ತಿಮ್ಮಪ್ಪ ನಾಯಕ

Author : ಗೀತಾ ಕುಲಕರ್ಣಿ

Pages 102

₹ 15.00




Year of Publication: 1976
Published by: ರಾಷ್ಟ್ರೋತ್ಥಾನ ಸಾಹಿತ್ಯ
Address: ಕೇಶವ ಶಿಲ್ಪ, ಕೆಂಪೇಗೌಡ ನಗರ, ಬೆಂಗಳೂರು-560019.
Phone: 9945036300

Synopsys

`ತಿಮ್ಮಪ್ಪ ನಾಯಕ' ಅವರ ಜೀವನ ಚರಿತ್ರೆಯ ಪುಸ್ತಕವಿದು. ಲೇಖಕಿ ಗೀತಾ ಕುಲಕರ್ಣಿ ಅವರು ರಚಿಸಿದ್ದಾರೆ. ಈ ಕೃತಿಯಲ್ಲಿ, ದೇಶಸೇವೆ, ಬಡಬಗ್ಗರ ಸೇವೆ ಇವುಗಳಿಗಾಗಿಯೇ ಬದುಕಿದ ಮಹಾತ್ಯಾಗಿ. ಮದುವೆಯಾಗಲಿಲ್ಲ, ತಮ್ಮದೆಂಬ ಸಂಸಾರವಿಲ್ಲ. ಹರಿಜನರು, ಬಡವರು ಇವರೇ ಅವರ ಸಂಸಾರ. ಸ್ವಾತಂತ್ರ್ಯದ ಹೋರಾಟದಲ್ಲಿ ಮತ್ತೆ ಮತ್ತೆ ಸೆರೆಮನೆಗೆ ಹೋದರು. ಸ್ವತಂತ್ರ ಭಾರತದಲ್ಲಿ ಅಧಿಕಾರ, ಹಣ ಬಯಸಲಿಲ್ಲ. ಸೇವೆಯ ಚೇತನವಾಗಿ ಬೆಳಗಿದರು ಎಂದು ತಿಮ್ಮಪ್ಪ ನಾಯಕ ಅವರ ಕುರಿತಾಗಿ ಇಲ್ಲಿ ವಿವರಿಸಲಾಗಿದೆ. ತಿಮ್ಮಪ್ಪ ನಾಯಕ ಅವರ ಜೀವನದ ಏಳು-ಬೀಳುಗಳು, ದೇಶಸೇವೆ, ಸೆರೆಮೆನೆಯ ದಿನಗಳು ಹೀಗೆ ಅವರ ಬದುಕಿನ ಮುಖ್ಯ ಘಟ್ಟಗಳನ್ನು ಲೇಖಕರು ಇಲ್ಲಿ ಸರಳ ಕನ್ನಡದಲ್ಲಿ ವಿವರಿಸಿದ್ದಾರೆ.

About the Author

ಗೀತಾ ಕುಲಕರ್ಣಿ
(04 July 1927 - 01 May 1986)

ಸಣ್ಣ ಕತೆಗಳ ಮುಖಾಂತರ ಸಾಹಿತ್ಯ ರಚನೆಯನ್ನು ಪ್ರಾರಂಭಿಸಿದ ಗೀತಾ ಕುಲಕರ್ಣಿಯವರು ಹುಟ್ಟಿದ್ದು 1927 ಜೂನ್ 04 ರಂದು ಮುಂಬಯಿಯಲ್ಲಿ.  ಅವರು ಮಂಗಳೂರಿನ ಕೆ.ಟಿ ಆಳ್ವ ಅವರ ಪುತ್ರಿ. ಮೂಲ ಹೆಸರು ಅಹಲ್ಯಾ. ಅಹಲ್ಯಾ ಅವರೇ ಮುಂದೆ ಹಲವಾರು ಕಾದಂಬರಿಗಳನ್ನು ಬರೆದು ಗೀತಾ ಕುಲಕರ್ಣಿ ಎಂದೇ ಪ್ರಸಿದ್ಧರಾಗುತ್ತಾರೆ. ಅನೇಕ ಕಾದಂಬರಿಗಳು, ಮಕ್ಕಳ ಸಾಹಿತ್ಯ, ವ್ಯಕ್ತಿಚಿತ್ರ, ಪ್ರವಾಸಸಾಹಿತ್ಯ, ವಿಡಂಬನೆ ಎಲ್ಲವೂ ಸೇರಿ ಸುಮಾರು 25 ಕ್ಕೂ ಹೆಚ್ಚು ಕೃತಿ ರಚಿಸಿದ್ದಾರೆ. ಧೈರ್ಯ, ನಿಸ್ಸಂಕೋಚದ ಸ್ವಭಾವದ, ಎಂತಹ ಸಂದರ್ಭದಲ್ಲೂ ಎದೆಗುಂದದೆ ನಿಭಾಯಿಸುವ ಛಾತಿಯ ಗುಣದ ಕತೆ-ಕಾದಂಬರಿಕಾರ್ತಿ ಗೀತಾ ಕುಲಕರ್ಣಿಯವರಿಗೆ ‘ಸುವರ್ಣೆಯ  ಗ್ರೀನ್‌ ರೂಂ’ ಕತೆ ಪ್ರಕಟವಾದ ...

READ MORE

Related Books