ಟಿಪ್ಪು ಸುಲ್ತಾನ

Author : ಶಿವರಾಮಯ್ಯ

Pages 168

₹ 120.00




Year of Publication: 2011
Published by: ಧಾತ್ರಿ ಪುಸ್ತಕ
Address: ನಂ. 170, 3ನೇ ಸಿ ಕ್ರಾಸ್ ವಿನಾಯಕ ಲೇಔಟ್, ನಾಗರಬಾವಿ 2ನೇ ಹಂತ, ಬೆಂಗಳೂರು - 560 072
Phone: 080-23586717

Synopsys

ಟಿಪ್ಪು ಸುಲ್ತಾನ-ಎಂಬುದು ಪ್ರೊ. ಶಿವರಾಮಯ್ಯ ಅವರ ಕೃತಿ. ಬ್ರಿಟಿಷರ ವಿರುದ್ಧ ಜೀವದ ಹಂಗು ತೊರೆದು ಹೋರಾಡಿದ ಧೀರನ ಜೀವನ ಚರಿತ್ರೆ, ಆಡಳಿತ ವೈಖರಿ, ಆತನ ಕೋಮುಸಾಮರಸ್ಯ ಹೀಗೆ ವಿವಿಧ ಆಯಾಮಗಳಲ್ಲಿ ಈ ಕೃತಿಯು ಓದುಗರನ್ನು ಪರಿಚಯಿಸುತ್ತದೆ. ಅಗತ್ಯವಿದ್ದೆಡೆಯೆಲ್ಲ ಇತಿಹಾಸದ ಸಾಕ್ಷ್ಯಾಧಾರಗಳಣ್ನೂ ಪೂರೈಸುತ್ತದೆ.

About the Author

ಶಿವರಾಮಯ್ಯ
(10 August 1940)

ಪ್ರೊ. ಶಿವರಾಮಯ್ಯ ನವರು ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕ್ ಅವಿನಮಡು ಗ್ರಾಮದಲ್ಲಿ 1940 ರ ಆಗಸ್ಟ್‌ 10ರಂದು ಜನಿಸಿದರು. ತಂದೆ ಕಂಪಲಪ್ಪ, ತಾಯಿ ಬೋರಮ್ಮ, ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎ ಪದವಿ ಪಡೆದ ಅವರು ಕನ್ನಡ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ. ಅಧ್ಯಾಪನ ಹಾಗೂ ಸಂಶೋಧನ ವೃತ್ತಿಯ ಜೊತೆಯಲ್ಲಿಯೇ ಜನಪರ ಸಂಘಟನೆಗಳೊಂದಿಗೆ ಗುರುತಿಸಿಕೊಂಡರು. ಸಕ್ರಿಯ ಹೋರಾಟಗಳಲ್ಲಿ ಭಾಗವಹಿಸುತ್ತಾ ಬಂದಿದ್ದಾರೆ.  ಸ್ವಪ್ನ ಸಂಚಯ (ಕವನ ಸಂಕಲನ), ಬೌದ್ಧ ಭಿಕ್ಷಣಿ (ಮಕ್ಕಳ ಪುಸ್ತಕ ), ಸಾಹಿತ್ಯ ಪರಿಸರ, ಉರಿಯ ಉಯಾಲೆ (ವಿಮರ್ಶೆ), ಹರಿಹರ-ರಾಘವಾಂಕ (ಜಾನಪದ ಅಧ್ಯಯನ), ದನಿ ಇಲ್ಲದವರ ದನಿ, ಕುದುರೆಮುಖ (ವೈಚಾರಿಕ), ಇವರ ಕೆಲವು ಪ್ರಕಟಿತ ಕೃತಿಗಳು. ''ನಾಡೋಜ ...

READ MORE

Reviews

(ಹೊಸತು, ಮೇ 2012, ಪುಸ್ತಕದ ಪರಿಚಯ)

ಮೈಸೂರಿನ ಹುಲಿ ಎಂದೇ ಪ್ರಸಿದ್ಧನಾಗಿದ್ದ ಟಿಪ್ಪು ಸುಲ್ತಾನ್‌ ಬ್ರಿಟಿಷ್ ಆಡಳಿತಗಾರರ ನಿದ್ದೆಕೆಡಿಸಿದ ಶೂರ, ಮೊಘಲ್‌ ಆಡಳಿತ ತಿಥಿಲಗೊಂಡು ಅಂಗ್ಲರ ಕೈ ಮೇಲಾಗಿ ವಸಾಹತು ಶಾಹಿ ಪ್ರಾಬಲ್ಯ ಹೆಚ್ಚಿಸಿಕೊಳ್ಳಲು ಇನ್ನಿಲ್ಲದಂತೆ ಕಸರತ್ತು ಮಾಡುತ್ತಿದ್ದ ಕಾಲವದು. ಟಿಪ್ಪುವಿನಂತೆಯೇ ಭಾರತದ ಇತರ ತುಂಡರಸರು ಸೆಟೆದು ನಿಲ್ಲುತ್ತಿದ್ದರೆ, ಒಗ್ಗಟ್ಟಾಗಿ ಇರುತ್ತಿದ್ದರೆ ಬಿಳಿಯರಿಂದ ಏನೂ ಮಾಡಲಾಗುತ್ತಿದ್ದಿಲ್ಲ ವೆಂಬುದು ಚರಿತ್ರೆ ಓದಿದ ಎಲ್ಲರಿಗೂ ಅರ್ಥವಾಗುವ ವಿಷಯವೇ. ತಾನು ನಂಬಿದವರೇ ದ್ರೋಹ ಬಗೆದದ್ದು ಕೂಡ ಟಿಪ್ಪುವಿನ ಅವಸಾನಕ್ಕೆ ಒಂದು ಪ್ರಧಾನ ಕಾರಣ. ಆತ ಧರ್ಮಾ೦ಧ ರಾಜನಾಗಿರಲಿಲ್ಲ: ಬಲಿಷ್ಠ ಮೈಸೂರು ಸಂಸ್ಥಾನವನ್ನು ಕಟ್ಟಲು ತುಂಬ ಶ್ರಮಿಸಿದ್ದ, ಶೃಂಗೇರಿ ಮೇಲುಕೋಟಿ ಮಠ, ದೇವಸ್ಥಾನಗಳನ್ನು ಗೌರವಿಸುತ್ತ ಇದ್ದುದಲ್ಲದೆ ಅನೇಕ. ಉಂಬಳಿಗಳನ್ನೂ ನೀಡಿದ್ದ. ಾರ್ಡ್ ವೆಲ್ತ್ ಹಾಗೂ ಕಾರ್ನ್‌ ವಾಲೀಸ್‌ ರವರ ಆಡಳಿತ ಕಾಲದಲ್ಲಿ ಟಿಪ್ಪು ಸುಲ್ತಾನನ ಶ್ರೀರಂಗಪಟ್ಟಣದ ಕೋಟೆಯನ್ನು ನಾನಾರೀತಿಯ ವಶಪಡಿಸಿಕೊಂಡವಲ್ಲದೆ ಸೋತ ಟಿಪ್ಪು ಸುಲ್ತಾನನಿಗೆ ತುಂಬ ಕಿರುಕುಳ ನೀಡಿ ಪ್ರಾಣಕ್ಕಿಂತ ಪ್ರಿಯವಾಗಿದ್ದ ಅವನ ಮಕ್ಕಳನ್ನು ಒತ್ತೆಯಿರಿಸಿಕೊ೦ಡದ್ದಂತೂ ಮನಕಲಕುವ ಘಟನೆ. ಬ್ರಿಟಿಷರೊಂದಿಗೆ ಆತ ನಡೆಸಿದ ಮೈಸೂರು ಇತಿಹಾಸದಲ್ಲಿ ರಕ್ತರ೦ಜಿತವಾಗಿ ಯುದ್ಧವು ದಾಖಲಾಗಿದೆ.

Related Books