ಟೀ ಬ್ರೇಕ್

Author : ಸುಮಾ ರಮೇಶ್

Pages 168

₹ 150.00




Year of Publication: 2021
Published by: ಪ್ರಸಾದ್ ಏಜೆನ್ಸೀಸ್
Address: ನಂ.657, ಕೂಗುಬಂಡೆ ರಸ್ತೆ, ಇ &ಎಫ್ ಬ್ಲಾಕ್, ಕುವೆಂಪುನಗರ, ಮೈಸೂರು- 570 023

Synopsys

ಲೇಖಕಿ ಸುಮಾ ರಮೇಶ್ ಅವರ ಟೀ ಬ್ರೇಕ್ ಕೃತಿ ಚಹಾದೊಮದಿಗೆ ಚಾಟ್ಸ್ ಎಂಬ ಉಪಶೀರ್ಷಿಕೆಯನ್ನು ಹೊಂದಿದೆ. ಲೇಖಕಿ ನಳಿನಿ ಟಿ. ಭೀಮಪ್ಪ ಅವರು ಕೃತಿಯಲ್ಲಿ ಬೆನ್ನುಡಿಯ ಮಾತುಗಳನ್ನು ಬರೆದಿದ್ದಾರೆ. ಅವರು ಹೇಳುವಂತೆ, ಭಾವದ ಜೊತೆಗೆ ಭಾವನೆಗಳು ಸೇರಿ, ಅನುಭವಗಳು ಅನುಭಾವವಾಗಿ ಹಾಸ್ಯದೊಳಹೊಕ್ಕು ಅಕ್ಷರರೂಪಕ್ಕಿಳಿದಾಗ ಮೂಡುವ ಬರಹಗಳು ಅನ್ಯಾಯಮಾನ. ಅಂತಹ ಬರಹಗಳನ್ನು ಓದುಗರಿಗೆ ನೀಡುವುದರಲ್ಲಿ ಸುಮಾ ರಮೇಶ್ ಅವರದು ಎತ್ತಿದ ಕೈ. ಅವರಲ್ಲಿನ ಹಾಸ್ಯಪ್ರಜ್ಞೆ ಅದನ್ನು ನಿರೂಪಿಸುವ ಶೈಲಿ, ಉಪಮೆಗಳ ಮೂಲಕ ಘಟನೆಗಳನ್ನು, ವಿಷಯಗಳನ್ನು ಪ್ರಸ್ತುತಪಡಿಸುವ ರೀತಿ ತಟ್ಟನೆ ಸೆಳೆಯುತ್ತವೆ. ಮನುಷ್ಯನ ನೋವು, ನಲಿವು, ದೌರ್ಬಲ್ಯ, ಹರಿಃ, ಅಸಹಾಯಕತೆ ಎಲ್ಲವನ್ನೂ ವಿಡಂಬನಾ ದೃಷ್ಟಿಕೋನದಲ್ಲಿ ಪರಾಂಬರಿಸುತ್ತ ಸಾಗುವ ಲೇಖನಗಳು ಚಿಂತನೆಗೂ ಒಳಪಡಿಸುತ್ತವೆ. ಟೀ ಬ್ರೇಕ್ ನ ರುಚಿರುಚಿಯಾದ ಚಟ್ ಪಟಾ ಚಾಲೀಸ್ ಚಾಟ್ಸ್ ಓದುಗರ ಹಸಿವನ್ನು ತಣಿಸಿ, ಆಹ್ಲಾದಕರ ಅನುಭವ ಮೂಡಿಸಿ, ತುಟಿಯಂಚಿನಲ್ಲಿ ಕಿರುನಗೆಯೊಂದನ್ನು ಸೂಸುವಂತೆ ಮಾಡುವಲ್ಲಿ ಯಶಸ್ವಿಯಾಗುತ್ತದೆ. ಬರವಣಿಗೆ ಸದಾ ಜಾರಿಯಲ್ಲಿರಲಿ, ಮತ್ತಷ್ಟು ಪುಸ್ತಕಗಳು ಸುಮಾ ಅವರಿಂದ ಹೊರಬರಲಿ ಎಂದು ಹಾರೈಸಿದ್ದಾರೆ.

ಖುದ್ದು ಲೇಖಕಿಯ ಮಾತುಗಳಲ್ಲಿ, ಈ ಸಂಕಲನದ ನಲವತ್ತು ಪ್ರಬಂಧಗಳು ಕಳೆದ ಒಂಭತ್ತು ವರ್ಷಗಳಿಂದ ಸುಧಾ, ಪ್ರಿಯಾಂಕ, ಮಂಗಳ, ಉದಯವಾಣಿ ಮುಂತಾದ ಪತ್ರಿಕೆಗಳಲ್ಲಿ ಪ್ರಕಟವಾದಂತಹವು. ಇಲ್ಲಿರುವ ಹೆಚ್ಚಿನ ಬರಹಗಳು ವಾಸ್ತವದ ಹಂದರದ ಮೇಲೆ ಹಬ್ಬಿದ ಹೂ ಕಾಯಿ ಹಣ್ಣುಗಳು. ಕೆಲವು ನಾನೇ ಅನುಭವಿಸಿದ ಸುಖದುಃಖಗಳಾದರೆ ಹಲವು ನನ್ನ ಮಿತ್ರ ವೃಂದ , ಸಂಬಂಧಿಕರು ಅಥವಾ ಪರಿಚಿತರು ಅನುಭವಿಸಿದ ತರಲೆ ತಾಪತ್ರಯಗಳು. ಇಂತಹ ಸಂಗತಿಗಳಿಗೆ ಅಲ್ಲಲ್ಲಿ ಅತಿಶಯೋಕ್ತಿ ಹಾಗು ರಂಜನೆಯ ಸ್ಪರ್ಶ ನೀಡಿ ಹಾಸ್ಯ ರಸ ಬುಗ್ಗೆ ಚಿಮ್ಮಿಸಲು ಪ್ರಯತ್ನಿಸಿರುವೆ. ನಿಮ್ಮ ವಿರಾಮ ಸಮಯದಲ್ಲಿ ಚಹಾದೊಂದಿಗೆ ಸವಿಯುವ ಕುರುಕಲುಗಳಂತೆ ಇವು ನಿಮ್ಮ ಮನಕ್ಕೆ ಚುರುಕಾದ ಸ್ವಾದ ನೀಡಿ ರಂಜಿಸಿದರೆ ನನ್ನ ಶ್ರಮ ಸಾರ್ಥಕ ಎಂಬುದಾಗಿ ಹೇಳಿದ್ದಾರೆ.

About the Author

ಸುಮಾ ರಮೇಶ್

ಸುಮಾ ರಮೇಶ್ ಹುಟ್ಟಿದ್ದು ಚಿಕ್ಕಮಗಳೂರಿನಲ್ಲಿ. ಹಾಸನದ ಶ್ರೀ ರಾಮಕೃಷ್ಣ ವಿದ್ಯಾಲಯದಲ್ಲಿ ಮಾಧ್ಯಮಿಕ ವಿದ್ಯಾಭ್ಯಾಸ ಮುಗಿಸಿ, ಚಿಕ್ಕಮಗಳೂರಿನ ಮೌಂಟೇನ್ ವ್ಯೂ ಶಾಲೆಯಲ್ಲಿ ಹೈಸ್ಕೂಲ್ ವಿದ್ಯಾಬ್ಯಾಸ ಹೈಸ್ಕೂಲು ಶಿಕ್ಷಣವನ್ನು ಪಡೆದರು. ಹಾಸನದ ಮಹಿಳಾ ಪಾಲಿಟೆಕ್ನಿಕ್ ನಲ್ಲಿ ಕಮರ್ಶಿಯಲ್ ಪ್ರ್ಯಾಕ್ಟೀಸ್ ಡಿಪ್ಲೊಮಾ ಪಡೆದಿದ್ದು, ಎ ವಿ ಕಾಂತಮ್ಮ ಕಾಲೇಜು, ಹಾಸನದಲ್ಲಿ ಬಿ.ಕಾಂ.ಪದವಿ ಪಡೆದರು. ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲೂ ವಿಶೇಷ ಆಸಕ್ತಿ ಹೊಂದಿರುವ ಸುಮಾ ರಮೇಶ್ ಮೈಸೂರು ವಿಶ್ವವಿದ್ಯಾಲಯದ ಅಂತರ ಕಾಲೇಜು ಚದುರಂಗ ಸ್ಪರ್ಧೆಯಲ್ಲಿ ಚಿನ್ನದ ಪದಕವನ್ನು ಪಡೆದವರು. ಶಿಕ್ಷಕಿ ಹಾಗು ಮುಖ್ಯ ಶಿಕ್ಷಕಿಯಾಗಿ ಕೆಲವು ವರ್ಷಗಳ ಕಾಲ ಕಾರ್ಯನಿರ್ವಹಿಸಿ, ಗೃಹಿಣಿಯಾಗಿ ನೆಲೆಸಿರುವುದು ...

READ MORE

Related Books