'ದಿ ಚಾಯ್ಸ್' ಎನ್ನುವ ಡಾಕ್ಟರ್ ಈಡಿತ್ ಎಗರ್ ಅವರ ಈಡಿತ್ ಎಗರ್ ಆತ್ಮಕಥನದ ಮೂಲವಾಗಿದ್ದು ಜಯಶ್ರೀ ಭಟ್ ಅವರು ಅನುವಾದಿಸಿದ್ದಾರೆ. ಈ ಪುಸ್ತಕವನ್ನು ಓದಿದಾಗ ನನ್ನನ್ನು ತೀವ್ರವಾಗಿ ಕಾಡಿದ್ದು ಈಕೆ ಹಿಟ್ಲರ್‌ನ ರಾಕ್ಷಸಿ ಹಿಡಿತದಿಂದ ತಪ್ಪಿಸಿಕೊಂಡು ಹೋಗಿ ಹೇಗೆ ತನ್ನ ಬಾಳನ್ನು ಬಂಗಾರ ಮಾಡಿಕೊಂಡಳು ಎಂಬ ಅದಮ್ಯ ಆಶಾವಾದಿ ಕಥನ, ಈ ಕಥೆಯ ಹೀರೋ ಈಕೆ. ಇಲ್ಲಿ ಮನುಷ್ಯನನ್ನು ಮೇಲೇರದಂತೆ ಜಗ್ಗುವ ದ್ವೇಷ, ನಿಂದ, ಋಣಾತ್ಮಕ ಚಿಂತನೆಗಳನ್ನೆಲ್ಲಾ ಅಲ್ಲಲ್ಲೇ ಚಿವುಟುತ್ತಾ ತಾನು ತನ್ನನ್ನೇ ಅರಿಯುತ್ತಾ ಹೋಗಿ ಲೌಕಿಕವಾಗಿಯೂ ಡಾಕ್ಟರೇಟ್ ಅಂತಹ ಪದವಿ, ಪ್ರಶಸ್ತಿ ಪಡೆಯುತ್ತಾ ಮಾನವತ್ವದ ಜಯ ಅಲೌಕಿಕವಾಗಿ ಸಾಧಿಸಲು ಬೇಕಾದ ಸಾಧನವನ್ನೂ ಲೇಖಕಿ ತಮಗರಿವಿಲ್ಲದೆಯೇ ವಿವರಿಸುತ್ತಾ ಹೋಗುತ್ತಾರೆ. ಇದೇ ತತ್ವವನ್ನು ನಮ್ಮ ವೇದ ಉಪನಿಷತ್ತುಗಳು ಸಾರಿವೆ ಎಂದು ಅನುವಾದಕಿ ಮಾತಿನಲ್ಲಿ ಜಯಶ್ರೀ ಭಟ್ ತಿಳಿಸಿದ್ದಾರೆ.
ಪರಿವಿಡಿ ಭಾಗ 1 ಜೈಲು, ನಾಲ್ಕು ಪ್ರಶ್ನೆಗಳು, ಮನಸಲೇನು ತುಂಬುಏರಿ?, ನರಕದಲ್ಲಿ ನೃತ್ಯ ,ಕಾರ್ಟ್ ಸ್ಟೀಲ್ ಮರಣದ ಮೆಟ್ಟಿಲು, ಒಂದು ಹುಲ್ಲು ಮೊನೆಯ ಆಯ್ಕೆ . ಭಾಗ 2 ಬಿಡುಗಡೆ, ನನ್ನ ರಕ್ಷಕ, ನನ್ನ ಭಕ್ಷಕ, ಕಿಟಕಿಯೊಳಗಿಂದ, ಮುಂದಿನ ವರ್ಷ ಜೆರುಸಲೇಮ್ ಪಲಾಯನ, ಇಮ್ಮಿಗ್ರೇಶನ್ ದಿನ, ಹೊಸಬರು, ನೀನಿದ್ದೆಯಾ ಅಲ್ಲಿ? ಒಬ್ಬ ಸಂತ್ರಸ್ತನಿಂದ ಇನ್ನೊಬ್ಬ ಸಂತ್ರಸ್ತೆಗೆ, ಜೀವನದ ನಿರೀಕ್ಷೆಗಳು ,ಸ್ವಾತಂತ್ರ್ಯ, ಆಯ್ಕೆ, ಆಗ ಹಿಟ್ಲರ್ ಗೆದ್ದ, ಗೊಬೆಲ್ಸ್‌ನ ಹಾಸಿಗೆ ,ಮರಳಿ ಆಶ್ವಿಟ್ಸ್‌ಗೆ, ಸ್ವಾತಂತ್ರ್ಯದ ನರ್ತನ ಸೇರಿದಂತೆ ಒಟ್ಟು 20 ಅಧ್ಯಾಯಗಳನ್ನು ಹೊಂದಿದೆ.
©2023 Book Brahma Private Limited.