತಾತ್ಯಾಟೋಪೆ ನಿಜಕ್ಕೂ ಯಾರು ಎಂದು ಗುರುತಿಸಲಾರದಂತೆ ಬ್ರಿಟಿಷರ ಕೈಗೆ ಸಿಗದಂತೆ ಒಂದು ದಶಕದ ಕಾಲ ಅವರ ವಿರುದ್ಧ ಹೋರಾಡಿದ ಸೇನಾನಿಯಾಗಿದ್ದವನು ತಾತ್ಯಾಟೋಪೆ. ಅವನ ಜೀವನ ಚರಿತ್ರೆಯೇ ಈ ಪುಸ್ತಕ. ಇಂದುಮತಿ ಶೇವರೆಯವರು ಬರೆದ ಪುಸ್ತಕದ ಕನ್ನಡ ಅನುವಾದ ನವೀನ್ ಹಳೇಮನೆಯವರದ್ದು.

About the Author

ನವೀನ್ ಹಳೇಮನೆ

ಡಾ. ನವೀನ್ ಹಳೇಮನೆ ಹುಟ್ಟಿದ್ದು 1975 ತುಮಕೂರು ಜಿಲ್ಲೆಯ ಹಾಲುಗೋಣದಲ್ಲಿ. ಭಾಷಾವಿಜ್ಞಾನದಲ್ಲಿ ಮೈಸೂರು ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಪಡೆದಿರುವ ಅವರು ಇಂಗ್ಲಿಷ್ ಭಾಷೆ ಮತ್ತು ಸಾಹಿತ್ಯದ ಬೋಧಕ, ಮೃದುಕೌಶಲ್ಯಗಳ ತರಬೇತುದಾರ ಹಾಗು ಅನುವಾದಕ. ರವೀಂದ್ರನಾಥ ಟ್ಯಾಗೋರರ ಗೀತಾಂಜಲಿ (2007), ಇಂದುಮತಿ ಶೇವರೆ ಅವರ ತಾತ್ಯಾ ಟೋಪೆ (2012) ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ್ಧಾರೆ. ಸಹ-ಅನುವಾದಕನಾಗಿ ಕಮಲಾ ಮುಕುಂದ ಅವರ ‘ಇವತ್ತು ಶಾಲೆಯಲ್ಲಿ ನೀನೇನು ಪ್ರಶ್ನೆ ಕೇಳಿದೆ?’ ಹಾಗೂ ಆ ಭಾಷೆ ಈ ಭಾಷೆಯಂತಲ್ಲ  ಈ-ಭಾಷೆ (2010) ಮತ್ತು ಇಂಗ್ಲಿಷ್ ಕಲಿ(ಯೋ)ಸೋ ಆಟ (2012) ಎಂಬ ಕೃತಿಗಳು ಪ್ರಕಟವಾಗಿವೆ. ಪ್ರಸ್ತುತ ರಾಮನಗರ ಜಿಲ್ಲೆಯ ಲಕ್ಷ್ಮೀಪುರದ ಸರ್ಕಾರಿ ...

READ MORE

Related Books