ತೇಜಸ್ವಿ ಸಿಕ್ಕರು

Author : ಕೆ. ಎಸ್. ಪರಮೇಶ್ವರ

Pages 227

₹ 250.00




Year of Publication: 2018
Published by: ಬಹುರೂಪಿ ಪ್ರಕಾಶನ
Address: Crazy Frog Media LLP, #111, Embassy Centre , Crescent Road, Kumara Park East, Bengaluru

Synopsys

ಪೂರ್ಣಚಂದ್ರ ತೇಜಸ್ವಿ ಅವರ ನೆನಪಿನ ಉತ್ಸವದಲ್ಲಿ ಹೊರತರಲಾದ ಕೃತಿ ’ ತೇಜಸ್ವಿ ಸಿಕ್ಕರು’. ಅನೇಕ ಲೇಖಕರ, ತೇಜಸ್ವಿ ಹಿತೈಷಿಗಳ ಲೇಖನಗಳನ್ನು ಈ ಕೃತಿ ಒಳಗೊಂಡಿದೆ. 

ತೇಜಸ್ವಿ ಅವರ ಬಗ್ಗೆ ಗೊತ್ತಿರದ ಅಪರೂಪದ ಸಂಗತಿಗಳನ್ನು ಈ ಕೃತಿ ಓದುಗರಿಗೆ ತಿಳಿಸುತ್ತದೆ. ತೇಜಸ್ವಿಯವರ ಬರಹಗಳಂತೆಯೇ ಅವರ ಬದುಕಿನ ಸ್ವಾರಸ್ಯಕರ ಸಂಗತಿಗಳನ್ನು, ತೇಜಸ್ವಿ ಇದ್ದ  ಮೂಡಿಗೆರೆಯ 'ನಿರುತ್ತರ' ಮನೆ, ಮೂಡಿಗೆರೆಯ ಪ್ರತಿಯೊಬ್ಬರೂ ತೇಜಸ್ವಿಯನ್ನು ಬಲ್ಲವರು. ಅವರು ಹಂಚಿಕೊಂಡಿರುವ ತೇಜಸ್ವಿಯ ನೆನಪುಗಳನ್ನೂ ಈ ಕೃತಿ ಚಿತ್ರಿಸುತ್ತದೆ.  ಲೇಖಕರಾದ ಕೆ.ಎಸ್. ಪರಮೇಶ್ವರ ಅವರು ಸಂಗ್ರಹಿಸಿ ’ತೇಜಸ್ವಿ ಸಿಕ್ಕರು’ಪುಸ್ತಕವನ್ನು ಹೊರತಂದಿದ್ದಾರೆ. 

ತೇಜಸ್ವಿ ಅವರ 80ನೇ ಹುಟ್ಟುಹಬ್ಬದ ಅಂಗವಾಗಿ ಬಹುರೂಪಿ ಪ್ರಕಾಶನ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಈ ಕೃತಿಯನ್ನು ಬಿಡುಗಡೆ ಮಾಡಲಾಗಿದೆ. 

About the Author

ಕೆ. ಎಸ್. ಪರಮೇಶ್ವರ

ಕೆ.ಎಸ್. ಪರಮೇಶ್ವರ ಅವರು ಮೂಲತಃ ಬೆಂಗಳೂರಿನವರು. ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಎಂ.ಕಾಂ ಪದವಿ ಪಡೆದಿದ್ದಾರೆ. ರಂಗಭೂಮಿಯ ಹಿನ್ನೆಲೆ ಇರುವ ಪರಮೇಶ್ವರ್ ಸುಮಾರು 12 ವರ್ಷಗಳಿಂದ ನಟನೆ, ನಿರ್ದೇಶನ, ಬೆಳಕಿನ ವಿನ್ಯಾಸ, ರಂಗಸಜ್ಜಿಕೆ, ವಸ್ತ್ರವಿನ್ಯಾಸ, ಸಂಘಟನೆ ಹೀಗೆ ರಂಗಭೂಮಿಯ ಹಲವಾರು ವಿಭಾಗಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ. 2010-2011ನೇ ಸಾಲಿನಲ್ಲಿ ರಾಷ್ಟ್ರೀಯ ನಾಟಕ ಶಾಲೆ(National School of Drama) ಬೆಂಗಳೂರು ಅಧ್ಯಾಯದಿಂದ ರಂಗಭೂಮಿ ಕುರಿತು ಅಧ್ಯಯನ ಮಾಡಿದ್ದಾರೆ. ಕಾನೂರು ಹೆಗ್ಗಡತಿ, ಸಿರಿಸಂಪಿಗೆ, ಕಥನ, ಮಿಸ್.ಸದಾರಮೆ, ಕಥೆ ಹೇಳ್ತೀವಿ, ಶಾಂಡಿಲ್ಯ ಪ್ರಹಸನ, ಚೆರಿ ಆರ್ಚರ್ಡ್, ಉತ್ತರರಾಮ ಚರಿತೆ, ಪ್ರಮೀಳಾರ್ಜುನೀಯಂ, ನಾಯಿಕಥೆ, ಸೇವಂತಿ ಪ್ರಸಂಗ, ಚಿರಕುಮಾರ ...

READ MORE

Related Books