ಟಿಪ್ಪು ಸುಲ್ತಾನ್

Author : ಬಿ. ಷೇಕ್ ಅಲಿ

Pages 78

₹ 27.00




Year of Publication: 2010
Published by: ನ್ಯಾಷನಲ್ ಬುಕ್ ಟ್ರಸ್ಟ್ ಆಫ್ ಇಂಡಿಯಾ
Address: ರವೀಂದ್ರ ಭವನ, ನವದೆಹಲಿ.

Synopsys

ಪ್ರೊ. ಬಿ. ಷೇಕ್ ಅಲಿ ಅವರ ಐತಿಹಾಸಿಕ ಕೃತಿ-ಟಿಪ್ಪು ಸುಲ್ತಾನ್. ಹೈದರಾಲಿಯ ಪುತ್ರ ಟಿಪ್ಪುವಿನ ಆಡಳಿತ ವೈಖರಿ, ಜಾಣ್ಮೆ., ವಿವಿಧ ಧರ್ಮಗಳೆಡೆಗೆ ಆತನ ದೃಷ್ಟಿಕೋನ, ಸಾಮ್ರಾಜ್ಯದ ವಿಸ್ತಾರ, ಯುದ್ಧಗಳು ಇತ್ಯಾದಿ ಐತಿಹಾಸಿಕ ಸಂಗತಿಗಳನ್ನು ತಿಳಿಸುವ ಮಹತ್ವದ ಕೃತಿ.

About the Author

ಬಿ. ಷೇಕ್ ಅಲಿ

ಹಿರಿಯ ಇತಿಹಾಸ ತಜ್ಞ, ಶಿಕ್ಷಣ ತಜ್ಞರಾದ ಪ್ರೊ. ಬಿ. ಷೇಕ್ ಅಲಿ ಹಾಸನ ಜಿಲ್ಲೆಯ ಬೆಳಗೋಡು ಗ್ರಾಮದವರು. ಮೈಸೂರು ವಿ.ವಿ.ಯಿಂದ ಆನರ್ಸ್‌ ಪದವಿ ಹಾಗೂ ಆಲಿಘರ್‌ ಮುಸ್ಲಿಂ ವಿ.ವಿ,ಯಿಂದ ಪಿಎಚ್‌ಡಿ ಪಡೆದಿದ್ದಾರೆ. ಮೈಸೂರು ವಿ.ವಿ.ಯಲ್ಲಿ ಇತಿಹಾಸ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಉರ್ದು, ಇಂಗ್ಲಿಷ್, ಫ್ರೆಂಚ್ ಭಾಷೆ ಬಲ್ಲವರು. ಪ್ರೊ. ಷೇಕ್ ಅಲಿ ಅವರು ಸಾಲಾರ್ ಉರ್ದು ದಿನಪತ್ರಿಕೆ ಹಾಗೂ ವಾರಪತ್ರಿಕೆಯ ಪ್ರಧಾನ ಸಂಪಾದಕರಾಗಿ, ನೂರ್-ಎ-ಬಸೀರತ್ ಉರ್ದು ಮಾಸಿಕದ ಸಂಪಾದಕರಾಗಿದ್ದಾರೆ. ಕನ್ನಡ ವಿ.ವಿ.ಪ್ರಕಟಿಸಿರುವ ”ಕರ್ನಾಟಕ ಇತಿಹಾಸದ ಏಳು ಸಂಪುಟಗಳು’ ಪ್ರಧಾನ ಸಂಪಾದಕರು.   ಇವರಿಗೆ ಮೈಸೂರು ವಿಶ್ವವಿದ್ಯಾಲಯದ ಸುವರ್ಣ ಮಹೋತ್ಸವ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ದೊರೆತಿದೆ.  ...

READ MORE

Related Books