ಟ್ರೈನ್ ಟು ಪಾಕಿಸ್ತಾನ್

Author : ಚಿದಾನಂದ ಸಾಲಿ

Pages 75

₹ 60.00




Year of Publication: 2017
Published by: ಈಶ್ವರ್. ಕು. ಮಿರ್ಜಿ
Address: ರಿಜಿಸ್ಟ್ರಾರ್, ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಕಲಾಗ್ರಾಮ, ಜ್ಞಾನ ಭಾರತಿ, ಬೆಂಗಳೂರು ವಿಶ್ವವಿದ್ಯಾಲಯ ಆವರಣದ ಹಿಂಭಾಗ, ಮಲ್ಲತ್ತಹಳ್ಳಿ, ಬೆಂಗಳೂರು - 560056
Phone: 08023183311

Synopsys

ಭಾರತೀಯ ಪತ್ರಕರ್ತ, ಲೇಖಕರಾದ ಖುಷ್ವಂತ್ ಸಿಂಗ್ ಅವರ ಕಾದಂಬರಿ ’ ಟ್ರೈನ್ ಟು ಪಾಕಿಸ್ತಾನ್’. ಭಾರತ ಸ್ವಾತಂತ್ರ್ಯ ಗಳಿಸಿದ ಕಾಲದಲ್ಲೇ ಸಂಭವಿಸಿದಂತಹ ಭೀಕರ ಹಿಂಸಾತ್ಮಕ ಘಟನೆಗಳ ಜೊತೆಯಲ್ಲೇ ಉಕ್ಕುವ ಪ್ರೀತಿಯ ಒರತೆಯನ್ನು, ಸೂಕ್ಷ್ಮವಾಗಿ ಶೋಧಿಸುವ ಈ ಕಾದಂಬರಿ ಕನ್ನಡದ ಮಟ್ಟಿಗೆ, ಹೊಸ ಪ್ರಯೋಗದೊಂದಿಗೆ ರಚನೆಯಾಗಿದೆ. ಹಿಂಸೆ, ಮನುಷ್ಯ ಸಂಬಂಧಗಳ ತೊಳಲಾಟವನ್ನು ನಾಟಕ ರೂಪದಲ್ಲಿ ಕಟ್ಟಿಕೊಟ್ಟವರು ಕನ್ನಡದ ಲೇಖಕ, ಕವಿಯಾದ ಚಿದಾನಂದ ಸಾಲಿಯವರು. ಕನ್ನಡ ನಾಟಕಕ್ಕೆ ಒಂದು ಬಗೆಯ ಹೊಸ ಕಾಣಿಕೆ ಇದು. 

ಭಾರತೀಯ ಭಾಷೆಗಳ ಉತ್ತಮ ನಾಟಕಗಳನ್ನು ಕನ್ನಡಿಗರಿಗೆ ಪರಿಚಯಿಸಲು ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಶ್ರಮಿಸಿದುದರ ಫಲ ಈ ಕೃತಿ. ಸಂಪಾದಕೀಯ ಜವಾಬ್ದಾರಿ ಹೊತ್ತಿರುವವರು ಡಾ. ನಟರಾಜ್ ಹುಳಿಯಾರ್ ಮತ್ತು ನಟರಾಜ ಹೊನ್ನವಳ್ಳಿ.  

About the Author

ಚಿದಾನಂದ ಸಾಲಿ

ಕವಿ-ಕತೆಗಾರ- ಅನುವಾದಕ ಚಿದಾನಂದ ಸಾಲಿ ಅವರು ಮೂಲತಃ ರಾಯಚೂರು ಜಿಲ್ಲೆಯ ಸಿರವಾರದವರು.  ಗಣಿತಶಾಸ್ತ್ರದಲ್ಲಿ ಎಂಎಸ್ಸಿ, ಪತ್ರಿಕೋದ್ಯಮ, ಕನ್ನಡದಲ್ಲಿ  ಎಂ.ಎ. ಪದವಿ ಪಡೆದಿರುವ ಅವರು ಎಂಫಿಲ್, ಪಿಜಿಡಿಎಚ್ ಇ ಮತ್ತು ಪಿಜಿಡಿಎಚ್ ಆರ್ ಎಂ ಪದವೀಧರರು. ಕೆಲಕಾಲ ಪತ್ರಕರ್ತರಾಗಿದ್ದ ಅವರು ಸರ್ಕಾರಿ ಪ್ರೌಢಶಾಲೆಯ ಗಣಿತ ಶಿಕ್ಷಕರು. ಪ್ರಜಾವಾಣಿ ಕಥಾಸ್ಪರ್ಧೆ, ಕ್ರೈಸ್ಟ್‌ ಕಾಲೇಜ್ ಕಾವ್ಯಸ್ಪರ್ಧೆ, ಕನ್ನಡಪ್ರಭ ಕಥಾಸ್ಪರ್ಧೆ, ಸಂಕ್ರಮಣ ಕಾವ್ಯಸ್ಪರ್ಧೆ, ಸಂಚಯ ಕಾವ್ಯಸ್ಪರ್ಧೆ, ಪ್ರಜಾವಾಣಿ ಕಾವ್ಯಸ್ಪರ್ಧೆ ಮುಂತಾದವುಗಳಲ್ಲಿ ಬಹುಮಾನ ಪಡೆದಿದ್ದಾರೆ. ರೆ. ..(ಕವಿತೆ); ಮೌನ(ಕನ್ನಡ ಗಜಲ್); ಧರೆಗೆ ನಿದ್ರೆಯು ಇಲ್ಲ(ಕಥಾಸಂಕಲನ), ಚೌಕಟ್ಟಿನಾಚೆ (ಬೆಟ್ಟದೂರರ ಕಲಾಕೃತಿಗಳನ್ನು ಕುರಿತು); ಶಿಕ್ಷಣ ಮತ್ತು ಜೀವನಶೈಲಿ ...

READ MORE

Related Books