ತೆಂಗು

Author : ಚನ್ನಪ್ಪ ಎರೇಸೀಮೆ

Pages 56

₹ 8.00




Year of Publication: 1989
Published by: ಎರೇಸೀಮೆ ಪ್ರಕಾಶನ
Address: #597, 7ನೇ ಮುಖ್ಯ ರಸ್ತೆ, 2ನೇ ಅಡ್ಡರಸ್ತೆ, ವಿಜಯನಗರ, ಬೆಂಗಳೂರು-560040

Synopsys

ತೆಂಗು-ಕೃತಿಯನ್ನು ಪಂಡಿತ ಚನ್ನಪ್ಪ ಎರೇಸೀಮೆ ಬರೆದಿದ್ದಾರೆ. ರಾಜ್ಯದ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಈ ಕೃತಿ ಇರುವಂತೆ ಅಂದಿನ ಸಾರ್ವಜನಿಕ ಶಿಕ್ಷಣ ನಿರ್ದೇಶನಾಲಯವು ಶಿಫಾರಸು ಮಾಡಿತ್ತು. ಕೃತಿಯು 1969 ರಲ್ಲಿ ಮೊದಲ ಬಾರಿಗೆ ಮುದ್ರಣ ಕಂಡಿತ್ತು. 1989ರ ಈ ಕೃತಿಯು 4ನೇ ಆವೃತ್ತಿಯಾಗಿದೆ.

‘ತೆಂಗು’ ಎಂಬ ಒಂದೇ ಒಂದು ಗಿಡದ ನೂರೆಂಟು ಉಪಯುಕ್ತತೆಗಳನ್ನು ಮಕ್ಕಳಿಗೆ ಹಂತಹಂತವಾಗಿ ಹೇಗೆ ತಿಳಿ ಹೇಳಬೇಕೆಂಬ ಲೇಖಕರ ನಿರೂಪಣಾ ಶೈಲಿ ಈ ಕೃತಿಯ ಆಕರ್ಷಣೆ. ಏಕೆಂದರೆ, ಮಕ್ಕಳಿಗೆ ಎಲ್ಲವನ್ನೂ ತಿಳಿಸಬೇಕು ಎಂಬ ಭರದಲ್ಲಿ ಎಲ್ಲವನ್ನೂ ಒಂದೇ ಬಾರಿಗೆ ಹೇಳಬಾರದು. ಅಷ್ಟಕ್ಕೂ, ಮಕ್ಕಳಿಗೆ ತಿಳಿಯುವುದಿಲ್ಲ ಎಂಬ ನಿರ್ಲಕ್ಷ್ಯವೂ ಸಲ್ಲದು. ತೆಂಗು ಸಸಿ, ತೆಂಗು ಗಿಡ, ಅದರ ಫಲ, ಗಿಡದ ಬಾಳಿಕೆ, ರೋಗಗಳು, ಗಿಡದ ಪ್ರತಿ ಭಾಗದ ಪ್ರಯೋಜನ, ಮಾರುಕಟ್ಟೆ ಸ್ವರೂಪ ಹೀಗೆ ವಸ್ತು ವೈವಿಧ್ಯತೆ ಇರುವ ಹಾಗೆ ಅವರ ಆಸಕ್ತಿ ನಿರಂತರವಾಗಿರುವಂತೆ ಕಾಯ್ದುಕೊಳ್ಳುತ್ತಾ ಹೋಗುವ ಮೂಲಕ ತೆಂಗಿನ ಸಮಗ್ರ ಚಿತ್ರಣ ನೀಡುವ ಈ ಕೃತಿ ನಿರೂಪಣಾ ಶೈಲಿಯೊಂದಿಗೆ ಮಹತ್ವದ್ದು ಎನಿಸಿದೆ.

About the Author

ಚನ್ನಪ್ಪ ಎರೇಸೀಮೆ

ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಹರವಿ ಗ್ರಾಮದ ಚೆನ್ನಪ್ಪ ಎರೇಸೀಮೆ ಅವರು (1919) ಜನಿಸಿದರು. ಮುಲ್ಕಿ ಪರೀಕ್ಷೆ ಪಾಸಾದ ನಂತರ ಶಿಕ್ಷಕರಾದರು. ಕೀರ್ತನಾಕಾರ-ಪ್ರವಚನಾಕಾರರಾದರು. ನುಡಿ ಗಾರುಡಿಗ ಎಂದೇ ಪ್ರಖ್ಯಾತರು. ಶಿಕ್ಷಕ ತರಬೇತಿ ಕಾಲೇಜಿನಲ್ಲಿ 30 ವರ್ಷ ಕಾಲ ಬೋಧನೆ ನಂತರ ನಿವೃತ್ತರಾದರು. ತುಮಕೂರಿನ ಸಿದ್ಧಗಂಗಾ ಮಠದೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು. ಮಠದ ಸಿದ್ಧಗಂಗಾ ಮಾಸಪತ್ರಿಕೆಯ ಸಂಪಾದಕರೂ ಆಗಿದ್ದರು. ಶ್ರೀ ಶಿವಕುಮಾರ ಸ್ವಾಮೀಜಿಯವರ ಪಟ್ಟಾಧಿಕಾರ ಮಹೋತ್ಸವ ವೇಳೆ ‘ಸಿದ್ಧಗಂಗಾ ಶ್ರೀ’ ಹಾಗೂ ವಜ್ರಮಹೋತ್ಸವ ವೇಳೆ ‘ದಾಸೋಹ ಸಿರಿ’ ಮಹಾಸಂಪುಟಗಳ ರಚನೆ-ಪ್ರಕಟಣೆಯಲ್ಲೂ ಮಹತ್ವದ ಪಾತ್ರ ವಹಿಸಿದ್ದರು. ಪ್ರಾಥಮಿಕ, ಪ್ರೌಢಶಿಕ್ಷಣ, ಪಿಯುಸಿ ...

READ MORE

Related Books