ತೆನಾಲಿ ರಾಮನ ಕಥೆಗಳು

Author : ವೈ.ಎನ್. ಗುಂಡೂರಾವ್

Pages 56

₹ 80.00
Year of Publication: 2022
Published by: ಅಂಕಿತ ಪುಸ್ತಕ

Synopsys

ತೆನಾಲಿ ರಾಮನ ಕಥೆಗಳು ವೈ.ಎನ್‌.ಗುಂಡೂರಾವ್‌ ಅವರ ಮಕ್ಕಳ ಕೃತಿಯಾಗಿದೆ. ಇತ್ತೀಚೆಗೆ ಕಂಪ್ಯೂಟರ್ ಕ್ರಾಂತಿ ನಡೆದು ಎಲ್ಲವೂ ಅಂಗೈಯಲ್ಲೇ ಸಿಗುವಂತಾಗಿರುವುದರಿಂದ ಮಕ್ಕಳಿಗೆ ಕೂಡಾ ಆಟ-ಪಾಠಗಳಿಗೆಲ್ಲಾ ಕಂಪ್ಯೂಟರ್, ಅದರಲ್ಲೂ ಮೊಬೈಲ್ ಅನಿವಾರವಾಗಿಬಿಟ್ಟಿದೆ. ಹಿಂದಿನಂತೆ ರಾತ್ರಿ ಮಲಗುವಾಗ ಕಥೆ 'ಹೇಳಜ್ಜಿ' ಎಂದು ಪೀಡಿಸುವ ಮಕ್ಕಳೂ ಇಲ್ಲ. ಕಥೆ ಹೇಳಲು ಅಜ್ಜಿಯರೂ ಇಲ್ಲ. ಇನ್ನು ಮಕ್ಕಳು ಕಥೆ ಕೇಳುವುದಕ್ಕಿಂತ ಮೊಬೈಲ್ ನೋಡುವುದೇ ಹೆಚ್ಚಾಗಿದೆ. ಕಥೆ ಹೇಳುವವರು - ಕೇಳುವವರು ಇಲ್ಲದಿದ್ದರೂ ಹಳೆಯ ರಾಮಾಯಣ, ಮಹಾಭಾರತ, ಬುದ್ಧನ ಜಾತಕ ಕಥೆಗಳು, ಬೀರಬಲ್ಲನ ಕಥೆಗಳು, ತೆನಾಲಿ ರಾಮನ ಕಥೆಗಳು ಹೊಸ ಹೊಸ ರೂಪ ಪಡೆದು `ಯೂಟ್ಯೂಬ್' ಮುಂತಾದೆಡೆ ಪ್ರಸಾರಗೊಳ್ಳುತ್ತಿವೆ ಎಂದು ವೈ.ಎನ್. ಗುಂಡೂರಾವ್ ಅವರು ಮೊದಲ ನುಡಿಯಲ್ಲಿ ತಿಳಿಸಿದ್ದಾರೆ.

About the Author

ವೈ.ಎನ್. ಗುಂಡೂರಾವ್
(06 June 1945)

ಹಾಸ್ಯಪ್ರಬಂಧ ಲೇಖಕ, ಮಾಹಿತಿ ಸಂಗ್ರಾಹಕ, ಸಂಪಾದಕರಾದ ಗುಂಡೂರಾವ್‌ ಅವರು 1945 ಜೂನ್ 6ರಂದು ಈಗಿನ ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲ್ಲೂಕಿನ ಯರಗಂಬಳ್ಳಿಯಲ್ಲಿ ಹುಟ್ಟಿದರು. ನಿವೃತ್ತಿಯ ನಂತರ ಪೂರ್ಣ ಪ್ರಮಾಣದ ಸಾಹಿತ್ಯಾಭ್ಯಾಸ, ಬರೆಹದಲ್ಲಿ ತೊಡಗಿಕೊಂಡಿದ್ದಾರೆ. ಸದಭಿರುಚಿಯ ಹಾಸ್ಯ ಪ್ರಸಾರಕ್ಕಾಗಿ ಸ್ಥಾಪಿಸಿರುವ ‘ಹಾಸ್ಯಬ್ರಹ್ಮ ಟ್ರಸ್ಟ್’ನ ಸ್ಥಾಪಕ ಸದಸ್ಯರು. ಸಂಜೆ ಕಾಲೇಜಿಗೆ ಸೇರಿದಾಗ ದೊರೆತ ಸಾಹಿತಿ ಮಿತ್ರರ ಓಡನಾಟದಿಂದ ಸಾಹಿತ್ಯದ ಓದು, ಬರೆಹವನ್ನು ಅತಿ ಗಂಭೀರವಾಗಿ ತೆಗೆದುಕೊಂಡು ಪತ್ರಿಕೆಗಳಿಗೆ ಬರೆದ ಲೇಖನಗಳು. ಮೊದಲ ಲೇಖನ ಕಸ್ತೂರಿ ಮಾಸಪತ್ರಿಕೆ, ಮೊದಲ ಕತೆ ಇಂಚರ ಮಾಸ ಪತ್ರಿಕೆ ಹಾಗೂ ಮೊದಲ ಹಾಸ್ಯಲೇಖನ ಪ್ರಜಾವಾಣಿ ದಿನ ಪತ್ರಿಕೆಯಲ್ಲಿ ...

READ MORE

Related Books