ಟಿಪ್ಪು ಸುಲ್ತಾನನ ಹಕೀಕತ್

Author : ಮಹೇಶ್ ಕುಮಾರ್ ಸಿ.ಎಸ್

₹ 120.00




Published by: ಪರಸ್ಪರ ಪ್ರಕಾಶನ
Address: ಚಿಕ್ಕನಹಳ್ಳಿ, ಸೂಲಿಕೆರೆ (ಅಂಚೆ), ಬೆಂಗಳೂರು- 560001

Synopsys

ಲೇಖಕ ಮಹೇಶ್‌ ಕುಮಾರ್‌ ಸಿ.ಎಸ್. ಅವರ ಕೃತಿ ಟಿಪ್ಪು ಸುಲ್ತಾನನ ಹಕೀಕತ್‌. ಮೈಸೂರು ಸಂಸ್ಥಾನದ ರಾಜ ಹಾಗೂ ಬ್ರಿಟೀಷ್‌ ಸಾಮ್ರಾಜ್ಯಶಾಹಿಯ ವಿರುದ್ಧ ಹೋರಾಡಿದ ಆಗಿನ ಕಾಲದ ಪ್ರಮುಖ ಹೋರಾಟಗಾರರಲ್ಲಿ ಒಬ್ಬನಾದ ಟಿಪ್ಪು ಸುಲ್ತಾನ್ ʻಮೈಸೂರ ಹುಲಿʼ ಎಂಬ ಬಿರುದಿನೊಂದಿಗೆ ಇತಿಹಾಸದಲ್ಲಿ ಮರೆಯಲಾಗದ ಹೆಸರನ್ನು ಗಳಿಸಿದವನು. ಈತನ ಕಾಲದಲ್ಲಿದ್ದ ಎಲ್ಲ ಸಾಮಾಜಿಕ ಸನ್ನಿವೇಶಗಳೊಂದಿಗೆ ಈತನ ಕಥನವನ್ನು ಹೇಳುತ್ತದೆ ಈ ಕೃತಿ. 

About the Author

ಮಹೇಶ್ ಕುಮಾರ್ ಸಿ.ಎಸ್
(25 May 1982)

ಲೇಖಕ, ಸಂಶೋಧಕ, ಪ್ರಕಾಶಕರೂ ಆಗಿರುವ ಮಹೇಶ್ ಕುಮಾರ್ ಸಿ.ಎಸ್ ಅವರು ಮೂಲತಃ ಬೆಂಗಳೂರಿನ ಚಿಕ್ಕನಹಳ್ಳಿ ಗ್ರಾಮದವರು. ಬೆಂಗಳೂರಿನ ಕ್ರೈಸ್ಟ್ ಕಾಲೇಜಿನಲ್ಲಿ ಎಂ.ಎ ಪದವಿ ಪಡೆದ ಮಹೇಶ್ ಅವರು ಯೂರೋಪ್ ಬೆಲ್ಜಿಯಂನ ಫೆಂಟ್ ವಿಶ್ವವಿದ್ಯಾನಿಲಯದಿಂದ ಫೇಲೋಶಿಪ್ ಪಡೆದು. ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ಪಿ.ಎಚ್.ಡಿ ಪೂರ್ಣಗೊಳಿಸಿದ್ದಾರೆ. ಜೊತೆಗೆ ಭಾರತ ಸರಕಾರದ ವಿಶ್ವವಿದ್ಯಾಲಯದ ಧನ ಸಹಾಯ ಆಯೋಗದಿಂದ ಡಾ. ರಾಧಕೃಷ್ಣ 2015-17ನೇ ಸಾಲಿನಲ್ಲಿ ಪೋಸ್ಟ್ ಡಾಕ್ಟ್ರಲ್ ಫೆಲೋ ಆಗಿ ಆಯ್ಕೆಯಾಗಿದ್ದರು. ಕಳೆದ 13 ವರ್ಷಗಳಿಂದ ಇಸ್ಲಾಂ ಮತ್ತು ಭಾರತೀಯ ಸಂಪ್ರದಾಯಗಳ ಒಡನಾಟದ ಬಗೆಗೆ ಸಂಶೋಧನೆ ನಡೆಸುತ್ತಿರುವ ಮಹೇಶ್ ಅವರು ಈ ವಿಚಾರವಾಗಿ ಎರಡು ...

READ MORE

Related Books