ತಾಯಿ

Author : ಕೆ.ವಿ. ಸುಬ್ಬಣ್ಣ

Pages 120

₹ 9.00




Year of Publication: 1988
Published by: ಅಕ್ಷರ ಪ್ರಕಾಶನ
Address: ಹೆಗ್ಗೋಡು ಕರ್ನಾಟಕ- 577417
Phone: 9480280401

Synopsys

‘ತಾಯಿ’ ಕೃತಿಯು ಕೆ.ವಿ ಸುಬ್ಬಣ್ಣ ಅವರ ಸಂಪಾದಿತ ನಾಟಕಸಂಕಲನವಾಗಿದೆ. ಬ್ರೆಕ್ಟ್‌ನ ಎಪಿಕ್ ಥೇಟರ್‌ನ ಕಲ್ಪನೆ ಅತ್ಯುನ್ನತ ಮಟ್ಟದ ನಾಟಕ 19329 ರಲ್ಲಿ ಆತ ಬರೆದ ತಾಯಿ. ಮಾಕ್ಸಿಮ್ ಗಾರ್ಕಿಯ ಹೆಸರಿನ ವಿಸ್ತಾರವಾದ ಕಾದಂಬರಿ ಈ ನಾಟಕಕ್ಕೆ ಆಧಾರವಾಗಿದೆ. ‘ತಾಯಿ’ ಕಥಾವಸ್ತು 1905ರ ಕ್ರಾಂತಿಯತ್ನದಿಂದ ಆರಂಭಿಸಿ 1917ರ ನಿಜಕ್ರಾಂತಿಯವರೆಗೆ ಈ ಕೃತಿಯು ಕತನವನ್ನು ಒಳಗೊಂಡಿದೆ. ಈ ಕೃತಿಯು ವಿಶ್ಲೇಷಿಸುವಂತೆ ಗಾರ್ಕಿಯ ತಾಯಿ ಇಡೀ ರಷ್ಯಾವನ್ನು ಪ್ರತಿನಿಧಿಸುತ್ತಾಳೆ. ಕಮ್ಯುನಿಸಮ್ ನ ಪರಿಚಯವಾದಾಗ ಅವಳಿಗಾಗುವ ಭಯ, ಆತಂಕ, ಅಭದ್ರತೆ, ಅನುಮಾನಗಳು ಇಡೀ ರಷ್ಯಾಕ್ಕೆ ಆದದ್ದು. ಗಾರ್ಕಿಯ ಈ ಪಾತ್ರ ಬ್ರೆಕ್ಟ್‌ನಲ್ಲಿ ಕಾಲದೇಶಗಳ ಎಲ್ಲ ಮಿತಿಗಳನ್ನೂ ಮೀರಿ ನಿಲ್ಲುತ್ತದೆ. ಇಲ್ಲಿ ನಾಟಕದ ತಾಯಿ, ಎಲ್ಲ ಜನತೆಯ ಶೋಷಿತ ಜನಾಂಗಗಳ ಹೋಸ ಸಾಧ್ಯತೆಗಳನ್ನು ಎತ್ತಿ ತೋರಿಸುತ್ತದೆ.

About the Author

ಕೆ.ವಿ. ಸುಬ್ಬಣ್ಣ
(20 February 1931)

ಕೆ.ವಿ. ಸುಬ್ಬಣ್ಣ ಕನ್ನಡದ ಅಪರೂಪದ ವ್ಯಕ್ತಿಗಳಲ್ಲಿ ಒಬ್ಬರು. ಮೈಸೂರು ವಿಶ್ವವಿದ್ಯಾನಿಲಯದಿಂದ ಎಂ. ಎ. ಪದವಿ ಪಡೆದ ನಂತರ ಅವರು ಕೃಷಿಕಾಯಕ ಆರಂಭಿಸಿದರು. ಸಾಹಿತ್ಯ ಕ್ಷೇತ್ರದಲ್ಲಿ ಅವರು ಮಾಡಿದ ಸಾಧನೆ ಅಚ್ಚರಿಪಡುವ ಹಾಗಿದೆ. ಕವಿ, ನಾಟಕಕಾರ, ಅನುವಾದಕರಾಗಿದ್ದ ಅವರು 'ಅಕ್ಷರ ಪ್ರಕಾಶನ' 'ನೀನಾಸಂ ರಂಗ ಚಟುವಟಿಕೆ'ಗಳನ್ನು ನಿರ್ವಹಿಸಿದವರು. ಭಾರತೀಯ ಸಂಸ್ಕೃತಿಗೆ ವಿಶಿಷ್ಟ ಮಾದರಿ ಎನ್ನುವ ಹಾಗೆ ಸಾಹಿತ್ಯಕ, ಸಾಂಸ್ಕೃತಿಕ ಚಟುವಟಿಕೆಗಳನ್ನು ಪುಟ್ಟಹಳ್ಳಿಯಲ್ಲಿ ನಡೆಸಿದ್ದು ಒಂದು ದಾಖಲೆ. ಮ್ಯಾಗ್ಸೆಸ್ಸೆ ಪ್ರಶಸ್ತಿಯಿಂದ ಹೆಗ್ಗೋಡು ಅಂತರರಾಷ್ಟ್ರೀಯ ನಕ್ಷೆಯಲ್ಲಿ ದಾಖಲಾಯಿತು. ಕೆ.ವಿ. ಸುಬ್ಬಣ್ಣ ಒಬ್ಬ ವ್ಯಕ್ತಿಯಲ್ಲ, ಮಹಾನ್ ಶಕ್ತಿ. ಅವರ ಬೆಳವಣಿಗೆ ವೈಯಕ್ತಿಕವಾದದ್ದಲ್ಲ, ಸಾಂಘಿಕವಾದದ್ದು. 'ಅಕ್ಷರ ಪ್ರಕಾಶನದ ಮೂಲಕ , 'ನೀನಾಸಂ' ಮೂಲಕ ಅನೇಕ ಪ್ರತಿಭೆಗಳನ್ನು ಅವರು ...

READ MORE

Related Books