ತ್ರಿಭಾಷಾ ಆಡಳಿತ ಪದಕೋಶ

Author : ಜೆ.ಬಾಲಕೃಷ್ಣ

Pages 1

₹ 1.00




Year of Publication: 2014
Published by: ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕನ್ನಡ ವಿಭಾಗ ಹಾಗೂ ನವದೆಹಲಿಯ ವೈಜ್ಞಾನಿಕ ಮತ್ತು ತಾಂತ್ರಿಕ ಶಬ್ದಾವಳಿ ಆಯೋಗ
Address: ಕನ್ನಡ ಅಧ್ಯಯನ ವಿಭಾಗ, ಕೃಷಿವಿಶ್ವವಿದ್ಯಾಲಯ ಜಿ.ಕೆ.ವಿ.ಕೆ., ಬೆಂಗಳೂರು 560065
Phone: 080-2333 0153

Synopsys

ಆಡಳಿತಕ್ಕೆ ಸಂಬಂಧಿಸಿದ ಪದವಿವರಣೆಯನ್ನು ಇಂಗ್ಲಿಷ್‌- ಕನ್ನಡ- ಹಿಂದಿ ಭಾಷೆಯಲ್ಲಿ ನೀಡುವ ಯತ್ನ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ್ದು. ಆಡಳಿತಾತ್ಮಕ ಪದಕೋಶಗಳು ಯಾವಾಗಲೂ ಸರ್ಕಾರದಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿಗೆ ಹಾಗೂ ಅನ್ಯಭಾಷಿಕ ಅಧಿಕಾರಿಗಳಿಗೆ ಉಪಯುಕ್ತ. ಅಲ್ಲದೆ ಆಡಳಿತದ ವಿವಿಧ ಸ್ತರಗಳಲ್ಲಿ ಪದಗಳು ಅರ್ಥ ವ್ಯತ್ಯಾಸವಾಗುವುದನ್ನುಇಂತಹ ಕೃತಿಗಳು ತಡೆದು ಏಕರೂಪತೆಯನ್ನು ತಂದುಕೊಡುತ್ತವೆ. 

ಕೃಷಿ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಜೆ. ಬಾಲಕೃಷ್ಣ ಪದಕೋಶವನ್ನು ಸಂಪಾದಿಸಿದ್ದಾರೆ. ಸಹ ಸಂಪಾದಕರು  ಡಾ. ಜಿ. ವೀರಭದ್ರೇಗೌಡ. 

About the Author

ಜೆ.ಬಾಲಕೃಷ್ಣ

ಬೆಂಗಳೂರಿನ ಕೃಷಿವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿರುವ ಡಾ.ಜೆ.ಬಾಲಕೃಷ್ಣ ಅವರು ಕೃಷಿ ಸೂಕ್ಷ್ಮಜೀವಿ ಶಾಸ್ತ್ರದಲ್ಲಿ ಸ್ನಾತಕೊತ್ತರ ಹಾಗೂ ಕನ್ನಡ ಕೃಷಿ ವಿಜ್ಞಾನ ಸಾಹಿತ್ಯದ ಅಧ್ಯಾಯನಕ್ಕೆ ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಪಡೆದಿದ್ದಾರೆ.ಕಾರ್‍ಟೋನಿಸ್ಟ್ ಆಗಿಯು ಗುರುತಿಸಿಕೊಂಡಿರುವ ಬಾಲಕೃಷ್ಣರವರ ಆಸಕ್ತಿಯ ಕ್ಷೇತ್ರಗಳು ಜೀವವೈವಿಧ್ಯದಷ್ಟೇ ವಿಸ್ತಾರವಾದವು. ವಿಜ್ಞಾನದಿಂದ ಮೊದಲ್ಗೊಂಡು ಸಾಹಿತ್ಯ,ಸೂಫಿ,ಝೆನ್,ತತ್ವದರ್ಶನದ ವರೆಗೂ ಅವರ ಜ್ಞಾನ ಹರಡಿಕೊಂಡಿದೆ. ...

READ MORE

Related Books