ಟ್ರಂಕು ತಟ್ಟೆ

Author : ಗುರುಪ್ರಸಾದ್‌ ಕಂಟಲಗೆರೆ

Pages 136

₹ 180.00
Year of Publication: 2023
Published by: ಚೈತನ್ಯ ಪ್ರಕಾಶನ
Address: ಹನುಮಂತಪುರ, 2ನೇ ಮುಖ್ಯರಸ್ತೆ, 1ನೇ ಅಡ್ಡರಸ್ತೆ, ತುಮಕೂರು
Phone: 9964076203

Synopsys

ಗುರುಪ್ರಸಾದ್ ಕಂಟಲಗೆರೆ ಅವರ ಹಾಸ್ಟೆಲ್ ಬದುಕಿನ ಅನುಭವ ಕಥನ ‘ಟ್ರಂಕು ತಟ್ಟೆ’. ಹಾಸ್ಟೆಲ್ ಜೀವನದ ಕುರಿತು ಅವರು ಕೆಂಡಸಂಪಿಗೆ ವೆಬ್ ಪತ್ರಿಕೆಗೆ ಬರೆದ ಅಂಕಣಗಳ ಸಂಕಲನ. ವಿದ್ಯಾರ್ಥಿ ಬದುಕಿನಲ್ಲಿ ಹಾಸ್ಟೆಲ್ ಅನ್ನುವುದು ಸ್ವಯಂ ಅನ್ವೇಷಣೆಯ ಮೊದಲ ಹೆಜ್ಜೆ. ಸಮಾನವಯಸ್ಕರ ಜೊತೆಗೆ ಬದುಕುವ ಅವಕಾಶಗಳು ಸಿಗುವುದರಿಂದ ಅಲ್ಲಿನ ನೋವು-ನಲಿವುಗಳೊಡನೆ ನವಿರು ಭಾವನೆಯೊಂದು ಸೇರಿಕೊಂಡಿರುತ್ತದೆ. ಎಳೆ ವಯಸ್ಸಿನಲ್ಲಿಯೇ ಹಾಸ್ಟೆಲ್ ಬದುಕಿಗೆ ತೆರೆದುಕೊಂಡ ಗುರುಪ್ರಸಾದ್ ಕಂಟಲಗೆರೆ ಬಾಲ್ಯದ ಮುಗ್ಧ ಕಂಗಳಲ್ಲಿ ಒರಟು ಚಿತ್ರಗಳನ್ನು ಕಂಡಿದ್ದಾರೆ. ಆ ನೆನಪುಗಳನ್ನು ಅವರು ಈ ಕೃತಿಯ ಮೂಲಕ ದಾಖಲಿಸಿದ್ದಾರೆ. ಕೃತಿಯ ಕುರಿತು ವಿವರಿಸುತ್ತಾ 'ಇಲ್ಲಿನ ಅನುಭವಗಳು ನನ್ನೊಬ್ಬನವೇ ಅಲ್ಲ. ಇವು ಘಟಿಸುವ ಕಾಲದಲ್ಲಿ ನಾನೂ ಇದ್ದೆ ಎಂಬುದೇ ಸತ್ಯ. ಬರೆದವನು ನಾನಾಗಿರಬಹುದು ಆದರೆ ಇಲ್ಲಿ ಬರುವ ಎಲ್ಲಾ ಪಾತ್ರಗಳಿಗೂ ಆಯಾ ಸನ್ನಿವೇಷ ಅಥವ ಅನುಭವದ ಮೇಲೆ ತನ್ನದೇ ಆದ ಹಕ್ಕು ಇದ್ದೇ ಇದೆ. ಅದಕ್ಕಾಗಿಯೇ ನಾನು ಈ ಅನುಭವ ಕಥನದ ಪ್ರಕಟಣೆಯ ಹೊಣೆಗಾರಿಕೆಯನ್ನು ನನ್ನ ಗೆಳಯರಿಗೇ ಬಿಟ್ಟುಬಿಟ್ಟೆ' ಎನ್ನುತ್ತಾರೆ ಗುರುಪ್ರಸಾದ್.

About the Author

ಗುರುಪ್ರಸಾದ್‌ ಕಂಟಲಗೆರೆ

ತಮ್ಮ ಅನುಭವಗಳನ್ನು ಗಟ್ಟಿಯಾಗಿ ಕಥೆಗಳ ಮೂಲಕ ದನಿಸಿದವರು ಗುರುಪ್ರಸಾದ್‌ ಕಂಟಲಗೆರೆ. ಮೂಲತಃ ತುಮಕೂರಿನ ಕಂಟಲಗೆರೆಯವರು. ವೃತ್ತಿಯಲ್ಲಿ ಶಿಕ್ಷಕರು. ತಮ್ಮ ವೃತ್ತಿಯೊಂದಿಗೆ ಸಾಹಿತ್ಯ ಪ್ರೇಮವನ್ನು ಸಮಾನವಾಗಿ ನಿರ್ವಹಿಸುತ್ತಿರುವವರು. ತಮ್ಮ ಸಂವೇದನೆಗಳನ್ನು ಅಚ್ಚರಿ ಎನ್ನುವಂತೆ ಅಚ್ಚಿಳಿಸುವ ಯುವ ಬರೆಹಗಾರ. ಪ್ರಜಾವಾಣಿ, ವಿಜಯಕರ್ನಾಟಕ ಕತಾ ಸ್ಪರ್ಧೆಗಳಲ್ಲಿ ಹಲವಾರು ಬಹುಮಾನ ಪಡೆದಿದ್ದಾರೆ. 2017 ನೇ ಸಾಲಿನ ‘ಅನನ್ಯ ಪ್ರಶಸ್ತಿ’ ಅವರ ’ಗೋವಿನ ಜಾಡು’ ಕತಾ ಸಂಕಲನಕ್ಕೆ ಲಭಿಸಿದೆ. ‘ದಲಿತ ಸಾಂಸ್ಕೃತಿಕ ಕಥನಗಳ ಅಧ್ಯಯನ’ ಅವರ ಮತ್ತೊಂದು ಕೃತಿ. ...

READ MORE

Related Books