ದಿ ಫ್ರೊಲಿಕ್ ಪ್ಲೇ ಆಫ್ ದಿ ಲಾರ್ಡ್

Author : ಬಸವರಾಜ ನಾಯ್ಕರ

Pages 188

₹ 475.00




Year of Publication: 2010
Published by: ಗ್ನೋಸಿಸ್ ಪ್ರಕಾಶನ
Address: ಇಂಪ್ರಿಂಟ್ ಆಫ್ ಆಥರ್‍ಸ್ ಪ್ರೆಸ್, ಜವಾಹರ ಪಾರ್ಕ್, ಲಕ್ಷ್ಮಿ ನಗರ, ನವದೆಹಲಿ-110092

Synopsys

ಕನ್ನಡ ಸಾಹಿತ್ಯದ ಉತ್ಕೃಷ್ಠ ಕೃತಿ ‘ಚಾಮರಸನ ಪ್ರಭುಲಿಂಗ ಲೀಲೆ’ ಯನ್ನು ಪಾಶ್ಚಾತ್ಯ ಸಾಹಿತ್ಯ ಪ್ರಕಾರದ ಪುರಾಣ ಅಥವಾ ಓಡಿಸ್ಸಿಯಂತಹ ಮಹಾಕಾವ್ಯಗಳ ರೀತಿಯಲ್ಲಿ ಲೇಖಕ ಡಾ. ಬಸವರಾಜ ನಾಯ್ಕರ್ ಅವರು ಇಂಗ್ಲಿಷ್ ಭಾಷೆಗೆ ಅನುವಾದಿಸಿದ್ದಾರೆ. ವಿಶ್ವದ ಮಹಾಕಾವ್ಯಗಳನ್ನು ಭಾರತೀಯ ಮಹಾಕಾವ್ಯಗಳೊಂದಿಗೆ ಹೋಲಿಸಿ, ಧರ್ಮ, ತತ್ವಜ್ನಾನ ಹಾಗೂ ರಹಸ್ಯ ವಿದ್ಯೆ ಇತ್ಯಾದಿ ತೌಲನಿಕವಾಗಿ ಅಧ್ಯಯನ ಮಾಡಲು ಈ ಕೃತಿ ಉತ್ತಮ ಆಕರವಾಗಿದೆ. 

ಶರಣ ಶ್ರೇಷ್ಠ ಅಲ್ಲಮಪ್ರಭು ಅವರು ಬಸವ ಕಲ್ಯಾಣದ  ಅನುಭವ ಮಂಟಪದಲ್ಲಿ ಬಸವಣ್ಣ, ಅಕ್ಕಮಹಾದೇವಿ ಸೇರಿದಂತೆ ಇತರೆ ಎಲ್ಲ ಶರಣರಿಗೂ  ಮಾರ್ಗದರ್ಶಕರು. ಅಲ್ಲಿ ನೀಡಲಾದ  ಎಲ್ಲ ಸಲಹೆ-ಸೂಚನೆ-ಉಪದೇಶ-ಸಂದೇಶ ರೂಪದ ವಚನಗಳು ಈ ಕೃತಿ ಒಳಗೊಂಡಿದೆ. 2012 ರಲ್ಲಿಈ ಕೃತಿಗೆ ಕುವೆಂಪು ಭಾಷಾ ಭಾರತಿ ಪುಸ್ತಕ ಪ್ರಶಸ್ತಿ ಸಂದಿದೆ. 

About the Author

ಬಸವರಾಜ ನಾಯ್ಕರ
(01 August 1949)

ಡಾ. ಬಸವರಾಜ ನಾಯ್ಕರ್ ಅವರು ಮೂಲತಃ ಗದಗ (ಜನನ: 01-08-1949) ಜಿಲ್ಲೆಯ ನರಗುಂದದವರು. ತಂದೆ ಶಿವಶಂಕರಪ್ಪ ನಾಯ್ಕರ, ಧಾರವಾಡದಲ್ಲಿ ಪ್ರಾಥಮಿಕ ಶಿಕ್ಷಣ, ನರಗುಂದದಲ್ಲಿ ಪ್ರೌಢಶಿಕ್ಷಣ ಮತ್ತೇ ಧಾರವಾಡದಲ್ಲಿ ಪಿಯುಸಿಯಿಂದ ಕರ್ನಾಟಕ ವಿ.ವಿಯಲ್ಲಿ ಸ್ನಾತಕೋತ್ತರ ಪದವಿ (ಎಂ.ಎ-ಇಂಗ್ಲಿಷ್)  ಹಾಗೂ ಕ್ಯಾಲಿಫೋರ್ನಿಯಾದಿಂದ ಡಿ.ಲಿಟ್ ಪದವೀಧರರು.  ಗುಲಬರ್ಗಾ ವಿ.ವಿಯಲ್ಲಿ ಸಂಶೋಧನಾ ಸಹಾಯಕರಾಗಿ ವೃತ್ತಿ ಜೀವನ ಆರಂಭಿಸಿ ಅಲ್ಲಿಯೇ ಉಪನ್ಯಾಸಕರಾಗಿ ರೀಡರ್‍ ಆಗಿ ನಂತರ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ರೀಡರ್, ಪ್ರೊಫೆಸರ್, ಪ್ರೊಫೆಸರ್ ಎಮಿರಿಟಿಸ್ ಆಗಿ (2011-12) ನಿವೃತ್ತಿಯಾದರು.  ಅನುವಾದಿತ ಕೃತಿಗಳು:   ಪಡುವಣ ನಾಡಿನ ಪ್ರೇಮವೀರ- 1975, ಜೋಗೀಭಾವಿ-1976, ಕೊಳ್ಳದ ನೆರಳು-1978, ಹುಚ್ಚುಹೊಳೆ-1980, ನಿಗೂಢ ಸೌಧ (11 ಫ್ರೆಂಚ್ ಕಥೆಗಳ ಅನುವಾದ)-1982, ಗೋವರ್ಧನರಾಮ-1984, ಭಾರತೀಯ ಇಂಗ್ಲೀಷ್ ಸಾಹಿತ್ಯ ಚರಿತ್ರೆ-2006, ಕೆಂಪು ...

READ MORE

Related Books