ತೊಂಡು ಮೇವು-1

Author : ಕೆ.ವಿ. ನಾರಾಯಣ

Pages 370

₹ 350.00




Year of Publication: 2017
Published by: ಪ್ರಗತಿ ಗ್ರಾಫಿಕ್ಸ್‌
Address: 119, 3ನೇ ಅಡ್ಡರಸ್ತೆ, 8ನೇ ಮುಖ್ಯರಸ್ತೆ, ಹಂಪಿನಗರ, ಆರ್.ಪಿ.ಸಿ. ಲೇಔಟ್, ವಿಜಯನಗರ 2ನೇ ಹಂತ ಬೆಂಗಳೂರು-560104
Phone: 080-23409512

Synopsys

ಹಿರಿಯ ಲೇಖಕ, ವಿಮರ್ಶಕ, ಚಿಂತಕ ಕೆ.ವಿ. ನಾರಾಯಣ ಅವರ ಇದುವರೆಗಿನ ಬರೆಹಗಳನ್ನು ಹತ್ತು ಸಂಪುಟಗಳಲ್ಲಿ ಪ್ರಕಟಿಸಲಾಗಿದೆ. ತೊಂಡುಮೇವು ಸಂಪುಟಗಳ ಮೊದಲನೆಯ ಕಂತೆ ಇದು. ಈ ಸಂಪುಟದಲ್ಲಿ ಕಾವ್ಯ ಮೀಮಾಂಸೆ, ಸಾಹಿತ್ಯ ಮೀಮಾಂಸೆ, ಸಾಹಿತ್ಯದ ಸ್ವರೂಪವನ್ನು ಕುರಿತು ನಡೆಸಿದ ಚಿಂತನೆಗಳನ್ನು ಕುರಿತ ಬರೆಹಗಳನ್ನು ಒಳಗೊಂಡಿದೆ. ಸಾಹಿತ್ಯ ಸಂಶೋಧನೆಯ ತಾತ್ವಿಕತೆ, ಪರಿಕಲ್ಪನೆ, ಶೈಲಿಶಾಸ್ತ್ರ, ಧ್ವನಿತತ್ವ, ಕನ್ನಡ ಮೀಮಾಂಸೆ ಕಟ್ಟುವ ಬಗೆ,  ಗ್ರೀಕ್ ಕಾವ್ಯತತ್ವ, ದೇಸಿ ಓದು, ಕುವೆಂಪು, ಬೇಂದ್ರೆ, ತಿನಂಶ್ರೀ, ಬಿಎಂಶ್ರೀ, ಶಿವರಾಮ ಕಾರಂತ, ಶಂಕರ ಮೊಕಾಶಿ ಪುಣೇಕರ್‍ ಅವರ ಸಾಹಿತ್ಯದ ಮೀಮಾಂಸೆಯನ್ನು ರೂಪಿಸುವ ನಿಟ್ಟಿನಲ್ಲಿ ಲೇಖಕರು ನಡೆಸಿದ ಅಪರೂಪದ ಮತ್ತು ಮಹತ್ವದ ಪ್ರಯತ್ನ ಇಲ್ಲಿನ ಬರೆಹಗಳಲ್ಲಿ ಢಾಳಾಗಿ ಎದ್ದು ಕಾಣಿಸುತ್ತದೆ. ಮೀಮಾಂಸೆಯ ಕ್ಷೇತ್ರದಲ್ಲಿ ಇದುವರೆಗೆ ಪ್ರಕಟವಾದ ಕನ್ನಡದ ಸರಿಸುಮಾರು ೩೦೦ಕ್ಕೂ ಗ್ರಂಥಗಳ ಪಟ್ಟಿಯನ್ನು ಅನುಬಂಧದಲ್ಲಿ ನೀಡಲಾಗಿದೆ. ಸಾಹಿತ್ಯ-ಸಂಸ್ಕೃತಿ ಚಿಂತನೆಯಲ್ಲಿ ಆಸಕ್ತರಾಗಿರುವವರಿಗೆ ಈ ಪುಸ್ತಕ ಪ್ರಿಯವಾಗುತ್ತದೆ.

 

About the Author

ಕೆ.ವಿ. ನಾರಾಯಣ
(20 October 1948)

ಕಂಪಲಾಪುರ ವೀರಣ್ಣ ನಾರಾಯಣ ಅವರು ಜನಿಸಿದ್ದು 1948ರಲ್ಲಿ. ಮೈಸೂರು ಜಿಲ್ಲೆ, ಪಿರಿಯಾಪಟ್ಟಣ ತಾಲ್ಲೂಕು ಕಂಪಲಾಪುರ. ಅಮ್ಮ ಕೆಂಚಮ್ಮ ಮತ್ತು ಅಪ್ಪ ವೀರಣ್ಣ. ಮೊದಲ ಹಂತದ ಓದು ಪುತ್ತೂರು ಮತ್ತು ತಾಲ್ಲೂಕು ಕೇಂದ್ರ ಪಿರಿಯಾಪಟ್ಟಣದಲ್ಲಿ. ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ವಿಜ್ಞಾನವನ್ನು ತೆಗೆದುಕೊಂಡು ಪಿ.ಯು.ಸಿ. ಓದಿದರು. ಇಂಜಿನಿಯರಿಂಗ್ ಮಾಡಲು ಅವಕಾಶವಿದ್ದರೂ ಎಂಜಿನಿಯರ್ ಆಗಕೂಡದೆಂದು ತೀರ್ಮಾನಿಸಿದ ಕೆ.ಎ.ಎಸ್ ಮತ್ತೆ ಮೈಸೂರಿನ ಯುವರಾಜ ಕಾಲೇಜಿನಲ್ಲಿ ವಿಜ್ಞಾನದ ಅಭ್ಯಾಸವನ್ನು ಮುಗಿಸಿದರು. ಆನಂತರದಲ್ಲಿ ಬಿ.ಎಡ್. ಮುಗಿಸಿ ಆರಂಭಿಸಿದ್ದು ಹೈಸ್ಕೂಲಿನಲ್ಲಿ ಅಧ್ಯಾಪನ. ಮುಂದಿನ ಓದಿಗಾಗಿ ಮತ್ತೆ ಬೆಂಗಳೂರಿನತ್ತ ಪಯಣ. ಆ ಹೊತ್ತಿಗೇನೆ ಸಾಹಿತ್ಯದ ಓದಿಗೂ ಬಿದ್ದು ಬರವಣಿಗೆಯಲ್ಲೂ ...

READ MORE

Related Books