ತೀರದ ಧ್ಯಾನ

Author : ಶ್ರೀದೇವಿ ಕೆರೆಮನೆ



Published by: ರೂಪ ಪ್ರಕಾಶನ
Address: # 2406, 2407/K-1, 1ನೇ ಅಡ್ಡರಸ್ತೆ, ಹೊಸಬಂಡಿಕೇರಿ, ಮೈಸೂರು-570004
Phone: 9342274331

Synopsys

ಲೇಖಕಿ ಶ್ರೀದೇವಿ ಕೆರೆಮನೆ ಅವರ ಗಜಲ್‌ ಕುರಿತಾದ ವಿಶ್ಲೇಷಣಾ ಲೇಖನ ʻತೀರದ ಧ್ಯಾನʼ. ಪುಸ್ತಕದ ಬೆನ್ನುಡಿಯಲ್ಲಿ ಲೇಖಕ ಹಾಗೂ ಕನ್ನಡ ಪ್ರಾಧ್ಯಾಪಕರಾದ ಡಾ. ಮಲ್ಲಿನಾಥ ಎಸ್.‌ ತಳವಾರ ಅವರು, “ತೀರದ ಧ್ಯಾನವು ಹಲವು ಒಳನೋಟಗಳ ಕ್ರೋಢೀಕರಣವಾಗಿದೆ. ಗಜಲ್‌ನ್ನು ಹೇಗೆ ಓದಿ ಆರ್ಥೈಸಿಕೊಳ್ಳಬಹುದು ಎಂಬುದರ ಜೊತೆಗೆ ಒಂದು ಸಶಕ್ತ ಗಜಲ್ ಹೇಗಿರಬೇಕು, ಹೇಗಿದ್ದರೆ ಚಂದ ಎಂಬುದರ ಮೇಲೂ ಬಿಳಕು ಚೆಲ್ಲುತ್ತದೆ. ಭಾವ ಮುನ್ನೆಲೆಗೆ ಬಂದು ಲಕ್ಷಣಗಳು ಹಿನ್ನೆಲೆಗೆ ಸರಿದರೆ ಅದು ಗಜಲ್ ರೂಪದಿಂದ ದೂರ ಸರಿಯುವ ಅವಕಾಶವಿರುತ್ತದೆ. ಹಾಗೆಂದ ಮಾತ್ರಕ್ಕೆ ಬರಿ ಸ್ವರೂಪ ಲಕ್ಷಣಕ್ಕೆ ಜೋತುಬಿದ್ದರೆ ಜೀವವಿರದ ಹಿಟ್ಟಿನ ಹುಂಜ ಆಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಇವೆರಡರ ಹದವಾದ ಮಿಶ್ರಣದಿಂದ ರಚನೆಯಾದ ಗಜಲ್‌ಗಳು ಗಜಲ್‌ ಸಮಾಜದಲ್ಲಿ ಪ್ರಜ್ವಲಿಸುತ್ತವೆ.ಕೆಲವು ಪ್ರವೇಶಿಕೆಯು ಹಾಗೂ ಅಶಾರ್‌ ವಿವರಣೆಯ ಏರಿಳಿತಗಳ ಮಧ್ಯೆಯೂ ʻತೀರದ ಧ್ಯಾನʼ ಅಂಕಣ ಬರಹಗಳ ಮಾಲೆಯು ಓದಿಸಿಕೊಂಡು ಹೋಗುತ್ತದೆ” ಎಂದು ಹೇಳಿದ್ದಾರೆ.

About the Author

ಶ್ರೀದೇವಿ ಕೆರೆಮನೆ

ಉತ್ತರ ಕನ್ನಡ ಜಿಲ್ಲೆ  ಹಿರೇಗುತ್ತಿ ಮೂಲದ  ಶ್ರೀದೇವಿ ಕೆರೆಮನೆ ವೃತ್ತಿಯಿಂದ ಪ್ರೌಢಶಾಲಾ ಶಿಕ್ಷಕಿ. ಸಾಹಿತ್ಯ ರಚನೆ ಹವ್ಯಾಸ. ಮೊದಲ ಕವನ ಸಂಕಲನ ’ನಾನು ಗೆಲ್ಲುತ್ತೇನೆ’. ಬಳಿಕ ’ಗೆಜ್ಜೆ ಕಟ್ಟದ ಕಾಲಲ್ಲಿ’,’ಮೌನದ ಮಹಾ ಕೋಟೆಯೊಳಗೆ’, ’ಮೈ ಮುಚ್ಚಲೊಂದು ತುಮಡು ಬಟ್ಟೆ’, ಕೃತಿಗಳು ಬಂದವು. ಅಂಗೈಯೊಳಗಿನ ಬೆಳಕು(ವಿಮರ್ಶಾ ಸಂಕಲನ), ’ಅಲೆಯೊಳಗಿನ ಮೌನ’, ’ನನ್ನ ದನಿಗೆ ನಿನ್ನ ದನಿಯು’ ಗಜಲ್‌ ಕೃತಿ. ’ಬೈಟೂ’ ಚಹಾ ಕುರಿತ ಸಂಕಲನವಾದರೆ ಬಿಕ್ಕೆಹಣ್ಣು, ಚಿತ್ತ ಚಿತ್ತಾರ ಅವರ ಕತೆಗಳ ಗುಚ್ಛ. ಗೂಡು ಕಟ್ಟುವ ಸಂಭ್ರಮದಲ್ಲಿ (ಪ್ರಬಂಧ ಬರಹ ಸಂಕಲನ). ’ಪ್ರೀತಿ ಎಂದರೆ ಇದೇನಾ?, ಹೆಣ್ತನದ ಆಚೆ ...

READ MORE

Related Books