ಟು ಸರ್‌ ವಿತ್‌ ಲವ್‌

Author : ಚಂದ್ರಶೇಖರ್ ಆಲೂರು

Pages 143




Year of Publication: 2022
Published by: ಸಂಕಥನ ಪ್ರಕಾಶನ
Address: ಸಂಕಥನ #72 , ಭೂಮಿಗೀತ 6 ನೇ ತಿರುವು, ಉದಯಗಿರಿ ಮಂಡ್ಯ – 571401.
Phone: 9019529494

Synopsys

ಲೇಖಕ ಅವರ ಅನುವಾದ ಸಂಗ್ರಹ ಕೃತಿ ʻಟು ಸರ್‌ ವಿತ್‌ ಲವ್‌ʼ. ಮೂಲ ಕೃತಿ 1959ರಲ್ಲಿ ಪ್ರಕಟವಾದ ಇ.ಆರ್.‌ ಬ್ರೈತ್‌ವೈಟ್ ಅವರು ಬರೆದ ಆತ್ಮಚರಿತ್ರೆಯ ಕಾದಂಬರಿ. ಮಾಜಿ ರಾಯಲ್ ಏರ್ ಫೋರ್ಸ್ ಪೈಲಟ್ ಮತ್ತು ಕೇಂಬ್ರಿಡ್ಜ್ ನ ವಿದ್ಯಾವಂತ ಇಂಜಿನಿಯರ್ ಬ್ರೈತ್‌ವೈಟ್ ಮಾಧ್ಯಮಿಕ ಶಾಲೆಯಲ್ಲಿ ಶಿಕ್ಷಕ ಹುದ್ದೆಯನ್ನು ಪಡೆಯುವಲ್ಲಿ ಎದುರಾದ ಅಡೆತಡೆಗಳು, ಬೆದರಿಕೆಗಳು, ಅಪಹಾಸ್ಯಗಳನ್ನೆಲ್ಲಾ ಎದುರಿಸಿ ಮುಂದೆ ಬಂದ ನೈಜ ಕಥೆಯನ್ನು ಕಾದಂಬರಿ ಹೇಳುತ್ತದೆ. ವಿದ್ಯಾರ್ಥಿಗಳಲ್ಲಿ ಒಳ್ಳೆಯ ಭಾವ ಮೂಡಿಸುತ್ತಾ ಅವರನ್ನು ಸರಿಯಾದ ದಾರಿಯಲ್ಲಿ ನಡೆಸುವಲ್ಲಿ ಶಿಕ್ಷಕನಾಗಿ ಅನುಸರಿಸಿದ ವಿಧಾನ, ಶ್ರಮಗಳನ್ನು ಇಲ್ಲಿ ಕಾಣಬಹುದು. ಜೊತೆಗೆ ಯುದ್ಧಾನಂತರದ ಲಂಡನ್‌ನಲ್ಲಿದ್ದ ಜನಾಂಗ ಮತ್ತು ವರ್ಗದ ರಾಜಕೀಯದ ಒಳನೋಟವನ್ನೂ 22 ಅಧ್ಯಾಯಗಳಲ್ಲಿ ಈ ಪುಸ್ತಕ ನೀಡುತ್ತದೆ.

About the Author

ಚಂದ್ರಶೇಖರ್ ಆಲೂರು

ಹುಟ್ಟಿದ್ದು ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಆಲೂರು. ತಂದೆ ಶ್ರೀ ಎ.ಎಚ್.ಲಿಂಗಯ್ಯ, ತಾಯಿ ಶ್ರೀಮತಿ ಅಂಕಮ್ಮ. ಏಳು ಸಹೋದರಿಯರು. ತಂದೆ ರೈಲ್ವೆ ಇಲಾಖೆಯಲ್ಲಿ ಸ್ಟೇಷನ್ ಮಾಸ್ಟರ್‌ ಆಗಿದ್ದರಿಂದ ರಾಜ್ಯದ ವಿವಿಧ ಕಡೆ ವಿದ್ಯಾಭ್ಯಾಸ. 1980 ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಎಂ.ಎ. 1981 ರಿಂದ 1990 ರವರೆಗೆ 'ಲಂಕೇಶ್ ಪತ್ರಿಕೆ'ಯಲ್ಲಿ; 1994 ರಿಂದ 1996ರ ವರೆಗೆ 'ಈ ವಾರ ಕರ್ನಾಟಕ'ದಲ್ಲಿ ವರದಿ, ಸಿನಿಮಾ ಅಂಕಣ, ಪ್ರಬಂಧ, ಕಥೆ, ವಿಮರ್ಶೆ ಇತ್ಯಾದಿ ಪ್ರಕಟ. 2000 ಜುಲೈನಿಂದ 'ಹಾಯ್ ಬೆಂಗಳೂರ್!' ಪತ್ರಿಕೆಯಲ್ಲಿ ಪ್ರತಿವಾರ “ಒಲಿದಂತೆ ಹಾಡುವೆ' ಅಂಕಣ. 2000ದಲ್ಲಿ ಅಮೆರಿಕಾ ...

READ MORE

Related Books